HOME » NEWS » National-international » ALL TOLL BOOTHS AT HIGHWAYS TO BE REMOVED IN A YEAR SAYS NITIN GADKARI SNVS

Toll Booth - ಇನ್ನೊಂದು ವರ್ಷದಲ್ಲಿ ಟೋಲ್ ಬೂತ್ ವ್ಯವಸ್ಥೆಯೇ ರದ್ದು: ಕೇಂದ್ರ ಸಾರಿಗೆ ಸಚಿವ

ಟೋಲ್ ಬೂತ್​ನಲ್ಲಿ ಹಣ ವಸೂಲಿ ಮಾಡುವ ಬದಲು ಫಾಸ್​ಟ್ಯಾಗ್ ಅವಳಡಿಕೆಯಿಂದಾಗಿ ಜಿಪಿಎಸ್ ಮೂಲಕವೇ ವಾಹನವನ್ನ ಟ್ರ್ಯಾಕ್ ಮಾಡಿ ಆಟೊಮ್ಯಾಟಿಕ್ ಆಗಿ ಸುಂಕ ವಸೂಲಿ ಮಾಡಲಾಗುತ್ತದೆ.

news18
Updated:March 19, 2021, 11:35 AM IST
Toll Booth - ಇನ್ನೊಂದು ವರ್ಷದಲ್ಲಿ ಟೋಲ್ ಬೂತ್ ವ್ಯವಸ್ಥೆಯೇ ರದ್ದು: ಕೇಂದ್ರ ಸಾರಿಗೆ ಸಚಿವ
ಟೋಲ್ ಬೂತ್
  • News18
  • Last Updated: March 19, 2021, 11:35 AM IST
  • Share this:
ನವದೆಹಲಿ(ಮಾ. 19): ಫಾಸ್​ಟ್ಯಾಗ್ ಇದ್ದರೂ ಹೆದ್ದಾರಿಯಲ್ಲಿನ ಟೋಲ್ ಬೂತ್​ಗಳಲ್ಲಿ ವಾಹನ ಸವಾರರು ಕಾಯುವ ಪ್ರಮೇಯ ತಪ್ಪಿಲ್ಲ. ಮುಂದಿನ ದಿನಗಳಲ್ಲಿ ಜನರ ಈ ಬವಣೆ ತಪ್ಪಲಿದೆ. ಇನ್ನೊಂದು ವರ್ಷದಲ್ಲಿ ಟೋಲ್ ಬೂತ್​ಗಳನ್ನೇ ಹೆದ್ದಾರಿಯಿಂದ ತೆಗೆದುಹಾಕಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೆ ಗಮನದಲ್ಲಿರಲಿ, ಇಲ್ಲಿ ಟೋಲ್ ಬೂತ್​ಗಳನ್ನಷ್ಟೇ ತೆಗೆದುಹಾಕಲಾಗುತ್ತದೆ. ಟೋಲ್​ಗಳ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಟೋಲ್ ಬೂತ್ ತೆಗೆದುಹಾಕುವುದರಿಂದ ಹೆದ್ದಾರಿಯಲ್ಲಿ ವಾಹನ ಸವಾರರು ಹೆಚ್ಚು ತಡೆಗಳಿಲ್ಲದೇ ಸುಗಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಕೇಂದ್ರ ಸಚಿವರು ನೀಡಿದ ಮಾಹಿತಿ ಪ್ರಕಾರ, ದೇಶದ ಶೇ. 93ರಷ್ಟು ವಾಹನಗಳ ಸವಾರರು ಫಾಸ್​ಟ್ಯಾಗ್ ಅಳವಡಿಸಿಕೊಂಡು ಆ ಮೂಲಕ ಟೋಲ್ ಪಾವತಿಸುತ್ತಿದ್ದಾರೆ. ಉಳಿದ ಶೇ. 7ರಷ್ಟು ಮಂದಿ ಫಾಸ್​ಟ್ಯಾಗ್ ಹಾಕಿಸಿಕೊಂಡಿಲ್ಲ. ಹೆದ್ದಾರಿ ಟೋಲ್ ಬೂತ್​ಗಳಲ್ಲಿ ಇವರು ಡಬಲ್ ಟೋಲ್ ಕಟ್ಟಿಕೊಂಡೇ ಪ್ರಯಾಣಿಸುತ್ತಿದ್ಧಾರೆ.

“ಇನ್ನೊಂದು ವರ್ಷದಲ್ಲಿ ದೇಶದಲ್ಲಿರುವ ಎಲ್ಲಾ ಟೋಲ್ ಬೂತ್​ಗಳನ್ನ ತೆಗೆದುಹಾಕಲಾಗುವುದು ಎಂದು ನಾನು ಈ ಸದನಕ್ಕೆ ಆಶ್ವಾಸನೆ ನೀಡುತ್ತೇನೆ. ಅಂದರೆ, ಜಿಪಿಎಸ್ ಮೂಲಕ ಟೋಲ್ ಹಣ ಪಡೆಯಲಾಗುತ್ತದೆ. ವಾಹನಗಳ ಮೇಲಿನ ಜಿಪಿಎಸ್ ಇಮೇಜಿಂಗ್ ಆಧಾರದ ಮೇಲೆ ಹಣವನ್ನು ಸಂಗ್ರಹಿಸಲಾಗುವುದು” ಎಂದು ಗುರುವಾರ ಲೋಕಸಭೆಯಲ್ಲಿ ನಡೆದ ಕಲಾಪದ ವೇಳೆ ನಿತಿನ್ ಗಡ್ಕರಿ ತಿಳಿಸಿದರು.

ಇದನ್ನೂ ಓದಿ: Indian Army Recruitment 2021: ಭಾರತೀಯ ಸೇನೆಯಲ್ಲಿ ಖಾಲಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೇ. 7ರಷ್ಟು ವಾಹನ ಸವಾರರು ಫಾಸ್​ಟ್ಯಾಗ್ ಅಳವಡಿಸಿಕೊಂಡಿಲ್ಲ. ಅಂಥ ವಾಹನಗಳನ್ನ ಪೊಲೀಸ್ ತನಿಖೆ ನಡೆಸುವಂತೆ ತಿಳಿಸಿದ್ದೇನೆ. ಇವು ಟೋಲ್ ಕಳ್ಳತನದ ಹಾಗು ಜಿಎಸ್​ಟಿ ತೆರಿಗೆ ವಂಚನೆ ಪ್ರಕರಣಗಳಾಗಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಈ ಹಿಂದೆ ಹೆದ್ದಾರಿಗಳಲ್ಲಿ ಟೋಲ್ ಬೂತ್​ಗಳಲ್ಲಿ ವಾಹನಗಳು ಟೋಲ್ ಕಟ್ಟಲು ನಿಮಿಷಗಟ್ಟಲೆ ಕಾಯಬೇಕಾಗಿತ್ತು. ಇದನ್ನು ಹೋಗಲಾಡಿಸಲು ಹಾಗೂ ಟೋಲ್ ಪಾವತಿ ವ್ಯವಸ್ಥೆಯನ್ನು ಸರಾಗಗೊಳಿಸಲು ಕೇಂದ್ರ ಸರ್ಕಾರ 2016ರಲ್ಲಿ ಫಾಸ್​ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿತು. ದ್ವಿಚಕ್ರ ಹೊರತುಪಡಿಸಿ ಉಳಿದ ವಾಹನಗಳಿಗೆ ಇದು ಅನ್ವಯ ಆಗುತ್ತದೆ. ಫಾಸ್​ಟ್ಯಾಗ್ ಸ್ಟಿಕರ್ ಅಂಟಿಸಿಕೊಂಡ ವಾಹನಗಳು ಹೆದ್ದಾರಿಗಳಲ್ಲಿ ಸುಂಕ ಪಾವತಿಸಲು ನಗದು ಹಣ ಕೊಡಬೇಕಿಲ್ಲ. ಮುಂಚಿತವಾಗಿಯೇ ಹಣವನ್ನು ರೀಚಾರ್ಜ್ ಮಾಡಿದರೆ ಟೋಲ್ ಬೂತ್​ಗಳಲ್ಲಿರುವ ಮೆಷೀನ್​ಗಳು ಫಾಸ್​ಟ್ಯಾಗನ್ನು ರೀಡ್ ಮಾಡುತ್ತವೆ. ಇದರಿಂದ ಟೋಲ್ ಬೂತ್​ಗಳಲ್ಲಿ ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿ ತಪ್ಪುತ್ತದೆ.

ಇದನ್ನೂ ಓದಿ: Coronavirus | ನೋಯ್ಡಾದಲ್ಲಿ 144 ಸೆಕ್ಷನ್ ಜಾರಿ; ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ನಿಯಮ ಪಾಲಿಸದಿದ್ದರೆ ಕಠಿಣ ಕ್ರಮಇದೇ ಫೆಬ್ರವರಿ 16ರಂದು ದೇಶಾದ್ಯಂತ ಈಗ ಫಾಸ್​ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಫಾಸ್​ಟ್ಯಾಗ್ ಅಳವಡಿಸಿಕೊಳ್ಳದವರು ಎರಡು ಪಟ್ಟು ಸುಂಕ ಪಾವತಿಸಬೇಕಾಗುತ್ತದೆ. ಆದರೂ ಶೇ. 7ರಷ್ಟು ವಾಹನಗಳು ಇನ್ನೂ ಫಾಸ್​ಟ್ಯಾಗ್ ಅಳವಡಿಸಿಕೊಂಡಿಲ್ಲ. ಈಗ ಶೋರೂಮ್​ನಿಂದ ಹೊರಬರುವ ಬಹುತೇಕ ವಾಹನಗಳಲ್ಲಿ ಮೊದಲೆ ಫಾಸ್​ಟ್ಯಾಗನ್ನು ಫಿಟ್ ಮಾಡಲಾಗಿರುತ್ತದೆ. ಹಳೆಯ ವಾಹನಗಳಿಗೆ ಉಚಿತವಾಗಿಯೇ ಫಾಸ್​ಟ್ಯಾಗ್ ಹಾಕಿಸಿಕೊಳ್ಳಬಹುದಾಗಿದೆ.

ಕೇಂದ್ರ ಸಚಿವರು ತಿಳಿಸಿದಂತೆ ಇನ್ನೊಂದು ವರ್ಷದಲ್ಲಿ ಭೌತಿಕವಾಗಿರುವ ಟೋಲ್ ಬೂತ್​ಗಳನ್ನ ತೆಗೆದುಹಾಕಿದ ಬಳಿಕ ವಾಹನಗಳು ಎಲ್ಲಿಯೂ ನಿಲ್ಲಿಸುವ ಪ್ರಮೇಯ ಬರುವುದಿಲ್ಲ. ವಾಹನಗಳಲ್ಲಿ ಹಾಕಲಾಗುವ ಜಿಪಿಎಸ್ ಮೂಲಕ ಸುಂಕವನ್ನು ಆಟೊಮ್ಯಾಟಿಕ್ ಆಗಿ ವಸೂಲಿ ಮಾಡಲಾಗುತ್ತದೆ. ಆದರೆ, ವಾಹನ ಸವಾರರು ಫಾಸ್​ಟ್ಯಾಗ್ ಅನ್ನು ರೀಚಾರ್ಜ್ ಮಾಡಿರಬೇಕಾಗುತ್ತದೆ.
Published by: Vijayasarthy SN
First published: March 19, 2021, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories