ಪುದುಕೋಟ್ಟೈನಲ್ಲಿ 7 ವರ್ಷದ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ; ನೆರೆಮನೆಯವನ ಮೇಲೆ ಅನುಮಾನ

ಬಾಲಕಿಯ ಮೈಮೇಲೆ ಹಲವು ಗಾಯಗಳಾಗಿರುವುದು ಕಂಡು ಬಂದಿದೆ. ಈಕೆಯನ್ನ ಕೊಲ್ಲುವ ಮುನ್ನ ಅತ್ಯಾಚಾರ ಆಗಿರಬಹುದು ಎಂಬುದು ಪೊಲೀಸರ ಸಂದೇಹ. ಪ್ರಕರಣ ದಾಖಲಿಸಿಕೊಂಡಿರುವ ಅವರು ಸದ್ಯಕ್ಕೆ ಒಬ್ಬ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅತ್ಯಾಚಾರ

ಅತ್ಯಾಚಾರ

 • Share this:
  ಚೆನ್ನೈ(ಜುಲೈ 02): ಎರಡು ದಿನಗಳ ಹಿಂದೆ ಕಾಣೆಯಾಗಿದ್ದ 7 ವರ್ಷದ ಬಾಲಕಿಯೊಬ್ಬಳು ನಿನ್ನೆ ಶವವಾಗಿ ಪತ್ತೆಯಾಗಿರುವ ಸಂಗತಿ ಪುದುಕೋಟ್ಟೈ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಹುಡುಗಿಯನ್ನ ರೇಪ್ ಮಾಡಿ ಕೊಲ್ಲಲಾಗಿರಬಹುದು ಎಂದು ಶಂಕಿಸಿರುವ ಪೊಲೀಸರು, ಆ ಬಾಲಕಿಯ ಪಕ್ಕದ ಮನೆಯ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ.

  ಮಂಗಳವಾರದಂದು ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ ಕಾಣೆಯಾಗಿದ್ದಳು. ಆಕೆಯ ಪೋಷಕರು ಅದೇ ದಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಟುಂಬ ಸದಸ್ಯರು ಮತ್ತು ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ವಿವಿಧೆಡೆ ಆ ಬಾಲಕಿಗಾಗಿ ಶೋಧ ಮಾಡಿದ್ದರು. ಮರು ದಿನ ಕೊಳವೊಂದರಲ್ಲಿ ಬಾಲಕಿಯ ಶವ ಸಿಕ್ಕಿದೆ.

  ಇದನ್ನೂ ಓದಿ: ಶವಾಗಾರದಲ್ಲಿ ಜಾಗದ ಕೊರತೆ; 50 ಗಂಟೆ ಐಸ್​ಕ್ರೀಂ ಫ್ರೀಜರ್​ನಲ್ಲಿತ್ತು ವೃದ್ಧನ ಮೃತದೇಹ!  ಬಾಲಕಿಯ ಮೈಮೇಲೆ ಹಲವು ಗಾಯಗಳಾಗಿರುವುದು ಕಂಡು ಬಂದಿದೆ. ಈಕೆಯನ್ನ ಕೊಲ್ಲುವ ಮುನ್ನ ಅತ್ಯಾಚಾರ ಆಗಿರಬಹುದು ಎಂಬುದು ಪೊಲೀಸರ ಸಂದೇಹ. ಪ್ರಕರಣ ದಾಖಲಿಸಿಕೊಂಡಿರುವ ಅವರು ಸದ್ಯಕ್ಕೆ ಬಾಲಕಿಯ ಪಕ್ಕದ ಮನೆಯಲ್ಲೇ ವಾಸವಿರುವ 25 ವರ್ಷದ ವ್ಯಕ್ತಿಯನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.
  First published: