ಲಕ್ನೋದಲ್ಲಿ ಹಾಕಲಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಬ್ಯಾನರ್ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ

ಉತ್ತರಪ್ರದೇಶ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್​, ಇದು ವ್ಯಕ್ತಿಯ ವೈಯಕ್ತಿಯ ಸ್ವಾತಂತ್ರ್ಯ ಹರಣ ಎಂದು ಖಾರವಾಗಿ ಹೇಳಿದೆ. ಜೊತೆಗೆ ಮಧ್ಯಾಹ್ನ 3 ಗಂಟೆಯೊಳಗೆ ಹೋಲ್ಡಿಂಗ್ಸ್​ಗಳನ್ನು ತೆರವುಗೊಳಿಸುವಂತೆ ಹೇಳಿದೆ.

ಲಕ್ನೋದಲ್ಲಿ ಹಾಕಲಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಬ್ಯಾನರ್.

ಲಕ್ನೋದಲ್ಲಿ ಹಾಕಲಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಬ್ಯಾನರ್.

 • Share this:
  ಲಕ್ನೋ: ಉತ್ತರಪ್ರದೇಶ ರಾಜಧಾನಿ ಲಕ್ನೋ ನಗರದಲ್ಲಿ ಹಾಕಲಾಗಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಹೋಲ್ಡಿಂಗ್ಸ್​ಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಅಲಹಾಬಾದ್​ ಹೈಕೋರ್ಟ್ ಆದೇಶ ನೀಡಿದೆ. ಮತ್ತು ಈ ಸಂಬಂಧ ಮಾಡಲಾದ ಕೆಲಸದ ಬಗ್ಗೆ ಮಾರ್ಚ್ 16ರೊಳಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.

  ಈ ವಿಷಯವಾಗಿ ಭಾನುವಾರ ಸ್ವಹಿತಾಸಕ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಮತ್ತು ನ್ಯಾ.ರಮೇಶ್ ಸಿನ್ಹಾ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.

  ಲಕ್ನೋದಲ್ಲಿ 50 ಜನರನ್ನು ಗುರುತಿಸಿರುವ ಪೊಲೀಸರು ಅವರನ್ನು ದಂಗೆಕೋರರು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

  ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕಾರಣಿ ಸದಾಫ್ ಜಾಫರ್, ಮಾನವ ಹಕ್ಕು ಕಾರ್ಯಕರ್ತ ಮೊಹಮ್ಮದ್ ಶೋಯೆಬ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್​ಆರ್ ದರಾಪುರಿ ಅವರ ಭಾವಚಿತ್ರಗಳನ್ನು ಬ್ಯಾನರ್​ನಲ್ಲಿ ಹಾಕಲಾಗಿದೆ.

  ಉತ್ತರಪ್ರದೇಶ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್​, ಇದು ವ್ಯಕ್ತಿಯ ವೈಯಕ್ತಿಯ ಸ್ವಾತಂತ್ರ್ಯ ಹರಣ ಎಂದು ಖಾರವಾಗಿ ಹೇಳಿದೆ. ಜೊತೆಗೆ ಮಧ್ಯಾಹ್ನ 3 ಗಂಟೆಯೊಳಗೆ ಹೋಲ್ಡಿಂಗ್ಸ್​ಗಳನ್ನು ತೆರವುಗೊಳಿಸುವಂತೆ ಹೇಳಿದೆ.

  ಓದನ್ನು ಓದಿ: ಮಹಿಳಾ ವಿಶೇಷ; ಪ್ರಧಾನಿ ಮೋದಿ ಟ್ವಿಟರ್ ಖಾತೆಯಲ್ಲಿದೆ 7 ಸಾಧಕಿಯರ ಕಥೆ; ಇಲ್ಲಿದೆ ಜನ ಮೆಚ್ಚುಗೆ ಗಳಿಸಿದ ಸಾಧಕಿಯರ ಬದುಕು!

  ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.
  First published: