ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ; 20 ವರ್ಷದಲ್ಲೇ ಅತಿ ದೊಡ್ಡ ಭೀಕರ ದಾಳಿ

ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್​ಪಿಎಫ್​ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್​ ಬಾಂಬ್​ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಈ ದಾಳಿ ಜವಾಬ್ದಾರಿ ಹೊತ್ತುಕೊಂಡಿದೆ.

HR Ramesh | news18
Updated:February 15, 2019, 9:31 AM IST
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ; 20 ವರ್ಷದಲ್ಲೇ ಅತಿ ದೊಡ್ಡ ಭೀಕರ ದಾಳಿ
ಪುಲ್ವಾಮದಲ್ಲಿ ಸ್ಫೋಟ ಸಂಭವಿಸಿದ ಸ್ಥಳ
  • News18
  • Last Updated: February 15, 2019, 9:31 AM IST
  • Share this:
ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್​ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ನಲ್ವತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.



ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್​ಪಿಎಫ್​ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್​ ಬಾಂಬ್​ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಈ ದಾಳಿ ಜವಾಬ್ದಾರಿ ಹೊತ್ತುಕೊಂಡಿದೆ.





ಕಾರನ್ನು ಓಡಿಸಿಕೊಂಡು ಬಂದ ವ್ಯಕ್ತಿ 55 ಜನರ ಕೂರಬಹುದಾದ ಸಿಆರ್​ಪಿಎಫ್​ ಬಸ್​ ಬಳಿ ಸ್ಫೋಟಿಸಿದ ಎಂದು ಪುಲ್ವಾಮ ಜಿಲ್ಲೆಯ ಸ್ಥಳೀಯರಾದ ಅಹಮದ್​ ಅಲಿಯಾಸ್ ವಾಕ್ವರ್​ ಹೇಳುತ್ತಾರೆ.


ಪ್ರಾಥಮಿಕ ಮಾಹಿತಿ ಪ್ರಕಾರ, ದಾಳಿ ನಡೆದ ನಂತರ ಜಮ್ಮುವಿನಿಂದ ಶ್ರೀನಗರದ ಕಡೆ ಬಂದೂಕು ಮತ್ತು ಗ್ರನೈಡ್​ ಸ್ಫೋಟದ ಶಬ್ದ ಕೇಳಿಬಂದಿದೆ.


ಈ ಮುನ್ನ 2004ರಲ್ಲಿ 28 ಬಿಎಸ್​ಎಫ್ ಯೋಧರು ಹಾಗೂ 2016 ರಲ್ಲಿ 19 ಯೋಧರು ಹಾಗೂ ಹುತಾತ್ಮರಾಗಿದ್ದರು ಎನ್ನಲಾಗಿದೆ.






First published: February 14, 2019, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading