ಲಕ್ನೋ: ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ದುಷ್ಕರ್ಮಿಗಳು ದರೋಡೆಕೋರ ಕಂ ರಾಜಕಾರಣಿ ಅತೀಕ್ ಅಹ್ಮದ್ (Atiq ahmed) ಮತ್ತು ಆತನ ಸಹೋದರ ಅಶ್ರಫ್ (Ahraf) ಮೇಲೆ ಗುಂಡು ಹಾರಿಸಿ ನಿನ್ನೆ (Shoot out) ಕೊಲೆ ಮಾಡಿದ್ದರು. ಮಾಧ್ಯಮ ಮತ್ತು ಪೊಲೀಸರ ಮುಂದೆಯೇ ಇಂತಹ ಭಯಾನಕ ಕೃತ್ಯ ನಡೆದ ಬೆನ್ನಲ್ಲೇ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಪೊಲೀಸರು ವ್ಯಾಪಕ ಟೀಕೆಯನ್ನು ಎದುರಿಸುತ್ತಿದ್ದು, ರಾಜ್ಯದಲ್ಲಿ ಅಪರಾಧ ಕೃತ್ಯಗಳು ತಾಂಡವವಾಡಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ವಿರೋಧ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಈಗಾಗಲೇ ಶೂಟೌಟ್ ಮಾಡಿದ ದುಷ್ಕರ್ಮಿಗಳಾದ ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪರಾಧಿಗಳ ಹಿನ್ನೆಲೆ ಮತ್ತು ಪೂರ್ವಾಪರವನ್ನು ತಿಳಿಯಲು ತನಿಖೆ ಶುರು ಮಾಡಿದ್ದಾರೆ. ಪತ್ರಕರ್ತರಂತೆ ಫೋಸ್ ನೀಡಿದ ಆರೋಪಿಗಳು ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗಲೇ ಕೊಲೆ ಮಾಡಿದ್ದರು.
ಇದನ್ನೂ ಓದಿ: Atiq and Ashraf Shoot Dead: ಅತೀಕ್ ಅಹ್ಮದ್, ಅಶ್ರಫ್ ಶೂಟೌಟ್: ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್, ಒವೈಸಿ ವಾಗ್ದಾಳಿ
ಕುಟುಂಬದಿಂದ ಹೊರಗಟ್ಟಿದ್ದರು
ಇದೀಗ ಮೂವರು ದುಷ್ಕರ್ಮಿಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಬಂದಿದ್ದು, ಈಗಾಗಲೇ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳ ಪೈಕಿ ಓರ್ವನ ಕುಟುಂಬಸ್ಥರು ತಮಗೂ ಆತನಿಗೂ ಸಂಬಂಧವೇ ಇಲ್ಲ ಎಂದು ಕುಟುಂಬದಿಂದ ಕೈಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಲವ್ಲೇಶ್ ತಿವಾರಿ ಈ ಹಿಂದೆಯೂ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ. ಆತ ಆಗಾಗ ಮನೆಗೆ ಭೇಟಿ ನೀಡುತ್ತಿದ್ದರೂ ನಮ್ಮ ಕುಟುಂಬಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂದು ಲವ್ಲೇಶ್ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಅಪರಾಧಿ ಲವ್ಲೇಶ್‌ನ ತಂದೆ ಯಜ್ಞಾ ತಿವಾರಿ, ಅವನು ನನ್ನ ಮಗ, ನಾವು ಟಿವಿಯಲ್ಲಿ ನಿನ್ನೆ ನಡೆದ ಘಟನೆಯನ್ನು ನೋಡಿದ್ದೇವೆ, ನಮಗೆ ಲವ್ಲೇಶ್‌ನ ಕೃತ್ಯಗಳ ಬಗ್ಗೆ ತಿಳಿದಿಲ್ಲ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಅವನು ನಮ್ಮ ಮನೆಯಲ್ಲಿ ವಾಸಿಸುತ್ತಿರಲಿಲ್ಲ ಮತ್ತು ಅವನು ನಮ್ಮ ಕುಟುಂಬ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ಐದಾರು ದಿನಗಳ ಹಿಂದೆ ಆತ ಇಲ್ಲಿಗೆ ಬಂದಿದ್ದ. ನಾವು ಆತನೊಂದಿಗೆ ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಿಲ್ಲ. ಈಗಾಗಲೇ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್
14 ಪ್ರಕರಣ ದಾಖಲು
ಲವ್ಲೇಶ್ ತಿವಾರಿ ಕೆಲಸ ಮಾಡೋದಿಲ್ಲ. ಆತ ಮಾದಕ ವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನು ಮತ್ತೋವರ್ ಆರೊಫಿ ಸನ್ನಿ ಸಿಂಗ್ ವಿರುದ್ಧವೂ 14 ಪ್ರಕರಣಗಳು ದಾಖಲಾಗಿದ್ದು, ಆತನ ಮೇಲೆ ರೌಡಿ ಶೀಟರ್ ಓಪನ್ ಮಾಡಲಾಗಿದೆ. ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾದಾಗಿನಿಂದ ಆತ ಪರಾರಿಯಾಗಿದ್ದ. ಆತನ ತೀರಿಕೊಂಡ ಬಳಿಕ ಆಸ್ತಿ ಪಾಲು ಮಾಡಲಾಗಿತ್ತು. ಆ ಆಸ್ತಿಯ ತನ್ನ ಪಾಲನ್ನು ಮಾರಾಟ ಮಾಡಿದ ನಂತರ ಆತ ಮನೆ ತೊರೆದಿದ್ದ. ಐದು ವರ್ಷಗಳಿಂದ ಸನ್ನಿ ತನ್ನ ಕುಟುಂಬ, ತಾಯಿ ಮತ್ತು ಸಹೋದರನನ್ನು ಭೇಟಿ ಮಾಡಿಲ್ಲ. ಆತನ ಸಹೋದರ ಟೀ ಸ್ಟಾಲ್ ನಡೆಸುತ್ತಿದ್ದಾರೆ ಎಂದು ಆತನ ಸಹೋದರ ಪಿಂಟು ಸಿಂಗ್ ಹೇಳಿದ್ದಾರೆ.
ಇನ್ನು ಮತ್ತೋರ್ವ ಆರೋಪಿ ಅರುಣ್, ಬಾಲ್ಯದಲ್ಲಿಯೇ ಮನೆ ಬಿಟ್ಟು ಹೋಗಿದ್ದ. 2010ರಲ್ಲಿ ರೈಲಿನಲ್ಲಿ ಪೊಲೀಸರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಹೆಸರು ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆತ ದೆಹಲಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದೂ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ