HOME » NEWS » National-international » ALL PARTY MEETING SOURCES SAY PM MODI TO ATTEMPT CONSENSUS ON DIPLOMATIC AND MILITARY EFFORTS MAK

India China Face off: ಸರ್ವ ಪಕ್ಷಗಳ ಸಭೆ; ಚೀನಾ ವಿರುದ್ಧ ರಾಜತಾಂತ್ರಿಕ-ಮಿಲಿಟರಿ ಪ್ರಯತ್ನಗಳ ಒಮ್ಮತ ನಿರ್ಧಾರಕ್ಕೆ ಕೇಂದ್ರ ಒಲವು

ಜೂನ್. 15 ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆ ಬಳಿಯ ಅಂತಾರಾಷ್ಟ್ರೀಯ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಉಂಟಾಗಿದೆ. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹಿಂಸಾತ್ಮಕವಾಗಿ ಕೊಲ್ಲಲ್‌ಪಟ್ಟಿದ್ದು ಕೇಂದ್ರ ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಸಲುವಾಗಿ ಇಂದು ಸರ್ವ ಪಕ್ಷಗಳ ಸಭೆ ಕರೆದಿದೆ.

news18-kannada
Updated:June 19, 2020, 6:07 PM IST
India China Face off: ಸರ್ವ ಪಕ್ಷಗಳ ಸಭೆ; ಚೀನಾ ವಿರುದ್ಧ ರಾಜತಾಂತ್ರಿಕ-ಮಿಲಿಟರಿ ಪ್ರಯತ್ನಗಳ ಒಮ್ಮತ ನಿರ್ಧಾರಕ್ಕೆ ಕೇಂದ್ರ ಒಲವು
ವಿಡಿಯೋ ಕಾನ್ಫರೆನ್ಸ್‌ ಮೂಲಕ ಸರ್ವ ಪಕ್ಷಗಳ ಸಭೆ ನಡೆಸುತ್ತಿರುವ ನರೇಂದ್ರ ಮೋದಿ.
  • Share this:
ನವ ದೆಹಲಿ (ಜೂನ್‌19); ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಇಂದು ಕರೆದಿರುವ ಸರ್ವ ಪಕ್ಷಗಳ ಸಭೆಯಲ್ಲಿ, ಸರ್ಕಾರದ ರಾಜತಾಂತ್ರಿಕ ಮತ್ತು ಮಿಲಿಟರಿ ಪ್ರಯತ್ನಗಳ ಬಗ್ಗೆ ಸರ್ವ ಪಕ್ಷಗಳ ರಾಜಕೀಯ ಒಮ್ಮತ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಲವು ತೋರಿದೆ ಎನ್ನಲಾಗುತ್ತಿದೆ.

ಜೂನ್. 15 ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆ ಬಳಿಯ ಅಂತಾರಾಷ್ಟ್ರೀಯ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಉಂಟಾಗಿದೆ. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹಿಂಸಾತ್ಮಕವಾಗಿ ಕೊಲ್ಲಲ್‌ಪಟ್ಟಿದ್ದು ಕೇಂದ್ರ ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಸಲುವಾಗಿ ಇಂದು ಸರ್ವ ಪಕ್ಷಗಳ ಸಭೆ ಕರೆದಿದೆ.

ಈ ಸಭೆಯಲ್ಲಿ ಜೆ.ಪಿ.ನಡ್ಡಾ (ಬಿಜೆಪಿ), ಉದ್ಧವ್ ಠಾಕ್ರೆ (ಶಿವಸೇನೆ), ಎಂ.ಕೆ.ಸ್ಟಾಲಿನ್ (ಡಿಎಂಕೆ), ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಒ ಪನ್ನೀರ್‌ಸೆಲ್ವಂ (ಎಐಎಡಿಎಂಕೆ), ಎನ್ ಚಂದ್ರಬಾಬು ನಾಯ್ಡು (ಟಿಡಿಪಿ), ಜಗನ್ ಮೋಹನ್ ರೆಡ್ಡಿ (ವೈಎಸ್ಆರ್ ಕಾಂಗ್ರೆಸ್), ಶರದ್ ಪವಾರ್ (ಎನ್‌ಸಿಪಿ), ನಿತೀಶ್ ಕುಮಾರ್ (ಜೆಡಿಯು), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಡಿ ರಾಜಾ (ಸಿಪಿಐ), ಸೀತಾರಾಮ್ ಯೆಚೂರಿ (ಸಿಪಿಎಂ), ಕೆ ಚಂದ್ರಶೇಖರ್ ರಾವ್ (ಟಿಆರ್‌ಎಸ್‌), ಸುಖ್ಬೀರ್ ಬಾದಲ್ (ಅಕಾಲಿ ದಳ), ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ) ಸೊರೆನ್ (ಜಾರ್ಖಂಡ್ ಮುಕ್ತಿ ಮೋರ್ಚಾ) ಸೇರಿದಂತೆ ಅನೇಕ ಪ್ರಮುಖ ಪಕ್ಷದ ನಾಯಕರು ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : India China Face off: ಸರ್ವ ಪಕ್ಷಗಳ ಸಭೆ; ಚೀನಾ ವಿರುದ್ಧ ರಾಜತಾಂತ್ರಿಕ-ಮಿಲಿಟರಿ ಪ್ರಯತ್ನಗಳ ಒಮ್ಮತ ನಿರ್ಧಾರಕ್ಕೆ ಕೇಂದ್ರ ಒಲವು

ಸರ್ವ ಪಕ್ಷಗಳ ಸಭೆಯಲ್ಲಿ ಏನೇನಾಗಲಿದೆ?

# ಈ ಸಭೆಯನ್ನು ಆರಂಭಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಸರ್ವ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿರುವ ವಿವಿಧ ಪಕ್ಷಗಳ ಮುಖ್ಯಸ್ಥರಿಗೆ ಗಾಲ್ವಾನ್ ಕಣಿವೆಯ ಘಟನೆ ಮತ್ತು ಭಾರತದ ಸನ್ನದ್ಧತೆಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

# ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯದ ಬಗ್ಗೆ ನಾಯಕರಿಗೆ ಸಂಕ್ಷಿಪ್ತ ಮಾಹಿತಿ ನೀಡಲಿದ್ದಾರೆ ಮತ್ತು ಉಲ್ಬಣಗೊಂಡಿರುವ ಗಡಿ ಬಿಕ್ಕಟ್ಟು ಸೇರಿದಂತೆ ಹಿಂದಿನ ಮತ್ತು ಪ್ರಸ್ತುತ ರಾಜತಾಂತ್ರಿಕ ಪ್ರಯತ್ನಗಳ ಕುರಿತ ವಿವರಗಳನ್ನು ನೀಡಲಿದ್ದಾರೆ.# ಈ ಸರ್ವ ಪಕ್ಷಗಳ ಸಭೆಯಲ್ಲಿ ಭಾರತೀಯ ಭೂಪ್ರದೇಶವನ್ನು ರಕ್ಷಿಸುವ ಮತ್ತು ಸರ್ಕಾರದ ರಾಜತಾಂತ್ರಿಕ- ಮಿಲಿಟರಿ ಪ್ರಯತ್ನಗಳ ಬಗ್ಗೆ ಎಲ್ಲಾ ಪಕ್ಷಗಳಲ್ಲೂ ಒಮ್ಮತದ ನಿರ್ಧಾರವನ್ನು ನಿರ್ಮಿಸುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
First published: June 19, 2020, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories