Railway Travel Kit - ಭಾರತೀಯ ರೈಲ್ವೆಯ ನೂತನ ಟ್ರಾವೆಲ್ ಕಿಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ದೂರದ ಪ್ರಯಾಣಿಕರು ನಿಶ್ಚಿಂತೆಯಿಂದ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವಂತೆ 150-300 ಬೆಲೆಯ ನೂತನ ಟ್ರಾವೆಲ್ ಕಿಟ್​​ಗಳನ್ನ ಬಿಟ್ಟಿದೆ. ಈ ಕಿಟ್ ಅನ್ನು ಬಳಸಿದ ಬಳಿಕ ನೀವು ಬಿಸಾಡಬಹುದು.

ಭಾರತೀಯ ರೈಲ್ವೆ.

ಭಾರತೀಯ ರೈಲ್ವೆ.

  • News18
  • Last Updated :
  • Share this:
    ಕೊರೋನಾ ಸೋಂಕು ಬಳಿಕ ಇದೀಗ ಜನರು ಕೊಂಚ ನೆಮ್ಮದಿ ಆಗಿದ್ದಾರೆ. ಕೊರೋನಾ ಸೋಂಕು ಬಗ್ಗೆ ಎಚ್ಚರಿಕೆ ವಹಿಸಿ ಮುಂಜಾಗ್ರತೆ ಆಗಿ ಮಾಸ್ಕ್‌ ಧರಿಸಿ ತಮ್ಮ ದೈನಂದಿನ ಕಾರ್ಯಗಳಲ್ಲಿ ಜನರು ತೊಡಗಿಕೊಂಡಿದ್ದಾರೆ. ಕೊರೋನಾ ಸೋಂಕು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು ನೀಡಿದೆ. ರೈಲಿನಲ್ಲಿ ಟ್ರಾವೆಲ್‌ ಮಾಡುವ ವೇಳೆ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡಬಾರದು ಎಂದು ಎಚ್ಚರಿಕೆ ವಹಿಸಿದ ಭಾರತೀಯ ರೈಲ್ವೆ ಇದೀಗ ಕಡಿಮೆ ಬೆಲೆಗೆ ಸುರಕ್ಷಿತವಾಗಿ ಪ್ರಯಾಣಿಸಲು ಬಿಸಾಡಬಹುದಾದ ಟ್ರಾವೆಲ್‌ ಕಿಟ್‌ಗಳ (Disposable Travel Kit) ಸೌಲಭ್ಯವನ್ನು ಆರಂಭಿಸಿದೆ.

    ಕೊರೋನಾ ಸೋಂಕು ಸಂಪೂರ್ಣವಾಗಿ ಕಡಿಮೆ ಆಗದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಈ ಹಿಂದೆ ನೀಡುತ್ತಿದ್ದ ಹಾಸಿಗೆ, ಕಂಬಳಿ ಮತ್ತು ಪರದೆಗಳ ಸೌಲಭ್ಯ ತೆಗೆಯುವಂತಹ ಕಡ್ಡಾಯ ಕ್ರಮಗಳನ್ನು ಕೈಗೊಂಡಿತು. ಇದೀಗ ಅರಾಮದಾಯಕ ಮತ್ತು ಸುರಕ್ಷಿತವಾಗಿ ಬಳಸಿ ಬಿಸಾಡಬಹುದಾದ ಟ್ರಾವೆಲ್‌ ಕಿಟ್‌ ಅನ್ನು ಒದಗಿಸುತ್ತಿದೆ. ವಿಶೇಷವಾಗಿ ದೂರದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ ಟ್ರಾವೆಲ್‌ ಕಿಟ್‌ ಉಪಕಾರಿಯಾಗಿದೆ. ಪ್ರಯಾಣದ ವೇಳೆ ಬಳಸಿದ ಟ್ರಾವೆಲ್ ಕಿಟ್ ಬಿಸಾಡಬಹುದಾಗಿದ್ದು, ಇದರಿಂದ ಪ್ರಯಾಣದ ನಂತರ ನಿಮಗೆ ಲಗೇಜ್‌ ಕಿರಿಕಿರಿ ಆಗುವುದಿಲ್ಲ. ಇನ್ನು, ಬಿಸಾಡಬಹುದಾದ ಟ್ರಾವೆಲ್‌ ಕಿಟ್‌ನ ದರಗಳು ಈ ರೀತಿಯಾಗಿದೆ.

    ಇದನ್ನೂ ಓದಿ: ಕ್ಷಣಾರ್ಧದಲ್ಲಿ ಲೋನ್‌ ನೀಡುತ್ತೇವೆ ಎಂಬ ಸಂದೇಶವಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡದಂತೆ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ ಸಂದೇಶ!

    ಯಾವ ರೈಲ್ವೆ ನಿಲ್ದಾಣದಲ್ಲಿ ಈ ಸೌಲಭ್ಯ ಲಭ್ಯವಿದೆ?

    ಇದೇ ಸೋಮವಾರದಿಂದ ಬಿಸಾಡಬಹುದಾದ ಟ್ರಾವೆಲ್ ಕಿಟ್ ವಿತರಣೆಯನ್ನು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ. ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸೋಂಕಿನ ಮುನ್ನೆಚ್ಚರಿಕೆ ವಹಿಸಲು ಬ್ಯಾಗ್ ಸುತ್ತುವ ಸೇವೆಗಳು 50 ರೂಪಾಯಿಗೆ ಸಿಗಲಿದೆ. ರೈಲ್ವೆ ನಿಲ್ದಾಣಗಳಲ್ಲಿನ ಅಂಗಡಿಯಿಂದ ಪ್ರಯಾಣಿಕರು ಬಿಸಾಡಬಹುದಾದ ಟ್ರಾವೆಲ್ ಕಿಟ್ ಖರೀದಿಸಲು ಅವಕಾಶವನ್ನು ನೀಡಲಾಗಿದೆ. ನವದೆಹಲಿ ರೈಲ್ವೆ ನಿಲ್ದಾಣ ಅಷ್ಟೇ ಅಲ್ಲದೇ ದೆಹಲಿ ಜಂಕ್ಷನ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಕೂಡ ಈ ಸೇವೆ ಲಭ್ಯವಿರುತ್ತದೆ. ಈ ಸೌಲಭ್ಯವು ಶೀಘ್ರದಲ್ಲೇ ಇತರ ನಿಲ್ದಾಣಗಳಲ್ಲಿಯೂ ಪ್ರಾರಂಭವಾಗಲಿದೆ.

    ಕಿಟ್‌ ವೆಚ್ಚ ಎಷ್ಟು? ಎಷ್ಟು ವಿಧ ಗೊತ್ತಾ?

    ಭಾರತೀಯ ರೈಲ್ವೆ ಬಿಸಾಡಬಹುದಾದ ಪ್ರಯಾಣ ಕಿಟ್ ವೆಚ್ಚವು 150 ರೂಪಾಯಿಯಿಂದ 300 ರೂ.ವರೆಗೆ ದೊರೆಯಲಿದೆ. ಪ್ರಯಾಣಿಕರಿಗೆ 3 ವಿಧದ ಬಿಸಾಡಬಹುದಾದ ಟ್ರಾವೆಲ್ ಕಿಟ್‌ಗಳ ಸೌಲಭ್ಯಗಳು ಲಭ್ಯವಿವೆ. ಕಿಟ್‌ನಲ್ಲಿರುವ ವಸ್ತುಗಳು ಹೆಚ್ಚಿನ ಹಣ ನೀಡಿದಂತೆ ಪ್ರಯಾಣಿಕರಿಗೆ ಹೆಚ್ಚಿನ ವಸ್ತುಗಳು ಸಿಗಲಿವೆ.

    ಇದನ್ನೂ ಓದಿ: ಟಿಕ್...ಟಿಕ್... ಬರುತ್ತಿದೆ ಮನುಕುಲದ ಅಂತ್ಯದ ಕಾಲ!?

    ಬಿಸಾಡಬಹುದಾದ ಪ್ರಯಾಣ ಶುಭೋದಯ ಕಿಟ್

    ಶುಭೋದಯ ಕಿಟ್‌ ಇದು ಬೆಳಗಿನ ಜಾವ ಪ್ರಯಾಣಿಸುವವರಿಗೆ ಹೆಚ್ಚು ಸೂಕ್ತ. ನಿಮಗೆ ಹಾಸಿಗೆ ಮತ್ತು ಕಂಬಳಿ ಅಗತ್ಯವಿಲ್ಲದಿದ್ದರೆ ಈ ಶುಭೋದಯ ಕಿಟ್ ಹೆಚ್ಚು ಸೂಕ್ತ. ಈ ಕಿಟ್‌ನಲ್ಲಿ ಟೂತ್‌ಪೇಸ್ಟ್ ಮತ್ತು ಟೂತ್ ಬ್ರಷ್ ದೊರೆಯುತ್ತದೆ.

    150 ರೂ. ಕಿಟ್: ದೂರದ ಸ್ಥಳಕ್ಕೆ ಪ್ರಯಾಣಿಸುವವರು ಟ್ರಾವೆಲ್‌ ಕಿಟ್‌ 150 ರೂ. ಖರೀದಿಸಿದರೇ ಹೆಚ್ಚು ಅನುಕೂಲ ಆಗಲಿದೆ. ಈ ಕಿಟ್‌ನಲ್ಲಿ ಪ್ರಯಾಣಿಕರಿಗೆ ಒಂದು ಕಂಬಳಿ ಇರುತ್ತದೆ.

    300 ರೂ. ಕಿಟ್: ತುಂಬಾ ದೂರದ ಪ್ರಯಾಣದಲ್ಲಿದ್ದರೇ ನೀವು ಬಿಸಾಡಬಹುದಾದ ಟ್ರಾವೆಲ್‌ ಕಿಟ್‌ 300 ರೂ. ಖರೀದಿ ಮಾಡಬಹುದು. ಈ ಕಿಟ್‌ನಲ್ಲಿ ಪೂರ್ಣ ಪ್ರಮಾಣದ ಪ್ಯಾಕೇಜ್ ಇರುತ್ತದೆ. ಈ ಕಿಟ್‌ನಲ್ಲಿ ಕಂಬಳಿ, ಬೆಡ್‌ಶೀಟ್, ದಿಂಬು ಮತ್ತು ಇನ್ನೂ ಪ್ರಯಾಣಿಕರಿಗೆ ಪ್ರಯಾಣದ ವೇಳೆ ಬೇಕಾಗುವ ಕೆಲವು ಅಗತ್ಯ ವಸ್ತುಗಳು ಇರುತ್ತವೆ.

    ಮಾಹಿತಿ ಮೂಲ: ಎಎನ್‌ಐ
    Published by:Vijayasarthy SN
    First published: