ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿರುವ ಚೀನಾದ ಬಗ್ಗೆ ಪ್ರಧಾನಿ ಮೋದಿ ನಿಲುವೇನು?

ಡಬ್ಲ್ಯೂಟಿಓಗೆ ನಾವು ಸಹಿ ಹಾಕಿದ್ದೇವೆ. ಅಂತಾಷ್ಟ್ರೀಯ ಕಾನೂನು ಮತ್ತು ನಿಯಮಕ್ಕೆ ಬದ್ಧರಿರಬೇಕು. ನಾವು ಸಾರ್ವಜನಿಕರಿಗೆ ತಿಳಿಹೇಳುವ ಕೆಲಸ ಮಾಡಬೇಕಿದೆ ಎಂಬುದು ಮೋದಿ ಅಭಿಪ್ರಾಯ.

news18
Updated:April 9, 2019, 3:35 PM IST
ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿರುವ ಚೀನಾದ ಬಗ್ಗೆ ಪ್ರಧಾನಿ ಮೋದಿ ನಿಲುವೇನು?
ನರೇಂದ್ರ ಮೋದಿ
news18
Updated: April 9, 2019, 3:35 PM IST
ನವದೆಹಲಿ(ಏ. 09): ಇಂದು ಪಾಕಿಸ್ತಾನಕ್ಕೆ ಸ್ನೇಹಿತನಾಗಿರುವ ಕೆಲವೇ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದು. ಎಲ್ಲಾ ರೀತಿಯಲ್ಲಿ ಪಾಕಿಸ್ತಾನಕ್ಕೆ ಒತ್ತಾಸೆಯಾಗಿ ನಿಂತಿರುವುದು ಚೀನಾ ಮಾತ್ರವೇ. ಮಿಲಿಟರಿಯಿಂದ ಹಿಡಿದು ನಾಗರಿಕ ಸೌಲಭ್ಯದವರೆಗೆ ಬಹುತೇಕ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕೆ ನೆರವು ನೀಡುತ್ತಿರುವುದು ಚೀನಾ ದೇಶವೇ. ಪಾಕಿಸ್ತಾನವನ್ನು ಆಲಂಗಿಸುವ ಭರದಲ್ಲಿ ಪಾಕ್ ಉಗ್ರರನ್ನೂ ಚೀನಾ ಒಪ್ಪಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್​ನನ್ನು ಉಗ್ರನ ಲಿಸ್ಟ್​ಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿರುವುದು ಚೀನಾವೇ. ಈ ಹಿನ್ನೆಲೆಯಲ್ಲಿ ಚೀನಾ ಬಗ್ಗೆ ಭಾರತ ಯಾವ ನೀತಿ ಅನುಸರಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ನ್ಯೂಸ್18 ವಾಹಿನಿಯ ಮಾತೃ ಸಂಸ್ಥೆಯಾಗಿರುವ ನೆಟ್ವರ್ಕ್18 ಸಮೂಹದ ಮುಖ್ಯ ಸಂಪಾದಕ ರಾಹುಲ್ ಜೋಷಿ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಬಗ್ಗೆ ತಮ್ಮ ಅನಿಸಿಕೆ ಹೊರಗೆಡವಿದರು.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಸೂದ್ ಅಜರ್ ಅವರನ್ನು ರಕ್ಷಿಸುತ್ತಿರುವ ಚೀನಾ ದೇಶದ ಬಗ್ಗೆ ಭಾರತದಲ್ಲಿ ಸಾರ್ವತ್ರಿಕವಾಗಿ ಅಸಮಾಧಾನವಿದೆ. ಚೀನೀ ವಸ್ತುಗಳನ್ನು ಬಹಿಷ್ಕರಿಸುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಸಂದರ್ಶನದಲ್ಲಿ ಮೋದಿ ಅವರನ್ನು ಕೇಳಿದಾಗ ಅವರು, ಇಂಥ ಬಹಿಷ್ಕಾರಗಳಿಂದ ಪ್ರಯೋಜವಿಲ್ಲವೆಂದು ಪರೋಕ್ಷವಾಗಿ ತಿಳಿಸಿದರು.

ಇದನ್ನೂ ಓದಿ: ಪುಲ್ವಾಮ ದಾಳಿ, ಬಾಲಾಕೋಟ್ ಏರ್ ಸ್ಟ್ರೈಕ್, ಉಗ್ರ ನಿಗ್ರಹ ಕಾರ್ಯಾಚರಣೆ ಬಗ್ಗೆ ನೆಟ್ವರ್ಕ್18 ಜೊತೆ ಮೋದಿ ಮಾತು

“ಇವತ್ತಿನ ಜಗತ್ತು ಎರಡು ಧ್ರುವಗಳಾಗಿ ಉಳಿದಿಲ್ಲ. ಈ ಜಾಗತಿಕ ಯುಗದಲ್ಲಿ ಎಲ್ಲಾ ದೇಶಗಳು ಪರಸ್ಪರ ಜೋಡಿತವಾಗಿವೆ ಹಾಗೂ ಅವಲಂಬಿತವಾಗಿವೆ. ಅಂತಾರಾಷ್ಟ್ರೀಯ ಕಾನೂನುಗಳಿವೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಓ)ಗೆ ನಾವು ಸಹಿ ಹಾಕಿದ್ದೇವೆ. ಒಂದು ಸರಕಾರವಾಗಿ ನಮ್ಮ ಅಧಿಕೃತ ನಿಲುವು ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಕ್ಕೆ ಪೂರಕವಾಗಿರಬೇಕು. ಭಾರತ ಅದಕ್ಕೆ ಬದ್ಧವಾಗಿರುತ್ತದೆ. ಚೀನೀ ವಸ್ತುಗಳ ವಿಚಾರದಲ್ಲಿ ಜನಮಾನಸದಲ್ಲಿ ಏನು ಅಭಿಪ್ರಾಯವಿದೆಯೋ ಅದು ಅವರಿಗೆ ಬಿಟ್ಟ ವಿಚಾರ. ಮಾಧ್ಯಮವನ್ನೂ ಒಳಗೊಂಡಂತೆ ನಾವು ಸಾರ್ವಜನಿಕರಿಗೆ ತಿಳಿಹೇಳುವ ಕೆಲಸ ಮಾಡಬೇಕಿದೆ” ಎಂದು ಮೋದಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 60 ವರ್ಷದಲ್ಲಿ ಮಾಡದ್ದನ್ನು ಕಾಂಗ್ರೆಸ್​​ ಈಗ ಮಾಡಲು ಸಾಧ್ಯವೇ?: ‘ನ್ಯಾಯ್​​ ಯೋಜನೆ’ ಬಗ್ಗೆ ಮೋದಿ ವ್ಯಂಗ್ಯ!
Loading...

“ಒಂದು ಕಡೆ ಚೀನಾ ಜೊತೆ ನಮ್ಮ ದ್ವಿಪಕ್ಷೀಯ ಸಂಬಂಧ ಇದೆ. ಚೀನಾ ಜೊತೆ ರಾಜಕೀಯ ವ್ಯವಹಾರವಿದೆ. ಚೀನಾದಲ್ಲಿ ನಮ್ಮ ಬಂಡವಾಳ ಇದೆ. ನಮ್ಮಲ್ಲಿ ಚೀನಾದ ಬಂಡವಾಳ ಇದೆ. ನಮ್ಮ ನಾಯಕರು ಅಲ್ಲಿಗೆ ಹೋಗುತ್ತಾರೆ. ಅಲ್ಲಿನವರು ಇಲ್ಲಿಗೆ ಬರುತ್ತಾರೆ. ಇದೆಲ್ಲದರ ಮಧ್ಯೆ ಇನ್ನೂ ಬಗೆಹರಿಯದ ಗಡಿವಿವಾದಗಳಿವೆ. ಭಾರತಕ್ಕೆ ಒಂದು ದೃಷ್ಟಿಕೋನವಿದ್ದರೆ, ಚೀನಾದ್ದು ಬೇರೆಯದೇ ಅಗಿದೆ. ಈ ಭಿನ್ನಾಭಿಪ್ರಾಯಗಳಿರುವುದನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ. ಆದರೆ, ಈ ಭಿನ್ನಾಭಿಪ್ರಾಯಗಳು ಬಿಕ್ಕಟ್ಟಾಗಿ ಮಾರ್ಪಾಡಾಗಬಾರದು ಎಂಬುದು ನಮ್ಮ ಉದ್ದೇಶ. ಅಂಥ ಘಟನೆಗಳೇನಾದರೂ ಇದ್ದರೆ ನಾವು ಉನ್ನತ ಮಟ್ಟದಲ್ಲಿ ಮಾತುಕತೆಯನ್ನಾಡುತ್ತೇವೆ. ಇದು ನಿರಂತರ ಪ್ರಕ್ರಿಯೆ. ಅಂತಾರಾಷ್ಟ್ರೀಯ ವಿಚಾರಗಳ ಮೇಲೆ ಅವರ ನಿಲುವಿನ ಬಗ್ಗೆ ಹೇಳುವುದಾದರೆ, ಒಂದೊಂದು ದೇಶವೂ ತನ್ನದೇ ರೀತಿಯಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲ ವಿಚಾರಗಳಲ್ಲಿ ನಾವೂ ಕೂಡ ಇದನ್ನೇ ಮಾಡುತ್ತೇವೆ. ಕೆಲವೊಮ್ಮೆ ನಾವು ಪ್ಯಾಲೆಸ್ಟೀನ್ ಪರ ನಿಲುವು ತಳೆಯುತ್ತೇವೆ. ಕೆಲ ವಿಚಾರಗಳಲ್ಲಿ ಇಸ್ರೇಲ್ ಪರ ನಿಲುವು ತೆಗೆದುಕೊಳ್ಳುತ್ತೇವೆ. ಕೆಲವು ಸಲ ಇರಾನ್​ಗೆ ಬೆಂಬಲ ಕೊಡುತ್ತೇವೆ. ಕೆಲವೊಮ್ಮೆ ಅರಬ್ ರಾಷ್ಟ್ರಗಳ ಪರವಾಗಿರುತ್ತೇವೆ. ಪ್ರತಿಯೊಂದು ರಾಷ್ಟ್ರವೂ ತನ್ನದೇ ಹಿತಾಸಕ್ತಿಗೆ ಪೂರಕವಾಗಿ ತಂತ್ರಗಳನ್ನ ಮಾಡುತ್ತವೆ. ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ರಷ್ಯಾದ ಬೆಂಬಲ ಮಾತ್ರ ಇರುತ್ತಿತ್ತು. ಉಳಿದೆಲ್ಲಾ ರಾಷ್ಟ್ರಗಳು ಪಾಕ್ ಪರವಾಗಿದ್ದವು. ಇವತ್ತು ಸನ್ನಿವೇಶ ಬದಲಾಗಿದೆ. ಚೀನಾ ಮಾತ್ರ ಪಾಕ್ ಪರವಾಗಿದೆ. ಉಳಿದೆಲ್ಲ ರಾಷ್ಟ್ರಗಳು ಭಾರತವನ್ನು ಬೆಂಬಲಿಸುತ್ತಿವೆ. ನಾವು ಈ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಯಶಸ್ಸು ಸಾಧಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626