ಗುಜರಾತ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಶಿವಸೇನೆಯ ಎಲ್ಲ 42 ಅಭ್ಯರ್ಥಿಗಳು


Updated:December 27, 2017, 8:22 PM IST
ಗುಜರಾತ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಶಿವಸೇನೆಯ ಎಲ್ಲ 42 ಅಭ್ಯರ್ಥಿಗಳು
ಗುಜರಾತ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಶಿವಸೇನೆಯ ಎಲ್ಲ 42 ಅಭ್ಯರ್ಥಿಗಳು

Updated: December 27, 2017, 8:22 PM IST
ಗುಜರಾತ್`ನಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಯ ಎಲ್ಲ 42 ಅಭ್ಯರ್ಥಿಗಳು ನಾಮಪತ್ರದ ಜೊತೆ ನೀಡಿದ್ದ ಠೇವಣೆಯನ್ನೂ ಕಳೆದುಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿದ ಅಭ್ಯಥಿಯು ಒಟ್ಟು ಮತದಾನದ ಆರನೇ ಒಂದು ಭಾಗದಷ್ಟು ಮತಗಳನ್ನ ಪಡೆಯಲು ವಿಫಲವಾದರೆ ಠೇವಣಿ ಕಳೆದುಕೊಳ್ಳುತ್ತಾನೆ. ಆದರೆ, ಶಿವಸೇನೆಯ ಯಾವೊಬ್ಬ ಅಭ್ಯರ್ಥಿಯೂ ಠೇವಣಿ ಉಳಿಸಿಕೊಳ್ಳುವಷ್ಟು ಮತಗಳನ್ನೂ ಪಡೆದಿಲ್ಲ.

ಗುಜರಾತ್ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನೆಯ ಎಲ್ಲ 42 ಅಭ್ಯರ್ಥಿಗಳಿಗೆ ಬಿದ್ದಿರುವುದು ಕೇವಲ 33,893 ಮತಗಳು ಮಾತ್ರ. 11 ಅಭ್ಯರ್ಥಿಗಳು ಮಾತ್ರ ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ಧಾರೆ. ಲಿಂಬಾಯತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಮ್ರಾಟ್ ಪಟೇಲ್ 4,075 ಮತಗಳನ್ನ ಗಳಿಸಿದ್ದು, ಶಿವಸೇನಾ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತ ಪಡೆದವರಾಗಿದ್ದಾರೆ.
First published:December 21, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ