HOME » NEWS » National-international » ALLEGATIONS OF SHACKLED STUDENTS AND GANG RAPE INSIDE CHINAS DETENTION CAMPS STG LG

ಚೀನಾದ ಡಿಟೆನ್ಷನ್ ಕ್ಯಾಂಪ್​​ನೊಳಗೆ ಸಾಮೂಹಿಕ ಅತ್ಯಾಚಾರ; ವಿದ್ಯಾರ್ಥಿಗಳನ್ನು ಕಟ್ಟಿಹಾಕಿದ ಸೈನಿಕರು..?

ಉಜ್ಬೇಕ್ ಮೂಲದ ಸಿಡಿಕ್, ಕ್ಸಿನ್ಜಿಯಾಂಗ್ನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 28 ವರ್ಷಗಳ ಕಾಲ ಶಿಕ್ಷಕಿಯಾಗಿದ್ದರು. ಈ ವೇಳೆ ಡಿಟೆನ್ಷನ್ ಕ್ಯಾಂಪ್ನೊಳಗೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಮಾರ್ಚ್ 2017 ರಲ್ಲಿ, ಮೊದಲ ಬಾರಿ ವಿದ್ಯಾರ್ಥಿಗಳನ್ನು ಭೇಟಿಯಾದಾಗ ಅವರನ್ನು ಚೈನ್ನಲ್ಲಿ ಕಟ್ಟಿಹಾಕಲಾಗಿತ್ತು ಎಂದೂ ತಿಳಿಸಿದ್ದಾರೆ. ಅಲ್ಲದೆ, ಮಹಿಳಾ ಬಂಧಿತರು ಜೋರಾಗಿ ಅಳುತ್ತಿದ್ದರು ಎಂದೂ ಆರೋಪಿಸಿದ್ದಾಳೆ.

news18-kannada
Updated:February 21, 2021, 11:33 AM IST
ಚೀನಾದ ಡಿಟೆನ್ಷನ್ ಕ್ಯಾಂಪ್​​ನೊಳಗೆ ಸಾಮೂಹಿಕ ಅತ್ಯಾಚಾರ; ವಿದ್ಯಾರ್ಥಿಗಳನ್ನು ಕಟ್ಟಿಹಾಕಿದ ಸೈನಿಕರು..?
ಪ್ರಾತಿನಿಧಿಕ ಚಿತ್ರ
  • Share this:
ಕ್ಸಿನ್ಜಿಯಾಂಗ್​ನ ಚೀನಾದ ಸರ್ಕಾರ ನಡೆಸುವ ಬಂಧನ ಕೇಂದ್ರವೊಂದರಲ್ಲಿ ತನ್ನ ಹೊಸ ಬೋಧನಾ ಕೆಲಸದ ಮೊದಲ ದಿನ, ಇಬ್ಬರು ಸೈನಿಕರು ಯುವ ಉಯಿಘರ್ ಮಹಿಳೆಯನ್ನು ಕಟ್ಟಡದಿಂದ ಸ್ಟ್ರೆಚರ್ನಲ್ಲಿ ಕರೆದೊಯ್ಯುವುದನ್ನು ನೋಡಿದ್ದಾಗಿ ಖೆಲ್ಬಿನೂರ್ ಸಿಡಿಕ್ ಎಂಬ ಮಹಿಳೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಖೆಲ್ಬಿನೂರ್ ಸಿಡಿಕ್ ಹೇಳಿದ್ದಾರೆ. ಅಲ್ಲದೆ, 2017 ರಲ್ಲಿ ಕ್ಸಿನ್ಜಿಯಾಂಗ್​​ನ ಎರಡು ಬಂಧನ ಕೇಂದ್ರಗಳಲ್ಲಿ ಹಲವಾರು ತಿಂಗಳು ತನಗೆ ಬೋಧನೆ ಮಾಡಲು ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ತಾನು ನೋಡಿದ ಘಟನೆಗಳು ತುಂಬಾ ಗೊಂದಲ ಹಾಗೂ ಆತಂಕಕ್ಕೀಡು ಮಾಡಿತ್ತು ಎಂದು ಆರೋಪಿಸಿದ್ದಾರೆ.

ಮಹಿಳಾ ಬಂಧಿತರನ್ನು ಇರಿಸಿದ್ದ ಭಾರೀ ಭದ್ರತೆಯ ಕಟ್ಟಡದಲ್ಲಿ ಮೂರು ತಿಂಗಳು ಶಿಕ್ಷಕಿಯಾಗಿ ನಿಯೋಜನೆಗೊಂಡಿದ್ದ ಈಕೆ, ಮಹಿಳೆಯರು ಮೃತಪಟ್ಟಿರುವುದನ್ನು, ಅತ್ಯಾಚಾರಕ್ಕೊಳಗಾಗಿರುವುದು, ಹಿಂಸೆ ಮಾಡಿರುವುದು ಮುಂತಾದ ಘಟನೆಗಳು ನಡೆದಿರುವ ಬಗ್ಗೆ ಕೇಳಿದ್ದೇನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ, ಬಂಧಿತರಿಗೆ ಸರಿಯಾದ ಆಹಾರ, ನೀರು ಕೊಡುತ್ತಿರಲಿಲ್ಲ ಎಂದೂ ಆರೋಪಿಸಿದ್ದಾಳೆ.

ಮಹಿಳೆ ಭಾರಿ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ಒಮ್ಮೆ ಪೊಲೀಸ್ ಮಹಿಳೆ ಹೇಳಿದ್ದನ್ನು ಕೇಳಿದ್ದೇನೆ ಎಂದು ಆಕೆ ಆರೋಪಿಸಿದ್ದಾಳೆ. ಅಲ್ಲದೆ, ತನ್ನ ಮೇಲಾಧಿಕಾರಿಗಳಿಂದ ಕೇಂದ್ರದಲ್ಲಿ ಅತ್ಯಾಚಾರದ ವರದಿಗಳನ್ನು ತನಿಖೆ ಮಾಡಲು ನಿಯೋಜಿಸಲಾಗಿದೆ ಎಂದು ಪೊಲೀಸ್ ಮಹಿಳೆ ಹೇಳಿದ್ದಾರೆ ಎಂದು ಆರೋಪಿಸಿದ್ದಾಳೆ. ಅವಳು ಕೇಳಿದ ಮತ್ತು ಸ್ವತಃ ನೋಡಿದ ವಿಷಯವು ತುಂಬಾ ಗೊಂದಲಕ್ಕೊಳಗಾಗಿದೆ ಮತ್ತು ಅದು ಅವಳನ್ನು ಅಸ್ವಸ್ಥಗೊಳಿಸಿತು ಎಂದೂ ಸಿಡಿಕ್ ಹೇಳಿಕೊಂಡಿದ್ದಾಳೆ. ಆದರೆ, ಈ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಸಿಎನ್ಎನ್ ಹೇಳಿದೆ.

ತುಮಕೂರು: ಕನ್ನಡ ಬಾರದ ಉಪವಿಭಾಗಧಿಕಾರಿಯಿಂದ ಗ್ರಾಮ ವಾಸ್ತವ್ಯ ಸಂಪೂರ್ಣ ವಿಫಲ

ಚೀನಾದ ವಿಶಾಲ ಬಂಧನ ಜಾಲದೊಳಗೆ ಅತ್ಯಾಚಾರ ಮತ್ತು ವ್ಯವಸ್ಥಿತ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಜಿ ಬಂಧಿತರು ಸಹ ಇದೇ ರೀತಿ ಆರೋಪಗಳನ್ನು ಮಾಡಿದ್ದರು. ಸಾಮೂಹಿಕ ಬಂಧನ, ಚಿತ್ರಹಿಂಸೆ, ಬಲವಂತದ ಜನನ ನಿಯಂತ್ರಣ ಮತ್ತು ಗರ್ಭಪಾತದ ದಮನಕಾರಿ ಅಭಿಯಾನದ ಮೂಲಕ ಚೀನಾ ಉಯ್ಘರ್ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನರಮೇಧವನ್ನು ಮಾಡುತ್ತಿದೆ ಎಂದು ಯುಎಸ್ ಸರ್ಕಾರ ಆರೋಪಿಸಿತ್ತು. ಈಗ ಬಂಧನ ಕೇಂದ್ರಗಳೊಳಗಿನ ಕಾರ್ಮಿಕರ ನೇರ ಜೀವನದ ಅನುಭವದ ಬಗ್ಗೆ ಸಿಡಿಕ್ ಹೇಳಿರುವುದು ಅಪರೂಪದ ಪ್ರಕರಣ ಎನಿಸಿದೆ.

ಆದರೂ, ತನ್ನ ಪುರುಷ ಸಹೋದ್ಯೋಗಿಗಳು ಇಂತಹ ಘಟನೆಗಳ ಬಗ್ಗೆ ಹೇಗೆ ಹೆಮ್ಮೆಪಡುತ್ತಿದ್ದರು ಎಂದು ಮಹಿಳಾ ಪೊಲೀಸ್ ಅಧಿಕಾರಿ ತನಗೆ ಹೇಳಿದ್ದರು ಎಂದೂ ಹೇಳಿಕೊಂಡಿದ್ದಾಳೆ. ಜತೆಗೆ, ಪುರುಷ ಕಾವಲುಗಾರರು ರಾತ್ರಿಯ ವೇಳೆ ಕುಡಿಯುವಾಗ ಹುಡುಗಿಯರ ಮೇಲೆ ಹೇಗೆ ಅತ್ಯಾಚಾರ ಮತ್ತು ಹಿಂಸೆ ನೀಡುತ್ತಾರೆ ಎಂಬುದನ್ನು ಪೊಲೀಸರು ಒಬ್ಬರಿಗೊಬ್ಬರು ಹೇಳುತ್ತಿದ್ದರು" ಎಂದು ಸಿಡಿಕ್ ನೆದರ್ಲೆಂಡ್ಸ್ನಲ್ಲಿ ಸಿಎನ್ಎನ್ಗೆ ಹೇಳಿಕೆ ನೀಡಿದ್ದಾರೆ.

ಉಜ್ಬೇಕ್ ಮೂಲದ ಸಿಡಿಕ್, ಕ್ಸಿನ್ಜಿಯಾಂಗ್ನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 28 ವರ್ಷಗಳ ಕಾಲ ಶಿಕ್ಷಕಿಯಾಗಿದ್ದರು. ಈ ವೇಳೆ ಡಿಟೆನ್ಷನ್ ಕ್ಯಾಂಪ್ನೊಳಗೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಮಾರ್ಚ್ 2017 ರಲ್ಲಿ, ಮೊದಲ ಬಾರಿ ವಿದ್ಯಾರ್ಥಿಗಳನ್ನು ಭೇಟಿಯಾದಾಗ ಅವರನ್ನು ಚೈನ್ನಲ್ಲಿ ಕಟ್ಟಿಹಾಕಲಾಗಿತ್ತು ಎಂದೂ ತಿಳಿಸಿದ್ದಾರೆ. ಅಲ್ಲದೆ, ಮಹಿಳಾ ಬಂಧಿತರು ಜೋರಾಗಿ ಅಳುತ್ತಿದ್ದರು ಎಂದೂ ಆರೋಪಿಸಿದ್ದಾಳೆ.ಫಿಟ್ ಆಗಿದ್ದ ಜನರು ಸಹ ಬಂಧನ ಕೇಂದ್ರದೊಳಗೆ ಹೋದ ಕೆಲ ಸಮಯದಲ್ಲೇ ವೀಕ್ ಆಗುತ್ತಿದ್ದರು. ಒಂದು ಶಿಬಿರದ ನೆಲಮಾಳಿಗೆಯಲ್ಲಿರುವ ತನ್ನ ತರಗತಿಯಿಂದ, ಸಿಡಿಕ್ ಅವರು ಕಿರುಚಾಟಗಳನ್ನು ಕೇಳುತ್ತಿದ್ದರು. ಈ ಬಗ್ಗೆ ಕೇಳಿದಾಗ ಬಂಧಿತರನ್ನು ಹಿಂಸಿಸಲಾಗುತ್ತಿದೆ ಎಂದು ಒಬ್ಬ ಪುರುಷ ಪೊಲೀಸ್ ಹೇಳಿದ್ದಾಗಿ ಮಹಿಳೆ ಹೇಳುತ್ತಾಳೆ.

"ನಾನು ಅಲ್ಲಿ ಬೋಧಿಸುತ್ತಿದ್ದ ಸಮಯದಲ್ಲಿ, ನಾನು ಭಯಾನಕ ದುರಂತಕ್ಕೆ ಸಾಕ್ಷಿಯಾಗಿದ್ದೇನೆ" ಎಂದು ಸಿಡಿಕ್ ಹೇಳಿದರು.

ಶಿಬಿರಗಳು "ವೃತ್ತಿಪರ ತರಬೇತಿ ಕೇಂದ್ರಗಳು" ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ, ಇದು ಹಿಂಸಾತ್ಮಕ ಇಸ್ಲಾಮಿಸ್ಟ್ ಉಗ್ರವಾದವನ್ನು ತೊಡೆದುಹಾಕಲು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಅಧಿಕೃತ ಕಾರ್ಯತಂತ್ರದ ಭಾಗವಾಗಿದೆ ಎಂದು ವಾದ ಮಾಡಿದೆ.
Published by: Latha CG
First published: February 21, 2021, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories