ಲೋಕಸಭಾ ಚುನಾವಣೆಗೆ 'ಮಹಾಮೈತ್ರಿ' ನಾಳೆ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತಪಡಿಸಲಿರುವ ಅಖಿಲೇಶ್​ ಯಾದವ್​, ಮಾಯಾವತಿ

ಎಸ್​ಪಿ ಹಾಗೂ ಬಿಎಸ್ಪಿಯ ಈ ಮಹಾಮೈತ್ರಿಯಿಂದಾಗಿ ರಾಜ್ಯದಲ್ಲಿ 25-30 ಸೀಟು ಕಳೆದುಕೊಳ್ಳಲಿದೆ ಎಂಬ ಲೆಕ್ಕಾಚಾರ ನಡೆಸಿದೆ

Seema.R | news18
Updated:January 11, 2019, 11:31 AM IST
ಲೋಕಸಭಾ ಚುನಾವಣೆಗೆ 'ಮಹಾಮೈತ್ರಿ' ನಾಳೆ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತಪಡಿಸಲಿರುವ ಅಖಿಲೇಶ್​ ಯಾದವ್​, ಮಾಯಾವತಿ
ಮಯಾವತಿ- ಅಖಿಲೇಶ್​
Seema.R | news18
Updated: January 11, 2019, 11:31 AM IST
ಕ್ವಾಸಿ ಫರಾಜ್​ ಅಹ್ಮದ್​

ಲಕ್ನೋ (ಜ.11): ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ದೂರವಿರಿಸಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಳ್ಳುವ ಕುರಿತು ಈಗಾಗಲೇ ಅಖಿಲೇಶ್​ ಯಾದವ್​, ಮಾಯಾವತಿ ಮಾತುಕತೆ ನಡೆಸಿದ್ದು, ಈ ಕುರಿತು ನಾಳೆ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸಲಿದ್ದಾರೆ.

ನಾಳೆ ಲಕ್ನೋನ ತಾಜ್​ ಹೋಟೆಲ್​ನಲ್ಲಿ ಇಬ್ಬರು ನಾಯಕರು ಪ್ರತಿಕಾಗೋಷ್ಠಿ ನಡೆಸುವ ಮೂಲಕ ತಮ್ಮ ಮಹಾ ಮೈತ್ರಿ ಕುರಿತು ತಿಳಿಸಲಿದ್ದಾರೆ.

ಈ ಮೊದಲು ಕಾಂಗ್ರೆಸ್​ ಜೊತೆ ಮೈತ್ರಿಗೆ ಮುಂದಾಗಿದ್ದ ಈ ನಾಯಕರು ಈಗ ಸೀಟು ಹಂಚಿಕೆ ಲೆಕ್ಕಾಚಾರ ನಡೆಸಿ ತಾವಿಬ್ಬರೆ ಬಿಜೆಪಿ ವಿರುದ್ಧ ಸೆಣಸಲು ಕೈಜೋಡಿಸಿದ್ದಾರೆ. ಬದ್ಧವೈರಿಗಳಾಗಿದ್ದ ಎರಡು ಪಕ್ಷದ ನಾಯಕರು  25 ವರ್ಷದ ಬಳಿಕ  ಈ ಮೈತ್ರಿಗೆ ಮುಂದಾಗಿದ್ದಾರೆ. ಇದಕ್ಕೆ ಮುಂಚೆ ಮುಲಾಯಂ ಸಿಂಗ್​ ಹಾಗೂ ಕಾನ್ಷಿ ರಾಮ್​  ಕೈ ಜೋಡಿಸುವ ಮೂಲಕ ಭಾರೀ ಜಯಭೇರಿ ದಾಖಲಿಸಿದ್ದರು.

ಮಾಯಾವತಿ ಹುಟ್ಟುಹಬ್ಬದ ದಿನ ಎರಡು ಪಕ್ಷದ ನಾಯಕರು ಒಟ್ಟಿಗೆ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ಸಾರಲಿದ್ದಾರೆ. ಇದೇ ವೇಳೆ ಅಖಿಲೇಶ್​ ಹೆಂಡತಿ ಹಾಗೂ ಕನೂಜ್​ ಸಂಸದೆ ಡಿಂಪಲ್​ ಯಾದವ್​ ಕೂಡ ತಮ್ಮ ಹುಟ್ಟು ಹಬ್ಬವನ್ನು ಬಿಎಸ್​ಪಿ ಮುಖ್ಯಸ್ಥೆ ಜೊತೆ ಆಚರಿಸಿಕೊಳ್ಳಲಿದ್ದಾರೆ.

ಕೆಲವು ನಿಯಮಗಳ ಆಧಾರದ ಮೇಲೆ ಅಖಿಲೇಶ್​ ಯಾಗೂ ಮಾಯಾವತಿ ಈ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್​ ಬಾಗಿಲನ್ನು ಮುಚ್ಚುವ ಕುರಿತು ಲೆಕ್ಕಾಚಾರ ನಡೆಸಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಎಸ್ಪಿ- ಬಿಎಸ್ಪಿ ತಲಾ 37 ಸ್ಥಾನ ಹಂಚಿಕೆ ಮಾಡಿಕೊಳ್ಳುವ ಮೂಲಕ ಕೇವಲ ಎರಡು ಸ್ಥಾನವನ್ನು ಮಾತ್ರ ಕಾಂಗ್ರೆಸ್​ಗೆ ಬಿಟ್ಟುಕೊಂಡಲು ನಿರ್ಧರಿಸಿದ್ದಾರ ಎಂದು ಮೂಲಗಳು ತಿಳಿಸಿವೆ. ಸೋನಿಯಾ ಹಾಗೂ ರಾಹುಲ್​ ಗಾಂಧಿ ಪ್ರತಿನಿಧಿಸುವ ಕ್ಷೇತ್ರಗಳಾದ ರಾಯ್​ ಬರೇಲಿ ಹಾಗೂ ಅಮೇಥಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಂತೆ ಎರಡು ಪಕ್ಷಗಳು ನಿರ್ಧರಿಸಿದೆ
Loading...

ಇನ್ನು ಈ ಕುರಿತು ಮಾತನಾಡಿರುವ ಅಖಿಲೇಶ್​ ಚಿಕ್ಕಪ್ಪ ಹಾಗೂ ಅವರ ನಿಕಟವರ್ತಿಯಾಗಿರುವ ರಾಮ್​​ ಗೋಪಲ್​ ಯಾದವ್​, ಯಾಕೆ ಕಾಲ್ಪನಿಕ ವಿಷಯಗಳ ಬಗ್ಗೆ ಮಾತನಾಡುತ್ತೀರಾ?  ಮೊದಲು ಇಲ್ಲಿ ಏನಾಗುತ್ತಿದೆ ಎಂಬುದು ಹಾಗೂ  ಮೈತ್ರಿ ಕುರಿತು ಅರ್ಥ ಮಾಡಿಕೊಳ್ಳಿ  ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಉತ್ತರಪ್ರದೇಶ: ಪೊಲೀಸ್ ಠಾಣೆಯ ಎದುರೇ ಗುಂಡಿಕ್ಕಿ ವ್ಯಕ್ತಿಯ ಹತ್ಯೆ!

ಈ ಮಹಾ ಮೈತ್ರಿಯಿಂದಾಗಿ ಬಿಜೆಪಿ 25-30 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 80ರಲ್ಲಿ 73 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಈ ಮಹಾಮೈತ್ರಿ ಹಿಂದುಳಿದ, ದಲಿತ ಹಾಗೂ ಮುಸ್ಲಿ ಮತಗಳನ್ನು ಪಡೆಯುವಲ್ಲಿ ಸಫಲವಾಗಿದ್ದನ್ನು ಮರೆಯುವಂತಿಲ್ಲ.

ಇನ್ನು  ಮಯಾವತಿ- ಅಖಿಲೇಶ್​ ಮೈತ್ರಿಗೆ ಮುಂದಾಗಿದ್ದ ದಿನವೇ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಅಖಿಲೇಶ್​ ಯಾದವ್​ ಮೇಲೆ ಕೇಂದ್ರ ಸಿಬಿಐ ತನಿಖೆ ಆರಂಭಿಸಿರುವುದು ರಾಜಕೀಯ ಮೇಲಾಟ ಎಂದು ಯಾದವ್​ ಆರೋಪಿಸಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ