ವಾಹನ ಮಾಲೀಕರ ಗಮನಕ್ಕೆ: ನಂಬರ್​ ಪ್ಲೇಟ್​ನಲ್ಲಿ ಆಗಲಿದೆ ಭಾರೀ ಬದಲಾವಣೆ..!

ಈ ನೋಂದಣಿ ಪ್ಲೇಟ್​ಗಳು 15 ವರ್ಷಗಳ ಗ್ಯಾರೆಂಟಿಯೊಂದಿಗೆ ಅಳವಡಿಸಲಾಗುತ್ತಿದ್ದು, ಇದನ್ನು ಬದಲಿಸಲು ಮೊದಲು ಅಳವಡಿಸಿದ ಡೀಲರ್​ನ್ನು ಸಂಪರ್ಕಿಸಬೇಕಾಗುತ್ತದೆ.

zahir | news18
Updated:January 3, 2019, 10:28 PM IST
ವಾಹನ ಮಾಲೀಕರ ಗಮನಕ್ಕೆ: ನಂಬರ್​ ಪ್ಲೇಟ್​ನಲ್ಲಿ ಆಗಲಿದೆ ಭಾರೀ ಬದಲಾವಣೆ..!
@Chandigarh Transport
zahir | news18
Updated: January 3, 2019, 10:28 PM IST
ದೇಶದ ವಾಹನ ನಿಯಮದಲ್ಲಿ ಕೆಲ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಾಹನಗಳ ದುರ್ಬಳಕೆ ಮತ್ತು ಕದ್ದ ವಾಹನಗಳನ್ನು ಪತ್ತೆ ಹಚ್ಚುವ ಸಲುವಾಗಿ ವಾಹನಗಳ ನಂಬರ್​ ಪ್ಲೇಟ್​ ನಿಯಮವನ್ನು ಕಡ್ಡಾಯಗೊಳಿಸಲು  ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್​ ತಿಂಗಳಿಂದ ಪ್ರತಿಯೊಂದು ವಾಹನಕ್ಕೂಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್​ಎಸ್ಆರ್‍‍ಪಿ) ಅಳವಡಿಸಬೇಕಾಗುತ್ತದೆ.

ಈ ಸಂಬಂಧ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಏಪ್ರಿಲ್​ ತಿಂಗಳಿಂದ ದೇಶದ ಪ್ರತಿ ವಾಹನದ ನೋಂದಣಿ ಪ್ಲೇಟ್​ಗಳನ್ನು ಹೈ ಸೆಕ್ಯುರಿಟಿ ಪ್ಲೇಟ್​ಗಳಾಗಿ ಬದಲಿಬೇಕಿದೆ. ಈ ಸಂಬಂಧ ಈಗಾಗಲೇ  ಎಲ್ಲ ರಾಜ್ಯಗಳ ಸಾರಿಗೆ ಇಲಾಖೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸ ನಂಬರ್ ಪ್ಲೇಟ್​ಗಳು ಹೆಚ್ಚು ಸುರಕ್ಷಿತವಾಗಿದ್ದು, ಇದನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಪ್ಲೇಟ್​ಗಳನ್ನು ವಾಹನಗಳಿಂದ ಬೇರ್ಪಡಿಸುವುದು ಕೂಡ ಕಷ್ಟಸಾಧ್ಯ ಎನ್ನಲಾಗಿದೆ. ಸಾಮಾನ್ಯವಾಗಿ ಕಳವು ಮಾಡಲ್ಪಟ್ಟ ವಾಹನಗಳ ನಂಬರ್ ಪ್ಲೇಟ್ ಬದಲಿಸಿ ಬಳಸಲಾಗುತ್ತದೆ. ಇಲ್ಲ ವಾಹನವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಏನಿದು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್( ನಂಬರ್ ಪ್ಲೇಟ್)?

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್​ ಅನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಈ ನಂಬರ್ ಪ್ಲೇಟ್​ಗಳ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕ್ರೋಮಿಯಂ ಹಾಲೊಗ್ರಾಂನ ಹಾಟ್ ಸ್ಟ್ಯಾಂಪ್ ಹಾಕಲಾಗಿರುತ್ತದೆ. ಅಲ್ಲದೆ ಪ್ಲೇಟ್‍ನ ಮೇಲ್ಭಾಗದ ಬಲದಲ್ಲಿ ಭಾಗದಲ್ಲಿ ಸ್ನಾಪ್ ಲಾಕ್ ಮಾಡಲಾಗಿರುತ್ತದೆ.

ನೀಲಿ ಬಣ್ಣದ ಕ್ರೋಮಿಯಂ ಸ್ಟ್ಯಾಂಪ್​ನಲ್ಲಿ ಅಶೋಕ ಚಕ್ರದ ಲಾಂಛನ ಹೊಂದಿರುತ್ತದೆ. ಈ ಪ್ಲೇಟ್​ನಲ್ಲಿ ಶಾಶ್ವತ ಗುರುತಿನ ಪಿನ್ ಲೇಸರ್ ಸಹಾಯದಿಂದ ಅಚ್ಚು ಹಾಕಲಾಗಿರುತ್ತದೆ. ಹಾಗೆಯೇ ವಾಹನಗಳ ಸಂಖ್ಯೆಯ ಮೇಲೆ ನೋಂದಣಿ ಸಂಖ್ಯೆಯ ಅಕ್ಷರಗಳು ಮತ್ತು ಅಂಕಿಗಳನ್ನು ಬಿಸಿ ಸ್ಟಾಂಪಿಂಗ್ ಮೂಲಕ ಅನ್ವಯಿಸಲಾಗಿರುತ್ತದೆ. ಅಲ್ಲದೆ 'IND' ಗುರುತನ್ನು ಈ ಪ್ಲೇಟ್​ನಲ್ಲಿ ಅಚ್ಚು ಹಾಕಲಾಗುತ್ತದೆ.

ಈ ನೋಂದಣಿ ಪ್ಲೇಟ್​ಗಳು 15 ವರ್ಷಗಳ ಗ್ಯಾರೆಂಟಿಯೊಂದಿಗೆ ಅಳವಡಿಸಲಾಗುತ್ತಿದ್ದು, ಇದನ್ನು ಬದಲಿಸಲು ಮೊದಲು ಅಳವಡಿಸಿದ ಡೀಲರ್​ನ್ನು ಸಂಪರ್ಕಿಸಬೇಕಾಗುತ್ತದೆ. ಅಂದರೆ ಇದನ್ನು ಒಂದು ಬಾರಿ ಅನ್ವಯಿಸಿದರೆ ಮತ್ತೆ ತೆಗೆಯಲು ಸಾಧ್ಯವಾಗುವುದಿಲ್ಲ. ಇದರಿಂದ ವಾಹನಗಳ ನಕಲಿ ನಂಬರ್ ಪ್ಲೇಟ್​ಗಳ ಹಾವಳಿಗೆ ಬ್ರೇಕ್ ಬೀಳಲಿದೆ ಎನ್ನಲಾಗಿದೆ.
Loading...

ಒಮ್ಮೆ ನಂಬರ್ ಪ್ಲೇಟ್​ ಅಳವಡಿಸಿದ ಡೀಲರ್​ ಸಂಖ್ಯೆಯು ಇದರಲಿರುತ್ತದೆ. ಹೀಗಾಗಿ ನಂಬರ್ ಪ್ಲೇಟ್​ ಬದಲಿಸಿದರೆ ವಾಹನ ಕಳ್ಳರನ್ನು ಪತ್ತೆ ಹಚ್ಚಲು ಸಹಾಯಕವಾಗಲಿದೆ. ಇನ್ನು ಹೊಸ ವಾಹನಗಳಿಗೆ ಕಂಪೆನಿಯೇ ಹೊಸ ಸುರಕ್ಷಾ ನೀತಿಯ ಅಡಿಯಲ್ಲಿ ನಂಬರ್​ ಪ್ಲೇಟ್ ಒದಗಿಸಲಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ಈ ಹೊಸ ನಿಯಮವನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಸೂಚಿಸಿದ್ದು, ಇದರಿಂದ ಎಲ್ಲ ರಾಜ್ಯಗಳಲ್ಲೂ ಹೊಸ ನಿಯಮ ಏಪ್ರಿಲ್​ ತಿಂಗಳ ಒಳಗಾಗಿ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ.

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ