ಶ್ರೀಲಂಕಾದಲ್ಲಿ ಬಾಗಿಲು ಮುಚ್ಚಲಿವೆ ಚರ್ಚ್​ಗಳು?; ಮತ್ತಷ್ಟು ಜೀವ ಹಾನಿಯಾಗದಂತೆ ಸರ್ಕಾರದಿಂದ ಎಚ್ಚರಿಕೆ ಕ್ರಮ!

ಲಂಕಾ ರಾಷ್ಟ್ರದಲ್ಲಿ ಸದ್ಯದಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿ,  ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.

Seema.R | news18
Updated:April 25, 2019, 4:30 PM IST
ಶ್ರೀಲಂಕಾದಲ್ಲಿ ಬಾಗಿಲು ಮುಚ್ಚಲಿವೆ ಚರ್ಚ್​ಗಳು?; ಮತ್ತಷ್ಟು ಜೀವ ಹಾನಿಯಾಗದಂತೆ ಸರ್ಕಾರದಿಂದ ಎಚ್ಚರಿಕೆ ಕ್ರಮ!
ಸ್ಫೋಟಗೊಂಡ ಚರ್ಚ್​
Seema.R | news18
Updated: April 25, 2019, 4:30 PM IST
ಈಸ್ಟರ್​ ಪ್ರಯುಕ್ತ ಚರ್ಚ್​ಗಳಲ್ಲಿ ಸೇರಿದ್ದ ಭಕ್ತರು, ಕಣ್ಣು ಮುಚ್ಚಿ "ನಮ್ಮನ್ನು ಕಾಪಾಡು ದೇವ" ಎಂದು ಯೇಸುವಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಆ ಭಕ್ತರು ಮುಚ್ಚಿದ ಕಣ್ಣನ್ನು ಮತ್ತೇಂದು ಬಿಡಲೇ ಇಲ್ಲ. ಯೇಸು ದೇಗುಲದಲ್ಲಿಯೇ ಉಗ್ರರು ಸ್ಫೋಟಿಸಿದ ಸ್ಫೋಟಕ್ಕೆ ಅವರೆಲ್ಲ ಪರಮಾತ್ಮನ ಪಾದದಡಿ ಜೀವಬಿಟ್ಟಿದ್ದರು.

ಕೊಲೊಂಬೋದಲ್ಲಿ ಚರ್ಚ್​ಗಳನ್ನೇ ಗುರಿಯಾಗಿಸಿಕೊಂಡು ಐಸಿಸ್​ ಉಗ್ರ ಸಂಘಟನೆ ನಡೆಸಿದ ಪೈಶಾಚಿಕ ದಾಳಿಗೆ ಅಲ್ಲಿನ ಜನ ಬೆಚ್ಚಿದ್ದಾರೆ. ಅಲ್ಲದೇ ಚರ್ಚ್​ನಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ವೇಳೆಯೇ ಅಧಿಕ ಜನ ಸೇರಿವುದರಿಂದ ಹೆಚ್ಚಿನ ಜನರನ್ನು ಸುಲಭವಾಗಿ ಕೊಲ್ಲಬಹುದು ಎಂಬುದು ಅವರ ಉದ್ದೇಶವಾಗಿತ್ತು ಎಂಬುದು ಸಾಬೀತಾಗಿದೆ. ಸದ್ಯ ದ್ವೀಪ ರಾಷ್ಟ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ಏರ್ಪಟ್ಟಿದೆ. ಭಾನುವಾರ ನಡೆದ ಸರಣಿ ಬಾಂಬ್​ ದಾಳಿ ಬಳಿಕ ಇಂದು ಮತ್ತೊಂದು ಬಾಂಬ್​ ಸ್ಪೋಟಿಸಿದೆ. ಯಾವ ಕ್ಷಣದಲ್ಲಿ ಬೇಕಾದರೂ ಬಾಂಬ್​ ಮತ್ತೆ ಸ್ಫೋಟಗಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಚರ್ಚ್​ಗಳ ಬಾಗಿಲು ಹಾಕಲು ಸರ್ಕಾರ ಮುಂದಾಗಿದೆ.

ಲಂಕಾ ರಾಷ್ಟ್ರದಲ್ಲಿ ಸದ್ಯದಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿ,  ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಚರ್ಚ್​ಗಳ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚುವುದು ಒಳಿತು ಎಂದು ಸಚಿವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಕೊಲೊಂಬೋ ಸಮೀಪದ ನಗರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ; ಯಾವುದೇ ಹಾನಿಯಾಗಿಲ್ಲ ಎಂದ ಪೊಲೀಸರು

ಜನರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದು ಒಳಿತು. ಸದ್ಯ ಚರ್ಚ್​ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚೋಣ. ಇಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಚರ್ಚ್​ಗಳನ್ನು ಮತ್ತೆ ತೆರೆಯೋಣ ಎಂದು ಮನವಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ಇನ್ನು ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626