ದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಗಳ ನಡುವಿನ ಯಾವುದೇ ವಿವಾಹವು ಅಸಿಂಧು ಎಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ. ಹಿಂದೂ ವಿವಾಹ ಕಾಯ್ದೆಯಡಿ (Hindu Marriage Act) ಸ್ವಧರ್ಮದವರನ್ನು ಮಾತ್ರ ಹಿಂದೂಗಳು ಮದುವೆ (Hindu Wedding) ಆಗಬಹುದು. ಅಂತರ್ ಧರ್ಮ ವಿವಾಹ ಅಸಿಂಧು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
2017ರ ಆಗಸ್ಟ್ನಲ್ಲಿ ತೆಲಂಗಾಣ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಫೆಬ್ರವರಿಯಲ್ಲಿ ಈ ಪ್ರಕರಣದ ಕುರಿತಾದ ಅಂತಿಮ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.
ಅರ್ಜಿದಾರ ಬೇರೊಂದು ಮದುವೆಯಾಗಿದ್ದಾನೆ ಎಂದು ಆರೋಪ
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 494ರ ಅಡಿಯಲ್ಲಿ ಮಹಿಳೆಯೊಬ್ಬರು ಅರ್ಜಿದಾರನ ವಿರುದ್ಧ ದೂರನ್ನು ದಾಖಲಿಸಿದ್ದರು.
ಅರ್ಜಿದಾರರ ವಿರುದ್ಧ 2013ರಲ್ಲಿ IPC, 1860 ರ ಸೆಕ್ಷನ್ 494 ರ ಅಡಿಯಲ್ಲಿ ಹೈದರಾಬಾದ್ನಲ್ಲಿ ದೂರು ದಾಖಲಿಸಲಾಗಿದೆ. ದೂರಿನಲ್ಲಿ ಮಹಿಳೆಯು ಅರ್ಜಿದಾರ ತನ್ನೊಂದಿಗೆ ಮದುವೆಯಾಗಿದ್ದು, ನಮ್ಮಿಬ್ಬರ ವಿವಾಹ ಸಂಬಂಧ ಇರುವಾಗಲೇ ಆತ ಬೇರೊಂದು ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರು
ಇನ್ನೂ ಅರ್ಜಿದಾರ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು, ದೂರದಾರ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರು. ಮಹಿಳೆಯ ಆರೋಪವನ್ನು ತಳ್ಳಿ ಹಾಕಿರುವ ವ್ಯಕ್ತಿ ತನ್ನ ವಿರುದ್ಧ ಬಂದ ದೂರಲ್ಲಿ ಯಾವುದೇ ಹುರುಳಿಲ್ಲ ಹೀಗಾಗಿ ದೂರನ್ನು ಪರಿಗಣಿಸದಂತೆ ಮನವಿ ಮಾಡಿ ತೆಲಂಗಾಣ ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: Bangalore Metro: ಸಿಲಿಕಾನ್ ಸಿಟಿ ಬೆಂಗಳೂರು ಮೆಟ್ರೋಗಿಂತಲೂ ದೆಹಲಿ ಮೆಟ್ರೋ ಬೆಸ್ಟ್ ಅಂತೆ ಯಾಕೆ ಗೊತ್ತಾ?
ಅರ್ಜಿದಾರರು ಫೆಬ್ರವರಿ 2008 ರಲ್ಲಿ ದೂರುದಾರರನ್ನು ಹಿಂದೂ ವಿಧಿಗಳ ಪ್ರಕಾರ ವಿವಾಹವಾಗಿದ್ದಾರೆ. ಅವರ ವಿವಾಹವು 1955 ರ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 494 ಹೇಳೋದೇನು?
ಬಹು ಪತ್ನಿತ್ವವು ನಿರಂತರ ಅಪರಾಧವಾಗಿದೆ. ಎರಡನೇ ಮದುವೆಗೆ ಹೆಂಡತಿಯ ಒಪ್ಪಿಗೆ ಅಪರಾಧವನ್ನು ಪರಿಗಣಿಸಲು ಅಪ್ರಸ್ತುತವಾಗುತ್ತದೆ. ಕಾಯಿದೆಯ ಅನ್ವಯ ಮದುವೆಯಾದ ಬಳಿಕ ಡಿವೋರ್ಸ್ ಪಡೆಯದೇ ಪತಿ ಅಥವಾ ಪತ್ನಿ ಬೇರೋಂದು ಮದುವೆ ಆಗುವುದು ಕಾನೂನು ಬಾಹಿರ. ಅಂತಹವರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
"ನನ್ನ ಮೇಲಿನ ಆರೋಪ ಶುದ್ಧ ಸುಳ್ಳು"
ಇತ್ತ ಅರ್ಜಿದಾರ ನಾನು ಆ ಮಹಿಳೆಯನ್ನು ಮದುವೆಯಾಗಿಲ್ಲ. ನನ್ನನ್ನು ಪ್ರಕರಣದಲ್ಲಿ ಸುಖಾಸುಮ್ಮನೆ ಸಿಲುಕಿಸಲಾಗಿದೆ, ಮದುವೆಯಾಗಿದ್ದಾರೆ ಎಂಬ ಆರೋಪವು ನಿಜವಲ್ಲ ಎಂದು ಅರ್ಜಿದಾರ ಹೇಳಿದ್ದಾನೆ.
ಇದನ್ನೂ ಓದಿ: Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!
ಫಿರ್ಯಾದಿದಾರರೊಂದಿಗಿನ ವಿವಾಹವು ಉಳಿದಿರುವಾಗಲೇ ಅರ್ಜಿದಾರರು ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂಬ ಆರೋಪಕ್ಕೆ ದಾಖಲೆಯಲ್ಲಿ ಯಾವುದೇ ಪುರಾವೆಗಳಿಲ್ಲ, ಈ ಎಲ್ಲಾ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ಕಪೋಲಕಲ್ಪಿತವಾಗಿವೆ ಎಂದಿದ್ದಾರೆ.
ಕೋರ್ಟ್ ಹೀಗೂ ಹೇಳಿದೆ ಗಮನಿಸಿ
ಆಪಾದಿತ ವಿವಾಹದ ಕುರಿತು ಆಕೆ ಯಾವುದೇ ಸಾಕ್ಷಿಗಳನ್ನು ಸಲ್ಲಿಸಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಮದುವೆ ಆಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಇಬ್ಬರೂ ಮದುವೆ ಆಗಿದ್ದರು ಸಹ ಮದುವೆ ಅಸಿಂಧುವಾಗುತ್ತದೆ. ಅರ್ಜಿದಾರ ಕ್ರಿಶ್ಚಿಯನ್ ಆಗಿದ್ದು, ಹಿಂದೂ ಧರ್ಮಕ್ಕೆ ಮತಾಂತರವಾಗಿಲ್ಲ. ಆದ್ದರಿಂದ ಹಿಂದೂ ಧರ್ಮದನ್ವಯ ಮದುವೆಯಾದರೂ ಸಹ ಅದು ಅಸಿಂಧುವಾಗುತ್ತದೆ ಎಂಬುದಾಗಿ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಂತಿಮ ತೀರ್ಪು ಫೆಬ್ರವರಿಗೆ
2017ರ ಆಗಸ್ಟ್ನಲ್ಲಿ ತೆಲಂಗಾಣ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಅಂತಿಮ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದ್ದು, ವಿಚಾರಣೆಯ ತೀರ್ಪು ಹೇಗೆ ಬರಲಿದೆ ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ