ಮತ್ತೊಮ್ಮೆ ನನ್ನನ್ನು ಸುಳ್ಳುಗಾರನೆಂದು ಜರಿದರೆ ಬಿಜೆಪಿ ಸಖ್ಯವನ್ನೇ ತೊರೆಯಬೇಕಾಗುತ್ತದೆ; ಉದ್ಧವ್ ಠಾಕ್ರೆ ಎಚ್ಚರಿಕೆ

ಸರ್ಕಾರ ರಚನೆಗೆ ನಮ್ಮ ಬಳಿಯೂ ಆಯ್ಕೆಗಳಿವೆ. ಅಧಿಕಾರ ಸಮಾನ ಹಂಚಿಕೆ ವಿಚಾರವಾಗಿ ಫಡ್ನವೀಸ್ ಸತ್ಯ ಹೇಳುವವರೆಗೂ ನಾನು ಅವರೊಂದಿಗೆ ಮಾತನಾಡುವುದಿಲ್ಲ. ನನ್ನನ್ನು ಸುಳ್ಳುಗಾರ ಎಂದವರ ಬಳಿ ಮಾತನಾಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಮುಂದೆ ಅವರು ಮತ್ತೆ ನನ್ನನ್ನು ಸುಳ್ಳುಗಾರ ಎಂದು ಕರೆದರೆ ಬಿಜೆಪಿ ಜೊತೆಗಿನ ಬಾಂಧವ್ಯವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

HR Ramesh | news18-kannada
Updated:November 8, 2019, 7:08 PM IST
ಮತ್ತೊಮ್ಮೆ ನನ್ನನ್ನು ಸುಳ್ಳುಗಾರನೆಂದು ಜರಿದರೆ ಬಿಜೆಪಿ ಸಖ್ಯವನ್ನೇ ತೊರೆಯಬೇಕಾಗುತ್ತದೆ; ಉದ್ಧವ್ ಠಾಕ್ರೆ ಎಚ್ಚರಿಕೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ.
  • Share this:
ಮುಂಬೈ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೇವೇಂದ್ರ ಫಡ್ನವೀಸ್ ಅವರು ಬಿಜೆಪಿ-ಶಿವಸೇನೆ ನಡುವೆ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕುರಿತು ಯಾವುದೇ ಮಾತುಕತೆಯೇ ನಡೆದಿರಲಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಮೊದಲ ಬಾರಿಗೆ ಯಾರೋ ಒಬ್ಬರು ಠಾಕ್ರೆ ಕುಟುಂಬ ಸುಳ್ಳು ಹೇಳಿದೆ ಎನ್ನುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇಂದು ಸಂಜೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ಶಿವ ಸೈನಿಕ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನು ಜನರಿಗೆ ಮಾತು ಕೊಟ್ಟಿದ್ದೆ. 25 ವರ್ಷದಿಂದ ಬಿಜೆಪಿ-ಶಿವಸೇನೆ ಜೊತೆಯಾಗಿದೆ. ಅಧಿಕಾರದಲ್ಲಿ ಸಮಾನ ಹಂಚಿಕೆಯಾಗಬೇಕು ಎಂದು ನಾನು ಅಮಿತ್ ಶಾ ಹಾಗೂ ಫಡ್ನವೀಸ್ ಅವರಿಗೆ ಹೇಳಿದ್ದೆ. ಅಧಿಕಾರ ಸಮಾನ ಹಂಚಿಕೆ ಬಗ್ಗೆ ಎಂದು ಅಮಿತ್ ಶಾ ಭರವಸೆ ನೀಡಿದ್ದರು. ನನ್ನ ನಾಯಕತ್ವದಲ್ಲಿ ಪಕ್ಷದ ಹಳೇ ವೈಭವವನ್ನು ಮರುಕಳಿಸುವುದು ನನಗೆ ಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.

ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಗುರಿಯಾಗಿದ್ದರೆ, ಅದನ್ನು ನಾವು 2014ರಲ್ಲೇ ಮಾಡುತ್ತಿದ್ದೆವು. ಫಡ್ನವೀಸ್ ನನ್ನ ಗೆಳೆಯ. ಆದರೆ, ಎನು ತಪ್ಪಾಗಿದೆ ಎಂಬುದು ನನಗೆ ಗೊತ್ತಿಲ್ಲ. ಅವರು ನೀಡಿದ್ದ ಭರವಸೆಯಂತೆ ಯಾಕೆ ನಡೆದುಕೊಳ್ಳುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಬಾಳಾ ಠಾಕ್ರೆ ಅವರ ಮಗ ಸುಳ್ಳು ಹೇಳುತ್ತಿದ್ದಾರೆ ಎಂದು ಮಹಾರಾಷ್ಟ್ರದ ಜನತೆಗೆ ಹೇಳಿರುವುದು ಸರಿಯಲ್ಲ. ನಾವು ಬಿಜೆಪಿಯನ್ನು ಶತ್ರು ಎಂದು ನಾವು ಪರಿಗಣಿಸಿಲ್ಲ. ಆದರೆ, ಅವರು ಈಗ ತಮ್ಮ ಮಾತಿನಿಂದ ಹಿಂದೆ ಸರಿಯುತ್ತಿದ್ದಾರೆ. ನಾವು ಅವರನ್ನು ಸಹೋದರರಂತೆ ಪರಿಗಣಿಸಿದ್ದೇವೆ. ನಮ್ಮನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ ಎಂದು ಠಾಕ್ರೆ ಪ್ರಶ್ನಿಸಿದರು.

ಸರ್ಕಾರ ರಚನೆಗೆ ನಮ್ಮ ಬಳಿಯೂ ಆಯ್ಕೆಗಳಿವೆ. ಅಧಿಕಾರ ಸಮಾನ ಹಂಚಿಕೆ ವಿಚಾರವಾಗಿ ಫಡ್ನವೀಸ್ ಸತ್ಯ ಹೇಳುವವರೆಗೂ ನಾನು ಅವರೊಂದಿಗೆ ಮಾತನಾಡುವುದಿಲ್ಲ. ನನ್ನನ್ನು ಸುಳ್ಳುಗಾರ ಎಂದವರ ಬಳಿ ಮಾತನಾಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಮುಂದೆ ಅವರು ಮತ್ತೆ ನನ್ನನ್ನು ಸುಳ್ಳುಗಾರ ಎಂದು ಕರೆದರೆ ಬಿಜೆಪಿ ಜೊತೆಗಿನ ಬಾಂಧವ್ಯವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: ಬಗೆಹರಿಯದ ಮಹಾ ಬಿಕ್ಕಟ್ಟು; ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ದೇವೇಂದ್ರ ಫಡ್ನವೀಸ್ ಅವರುವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಿಲ್ಲ. ಆದರೆ, ಮೈತ್ರಿಯೊಂದಿಗೆ ಸರ್ಕಾರ ರಚನೆ ಮಾಡುವ ಜನಾದೇಶ ನಮಗೆ ಸಿಕ್ಕಿದೆ. ಉದ್ಧವ್ ಠಾಕ್ರೆ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ಅವರ ಸಮ್ಮುಖದಲ್ಲಿ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಶಿವಸೇನೆ ಈಗ ಸಿಎಂ ಹಂಚಿಕೆ ಬೇಡಿಕೆ ಇಡುವ ಮೂಲಕ ಜನಾದೇಶಕ್ಕೆ ದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದರು. 

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ