Flight: ಗುಜರಾತ್​​ನಲ್ಲಿ ತಪ್ಪಿದ ಭಾರೀ ವಿಮಾನ ದುರಂತ

Mumbai-Bhuj flight: ಇನ್ನು ಈ ಘಟನೆ ಸಂಭವಿಸಿದ ವಿಮಾನದಲ್ಲಿ 70 ಜನರಲ್ಲಿ ನಾಲ್ವರು ಸಿಬ್ಬಂದಿ ಮತ್ತು ಒಬ್ಬ ವಿಮಾನ ನಿರ್ವಹಣಾ ಎಂಜಿನಿಯರ್ ಇದ್ದರು ಎನ್ನಲಾಗಿದೆ.

 ಮುಂಬೈ ಭುಜ್ ವಿಮಾನ

ಮುಂಬೈ ಭುಜ್ ವಿಮಾನ

 • Share this:
  ವಿಮಾನ (Flight)ಪ್ರಯಾಣ ಅಂದರೆ ಎಷ್ಟೋ ಜನಕ್ಕೆ ಭಯ(Fear) ಇರುತ್ತದೆ.ಯಾಕಂದರೆ ಆಕಾಶದಲ್ಲಿ(Sky) ಹಾರುವಾಗಲೇ ಅನಾಹುತಗಳು ಸಂಭವಿಸಿದರೆ ಎನ್ನುವ ಆತಂಕ ಎಲ್ಲರಲ್ಲೂ ಕಾಡುತ್ತಿರುತ್ತದೆ.. ಇದಕ್ಕೆ ಸಾಕ್ಷಿಯೆನ್ನುವಂತೆ ಎಷ್ಟೋ ವಿಮಾನಗಳು ಟೇಕ್ ಆಫ್(Take Off) ಆದ ಕೆಲವೇ ಕ್ಷಣಗಳಲ್ಲಿ ಅನಾಹುತ ಸಂಭವಿಸಿರುವ ಘಟನೆ ನಡೆದಿದೆ.ಹೀಗಾಗಿ ವಿಮಾನ ನಿಲ್ದಾಣದ ಸಿಬ್ಬಂದಿಗಳು ವಿಮಾನ ಬಗ್ಗೆ ಹಾರುವ ಮುಂಚೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಇರುತ್ತಾರೆ.. ಹೀಗಿದ್ದರೂ ಸಹ ಕಣ್ತಪ್ಪಿನಿಂದ ಅಚಾತುರ್ಯಗಳು ನಡೆಯುತ್ತಲೇ ಇರುತ್ತವೆ.. ಈಗ ನಡೆದಿರುವ ಇಂತಹ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೌದು ಮುಂಬೈ ವಿಮಾನ ನಿಲ್ದಾಣದಿಂದ(Mumba Airport) ಗುಜರಾತ್​ಗೆ(Gujarat) 70 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಲಯನ್ಸ್ ಏರ್ ವಿಮಾನವು ಎಂಜಿನ್ ಕವರ್(ಕೌಲ್​) ಇಲ್ಲದೆಯೇ ಹಾರಾಟ ನಡೆಸಿದ ಘಟನೆ ನಡೆದಿದೆ.

  ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ ಗುಜರಾತ್​ಗೆ ಪ್ರಯಾಣ ಬೆಳೆಸಿದ ಅಲಯನ್ಸ್​ ಏರ್​ ಎಟಿಆರ್​ 72-600 ವಿಮಾನವು ಗುಜರಾತ್​ನ ಭುಜ್​ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಈ ವೇಳೆ, ವಿಮಾನದ ಎಂಜಿನ್​ ಮೇಲಿನ ಕವರ್​ ಕಳಚಿ ಬಿದ್ದಿತ್ತು. ಈ ಕವರ್​ ಮುಂಬೈ ವಿಮಾನ ನಿಲ್ದಾಣದಲ್ಲಿಯೇ ಕಳಚಿದ್ದು, ಇದು ಪೈಲಟ್​ ಅಲ್ಲದೇ ವಿಮಾನ ನಿಲ್ದಾಣ ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ. ಅದೃಷ್ಟವಶಾತ್ ವಿಮಾನದ ಇಂಜಿನ್ ಕವರ್ ಕಳಚಿಬಿದ್ದಿದ್ದವು ಯಾವುದೇ ಪ್ರಾಣಾಪಾಯವಾಗಿಲ್ಲ.

  ಇದನ್ನೂ ಓದಿ: ಭೂಮಿಯತ್ತ ಧಾವಿಸುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ.. ಮಾರ್ಚ್ 4ರಂದು ಏನಾಗುತ್ತೆ?

  ಪೈಲೆಟ್ ಗಳ ಗಮನಕ್ಕೆ ಬಾರದೆ ಅನಾಹುತ

  ಕೌಲಿಂಗ್ ಕಳಚಿಬಿದ್ದಿದ್ದು ವಿಮಾನ ಹಾರಿಸುತ್ತಿದ್ದ ಪೈಲಟ್ ಗಳ ಗಮನಕ್ಕೆ ಬಂದಿಲ್ಲ ಮತ್ತು ಭುಜ್ ನಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್​ಗೆ ಎಲ್ಲ ಸರಿಯಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು ಅಂತ ತಿಳಿಸಿದ್ದಾರೆ. ವಿಮಾನ ನಭಕ್ಕೆ ಹಾರಿದ ಬಳಿಕ ರನ್ವೇದಲ್ಲಿ ಟೇಕ್‌ಆಫ್ ಚಟುವಟಿಕೆ ಮೇಲೆ ನಿಗಾ ಇಡುವ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಪರಿಶೀಲಿಸಿದಾಗ ರನ್ವೇನಲ್ಲಿ ವಿಮಾನದ ಭಾಗವೊಂದು ಬಿದ್ದಿದ್ದು ಕಂಡು ಬಂದಿತ್ತು.

  ನಂತರ, ಮುಂಬೈ ಎಟಿಸಿ ಭುಜ್‌ಗೆ ಹೋಗುವ ವಿಮಾನದ ಪೈಲಟ್‌ಗಳನ್ನು ಸಂಪರ್ಕಿಸಿ ವಿಮಾನದಿಂದ ಏನಾದರೂ ಬಿದ್ದಿದೆಯೇ ಎಂದು ಕೇಳಿದ್ದಾರೆ. ಪೈಲಟ್‌ಗಳು ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಅದಾದ ಮೇಲೆ ವಿಮಾನ ಯಾವುದೇ ತೊಂದರೆಯಿಲ್ಲದೆ ಭುಜ್‌ನಲ್ಲಿ ಇಳಿದಿದೆ. ಮುಂದಿನ ಹಾರಾಟಕ್ಕೆ ಮೊದಲು ಇದೇ ವಿಮಾನದ ರೂಟೀನ್ ಮೇಲ್ವಿಚಾರಣೆ ನಡೆದಾಗ, ನಿರ್ವಹಣಾ ಸಿಬ್ಬಂದಿಗೆ ಇಂಜಿನ್ ಕೌಲ್ ಕಾಣೆಯಾದ ಬಗ್ಗೆ ಗೊತ್ತಾಗಿದೆ,' ಎಂದು ವಿಮಾನ ನಿಲ್ದಾಣದ ನಿರ್ದೇಶಕ ನವನೀತ್ ಕುಮಾರ್ ಗುಪ್ತಾ ಹೇಳಿದ್ದಾರೆ.

  ಇನ್ನು ವಿಮಾನದ (ATR72-600 ವಿಮಾನ VT RKJ, ಆಪರೇಟಿಂಗ್ ಫ್ಲೈಟ್ 9I-625) ಇಂಜಿನ್ ಗೆ ಮುಚ್ಚಲಾಗಿದ್ದ ಕವರ್ ಅಥವಾ ಕೌಲಿಂಗ್ ಟೇಕಾಫ್ ಆಗುತ್ತಿದ್ದಂತೆ ಗಾಳಿಗೆ ಕೆಳಕ್ಕೆ ಬಿದ್ದಿದ್ದು ಹೇಗೆ ಎನ್ನುವುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವಿಮಾನ ಟೇಕಾಫ್ ಆಗುವಾಗ ಮತ್ತು ಇಳಿಯುವಾಗ ದಾಖಲಾಗಿರುವ ವಾಯ್ಸ್ ರೆಕಾರ್ಡರ್ ಪರಿಶೀಲಿಸಲು ಡಿಜಿಸಿಎ ಮುಂದಾಗಿದೆ. ಇನ್ನು ರೀತಿ ಇಂಜಿನ್‌ ಭಾಗ ಗಾಳಿಗೆ ಪ್ರದರ್ಶನಗೊಳ್ಳುವುದರಿಂದ ಇಂಜಿನ್‌ ಭಾಗಗಳಿಗೆ ತಾಂತ್ರಿಕ ಸಮಸ್ಯೆ ಉಂಟಾಗಬಹುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಮೂಲಗಳು ತಿಳಿಸಿದೆ. ಹಾಗೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಕ್ಕೂ ಡಿಜಿಸಿಎ ಆದೇಶಿಸಿದೆ.

  ಕಳಪೆ ನಿರ್ವಹಣೆ ಘಟನೆಗೆ ಕಾರಣ

  ಕಳಪೆ ನಿರ್ವಹಣೆಯೇ ಘಟನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಲ್ಯಾಚ್​ಗಳನ್ನು ಸರಿಯಾಗಿ ಭದ್ರಪಡಿಸಿರದಿದ್ದರೆ ಕೌಲ್​ಗಳು ಬೇರ್ಪಡುವ ಸಾಧ್ಯತೆಯಿರುತ್ತದೆ ಇದು ನಿರ್ವಹಣೆಯ ನಂತರದ ಚಟುವಟಿಕೆಗಳಲ್ಲಿ ಸಂಭವಿಸುವಂಥದ್ದು. ವಿಮಾನವನ್ನು ಪ್ರಾರಂಭಿಸುವ ಮೊದಲು ಇಂಜಿನ್ ಕೌಲ್ ಅನ್ನು ಇರಿಸಲಾಗಿದೆಯೇ ಎಂದು ಸಿಬ್ಬಂದಿ ಖಚಿತಪಡಿಸಿಕೊಳ್ಳುತ್ತಾರೆ,' ಎಂದು ವಿಮಾನಯಾನ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಹೇಳಿದ್ದಾರೆ.

  ಇದನ್ನೂ ಓದಿ: ಈ ದೇಶಗಳಲ್ಲಿ ಹಿಜಾಬ್​ ಬ್ಯಾನ್​! ಒಂದು ವೇಳೆ ಧರಿಸಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತಾ?

  ಇನ್ನು ಈ ಘಟನೆ ಸಂಭವಿಸಿದ ವಿಮಾನದಲ್ಲಿ  70 ಜನರಲ್ಲಿ ನಾಲ್ವರು ಸಿಬ್ಬಂದಿ ಮತ್ತು ಒಬ್ಬ ವಿಮಾನ ನಿರ್ವಹಣಾ ಎಂಜಿನಿಯರ್ ಸೇರಿದ್ದರು ಎನ್ನಲಾಗಿದೆ. ಸದ್ಯ ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಅಪಾಯ ಆಗದೇ ಎಲ್ಲರೂ ಸುರಕ್ಷಿತವಾಗಿದ್ದಾರೆ.
  Published by:ranjumbkgowda1 ranjumbkgowda1
  First published: