ಉತ್ತರ ಪ್ರದೇಶ: ಮಹಾರಾಜಿನ್ ಬುವಾ (Maharajin Bua) ಉತ್ತರ ಪ್ರದೇಶದ (Uttar Pradesh) ಅಲಹಾಬಾದ್ ಮತ್ತು ಸುತ್ತಮುತ್ತಲಿನ ಹಳೆಯ ಜನರು ಮಹಾರಾಜಿನ್ ಬುವಾ ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಆದರೆ ದೇಶದಲ್ಲಿ ಇವರ ಹೆಸರು ಕೆಲವರಿಗಷ್ಟೆ ತಿಳಿದಿದೆ. ಆದರೆ ಅವರು ಮಾಡಿದ ಕೆಲಸವನ್ನು ತಿಳಿಯುವುದಕ್ಕಾಗಿಯಾದರೂ ಅವರ ಬಗ್ಗೆ ಓದುವ ಅಗತ್ಯವಿದೆ. ಮಹಾರಾಜಿನ್ ಬುವಾ ನಿಜವಾದ ಹೆಸರು ಗುಲಾ ದೇವಿ. ಮಹಾರಾಜಿನ್ ಎಂಬುದು ಅತ್ಯುತ್ತಮ ಸಾಧನೆ ಮಾಡುವವರಿಗೆ ಗೌರವಯುತವಾಗಿ ಜನರು ನೀಡುವ ಬಿರುದಾಗಿದೆ. ಬುವಾ ಅವರು 80 ವರ್ಷಗಳ ಕಾಲ ಸ್ಮಶಾನದಲ್ಲಿ (Burial Ground) ಕೆಲಸ ಮಾಡಿದ್ದು, ಬರೋಬ್ಬರಿ 11 ಲಕ್ಷಕ್ಕೂ ಹೆಚ್ಚು ಮೃತ ದೇಹಗಳ ಅಂತ್ಯ ಸಂಸ್ಕಾರಕ್ಕೆ (Cremation) ಕೈ ಜೋಡಿಸಿದ್ದಾರೆ. ಅದಕ್ಕಾಗಿ ಅವರಿಗೆ ಮಹಾರಾಜಿನ್ ಬುವಾ ಎಂದು ಕರೆಯಲಾಗುತ್ತಿದೆ.
ಬ್ರಾಹ್ನಣ ಸಮುದಾಯದ ಮಹಿಳೆ
ಬುವಾ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆ. ಕೇವಲ 9ನೇ ವಯಸ್ಸಿಗೆ ಮದುವೆಯಾಗಿ 11ನೇ ವಯಸ್ಸಿನಲ್ಲಿ ಸ್ಮಶಾನದಲ್ಲಿ ಈ ವಿಶೇಷ ಸಮಾಜಸೇವೆ ಮಾಡಲು ಆರಂಭಿಸಿದ್ದರು ಎನ್ನುವುದು ವಿಶೇಷ. ಮಹಾರಾಜಿನ್ ಬುವಾ ಅವರ ನಿಜವಾದ ಹೆಸರು ಗುಲಾ ದೇವಿ. ಸನಾತನ ಸಂಸ್ಕೃತಿಯ ಪ್ರಕಾರ ಮಹಿಳೆಯರು ಸ್ಮಶಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ ಗುಲಾ ದೇವಿ ಚಿಕ್ಕ ವಯಸ್ಸಿನಲ್ಲೇ ಅಂದರೆ ಕೇವಲ 11ನೇ ವಯಸ್ಸಿನಲ್ಲಿ ಸಮಾಜಸೇವೆ ಮಾಡಲು ನಿರ್ಧರಿಸಿದ್ದರು. ಅವರ ಅಪ್ಪ ಮತ್ತು ಅಜ್ಜ ಇದನ್ನು ಬಲವಾಗಿ ವಿರೋಧಿಸಿದ್ದರು, ಆದರೆ ಗುಲಾ ದೇವಿ ಮಾತ್ರ ಯಾರ ಮಾತನ್ನು ಕೇಳದೆ ತಮ್ಮ ಕಾಯಕವನ್ನು ಮುಂದುವರಿಸಿದರು ಎಂದು ಅವರು ಕಿರಿಯ ಮಗ ಹೇಳಿದ್ದಾರೆ.
ಅಪಹಾಸ್ಯ ಮಾಡಿದರೂ ಕುಗ್ಗದಾ ಮಹಾರಾಜಿನ್
ತಮ್ಮ ತಾಯಿಯ ಈ ಕೆಲಸಕ್ಕೆ ಅನೇಕರು ಅಪಹಾಸ್ಯ ಮಾಡಿದ್ದರು. ಆದರೆ ಅಮ್ಮನ ಸಂಕಲ್ಪ ದೃಢವಾಗಿತ್ತು. ಯಾವುದಕ್ಕೂ ಅವರೂ ತಲೆಕೆಡಿಸಿಕೊಳ್ಳಲಿಲ್ಲ. ಅವರು 1911 ರಲ್ಲಿ ಜನಿಸಿದ ಅವರು 91 ವರ್ಷಗಳವರೆಗೆ ಬದುಕಿದ್ದರು, ಅವರು 2002ರಲ್ಲಿ ನಿಧನರಾದರು ಎಂದು ಮಗ ತಿಳಿಸಿದ್ದಾರೆ.
ಯಾರ ಬಳಿಯೂ ಹಣ ಕೇಳುತ್ತಿರಲಿಲ್ಲ
ತಾಯಿ ಹಗಲು ರಾತ್ರಿ ಎನ್ನದೇ ಶವ ಸಂಸ್ಕಾರ ಮಾಡುತ್ತಿದ್ದರು. ಸಮಯ ಸಿಕ್ಕಾಗ ಮನೆಗೆ ಬರುತ್ತಿದ್ದರು. ಅವರೂ ಎಂದಿಗೂ ಶವ ಸಂಸ್ಕಾರಕ್ಕೆ ಪ್ರತಿಯಾಗಿ ಹಣ ಕೇಳಿರಲಿಲ್ಲ. ಆರ್ಥಿಕವಾಗಿ ದುರ್ಬಲರಾಗಿರುವ ಬಡವರಿಗೆ ನೆರವಾಗುವುದು ಅವರ ಗುರಿಯಾಗಿತ್ತು. ಬಡವರ ಕಾರ್ಯಗಳು ಸುಲಭವಾಗಿ ನಡೆಯಲಿ ಎನ್ನುತ್ತಿದ್ದರು. ತಮ್ಮ ಕಾರ್ಯಕ್ಕೆ ಪ್ರತಿಯಾಗಿ ಯಾರ ಬಳಿಯೂ ಹಣಕ್ಕೆ ಬೇಡಿಕೆಯಿಡದ ಆಕೆ ತನಗೆ ಸಿಕ್ಕಿದ್ದನ್ನು ಸ್ವೀಕರಿಸುತ್ತಿದ್ದಳು ಎಂದು ಜಗದೀಶ್ ಹೇಳಿಕೊಂಡಿದ್ದಾರೆ. 80 ವರ್ಷಗಳ ಈ ಸೇವೆಯಲ್ಲಿ ಅವರು 11 ಲಕ್ಷಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ ಎಂದು ಮಗ ತಿಳಿಸಿದ್ದಾರೆ.
ಗಂಡಸರ ಕಾರ್ಯ ನಿರ್ವಹಿಸುತ್ತಿದ್ದರು
ಅಮ್ಮ ಗಂಡಸರಂತೆ ಪ್ರತಿಯೊಂದು ಕೆಲಸಗಳನ್ನೂ ಮಾಡುತ್ತಿದ್ದರು. ಅವರ ದಿನಚರಿಯು100 ಕ್ಕೂ ಹೆಚ್ಚು ದಂಡಗಳನ್ನು ಒಡೆಯುವುದು, ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಶುರುವಾಗುತ್ತಿತ್ತು. ಇದರಿಂದ ಅವರು ಪುರುಷರಂತೆಯೇ ಶಕ್ತಿವಂತರಾಗಿದ್ದರು. ಆತ್ಮರಕ್ಷಣೆಗಾಗಿ ಅಮ್ಮ ವಿಶೇಷ ರೀತಿಯ ಆಯುಧಗಳನ್ನು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದಳು. ಮೂರ್ನಾಲ್ಕು ಗಂಡಸರು ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸುವ ಸಂದರ್ಭಗಳು ಅನೇಕ ಬಾರಿ ಬಂದಿದ್ದವು, ಆದರೆ ಅಮ್ಮನ ಈ ಕಲೆಗಳು ಅವರನ್ನ ರಕ್ಷಿಸಿದ್ದವು, ಮತ್ತು ಪ್ರತಿಬಾರಿಯೂ ಎದುರಾಳಿಗಳನ್ನು ಮಣ್ಣು ಮುಕ್ಕಿಸಿ ಕಳುಹಿಸಿದ್ದರು ಎಂದು ಮಗ ಅಮ್ಮನ ಸಾಹಸಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News: ಬಲ್ಗೇರಿಯಾದಲ್ಲಿ 'ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್' ಪ್ರಶಸ್ತಿ ಗೆದ್ದ ಭಾರತದ ಬೆಡಗಿ!
ಪ್ರತಿಮೆ ಅನಾವರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ
ರಸಗುಲ್ಲಾ ಘಾಟ್‌ನಲ್ಲಿ ಮಹಾರಾಜಿನ್ ಬುವಾ ಹೆಸರಿನಲ್ಲಿ ಸ್ಮಶಾನವನ್ನು ನಿರ್ಮಿಸಲಾಗಿದೆ. ಘಾಟ್‌ನಿಂದ ಸ್ವಲ್ಪ ದೂರದಲ್ಲಿ ಅವರ ಪ್ರತಿಮೆಯನ್ನು ಸಹ ಮಾಡಲಾಗಿದೆ. ಆದರೆ ಅದು ಇನ್ನೂ ಅನಾವರಣಗೊಂಡಿಲ್ಲ. ಇದಕ್ಕಾಗಿ ಅವರ ಪುತ್ರ ಜಗದೀಶ್ ತಿವಾರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಶೇಷ ಕಾರ್ಯಕ್ಕಾಗಿ ಮಹಾರಾಜಿನ್ ಬುವಾ ಅವರಿಗೆ ಅನೇಕ ಪ್ರಶಸ್ತಿಗಳನ್ನು ಸಹ ನೀಡಲಾಗಿದೆ.crimination
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ