ಎರಡು ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ ಸೋಮವಾರದಿಂದ ಪುನಾರಾರಂಭ

ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಬಂದ್​ ಮಾಡಲಾಗಿದೆ. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ

Seema.R | news18-kannada
Updated:October 12, 2019, 1:32 PM IST
ಎರಡು ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ ಸೋಮವಾರದಿಂದ ಪುನಾರಾರಂಭ
ಕಾಶ್ಮೀರದ ಚಿತ್ರಣ
  • Share this:
ನವದೆಹಲಿ (ಅ.12):  ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ  ಮೊಬೈಲ್​ ಪೋಸ್ಟ್​ ಪೇಯ್ಡ್​ ಸೇವೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಲಾಗುವುದು. ಸೋಮವಾರದಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಪುನರ್​ಸ್ಥಾಪಿಸಲಾಗುವುದು ಎಂದು ರಾಜ್ಯ ಆಡಳಿತ ಪ್ರಕಟಿಸಿದೆ.

ರಾಜ್ಯದ ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ, ರೋಹಿತ್​ ಕನ್ಸಾಲ್​ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನ 12 ಬಳಿಕ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಮರು ಅಳವಡಿಸಲಾಗುವುದು ಎಂದಿದ್ದಾರೆ.

ಶನಿವಾರ ಈ ಸೇವೆಯನ್ನು ನೀಡುವುದಾಗಿ ನಾವು ಹೇಳಿದ್ದೇವು. ಆದರೆ ಇಂಟರ್​ನೆಟ್​ ಸೇವೆಯನ್ನು ಅಳವಡಿಸಲು ಸಮಯಬೇಕು ಎಂದಿದ್ದಾರೆ.

ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಬಂದ್​ ಮಾಡಲಾಗಿದೆ. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ ಎಂದರು

ಇದನ್ನು ಓದಿ:  ಫೋರ್ಬ್ಸ್​​ ಪಟ್ಟಿ 2019: ಸತತ 12 ಬಾರಿಗೆ ಭಾರತೀಯ ಶ್ರೀಮಂತರಲ್ಲಿ ಮುಕೇಶ್​​ ಅಂಬಾನಿಗೆ ಅಗ್ರಸ್ಥಾನ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್​ 5ರಂದು ರದ್ದುಗೊಳಿಸಿ, ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಆದಾದ ಬಳಿಕ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಂವಹನ ಸಂಪರ್ಕವನ್ನು ಅಂದಿನಿಂದಲೇ ರದ್ದುಗೊಳಿಸಲಾಗಿದೆ. ರಾಜ್ಯಕ್ಕೆ ವಿಧಿಸಿರುವ ನಿರ್ಬಂಧವನ್ನು ನಿಧಾನವಾಗಿ ತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published: October 12, 2019, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading