• Home
  • »
  • News
  • »
  • national-international
  • »
  • Mohan Bhagwat: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ', ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್

Mohan Bhagwat: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ', ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್

ಆರ್​ ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್​ ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಮಾತನಾಡಿ, ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ ಎಂದರು.

  • News18 Kannada
  • Last Updated :
  • New Delhi, India
  • Share this:

ನವದೆಹಲಿ(ನ.16): ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸರ್ಸಂಘಚಾಲಕ್ ಮೋಹನ್ ಭಾಗವತ್ (Mohan Bhagawat)ಅವರು ಮಂಗಳವಾರ ಮಾತನಾಡಿ, ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' (Hindu) ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಎಲ್ಲ ರಸ್ತೆಗಳೂ ಒಂದೇ ಜಾಗಕ್ಕೆ ಹೋಗುವ ಕಾರಣ ಪೂಜೆ ಮಾಡುವ ಪದ್ಧತಿಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದರು. ಛತ್ತೀಸ್‌ಗಢದ (Chhattisgarh) ಸುರ್ಗುಜಾ ಜಿಲ್ಲೆಯ ಪ್ರಧಾನ ಕಛೇರಿಯಾದ ಅಂಬಿಕಾಪುರದಲ್ಲಿ ಸ್ವಯಂಸೇವಕರ (ಸಂಘದ ಸ್ವಯಂಸೇವಕರು) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಭಾರತದ ಪ್ರಾಚೀನ ವಿಶೇಷತೆಯಾಗಿದೆ. ಜಗತ್ತಿನಲ್ಲಿ ಹಿಂದುತ್ವ ಎಂಬ ಒಂದೇ ಒಂದು ಕಲ್ಪನೆ ಇದೆ, ಅದು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.


ಆರ್‌ಎಸ್‌ಎಸ್‌ನ ಸರ್ಸಂಘಚಾಲಕ್ ಭಾಗವತ್ ಮಾತನಾಡಿ, “ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ ಎಂದು ನಾವು 1925 ರಿಂದ ಹೇಳುತ್ತಿದ್ದೇವೆ. ಭಾರತವನ್ನು ತನ್ನ ತಾಯಿ, ಮಾತೃಭೂಮಿ ಎಂದು ಪರಿಗಣಿಸುವ, ಇಲ್ಲಿ ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯನ್ನು ಬದುಕಲು ಬಯಸುವ, ಅದಕ್ಕಾಗಿ ಶ್ರಮಿಸುವವನು, ಯಾವುದೇ ಭಾಷೆ, ಆಹಾರ, ಆಚಾರ-ವಿಚಾರ ಹೀಗೆ ಯಾವುದೇ ರೀತಿಯಲ್ಲಿ ಪೂಜಿಸಲಿ, ಆದರೆ ಅವನು ಹಿಂದೂ. ವಿಶ್ವದಲ್ಲಿ ಹಿಂದುತ್ವ ಎಂಬ ಒಂದೇ ಒಂದು ವಿಚಾರವಿದೆ, ಅದು ವೈವಿಧ್ಯತೆಗಳನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು. ಹಿಂದುತ್ವವು ಸಾವಿರಾರು ವರ್ಷಗಳಿಂದ ಭಾರತದ ನೆಲದಲ್ಲಿ ಎಲ್ಲಾ ವೈವಿಧ್ಯತೆಗಳನ್ನು ಒಟ್ಟುಗೂಡಿಸಿದೆ, ಇದು ಸತ್ಯ ಮತ್ತು ಈ ಸತ್ಯವನ್ನು ಮಾತನಾಡಬೇಕು ಎಂದಿದ್ದಾರೆ.


40 ಸಾವಿರ ವರ್ಷಗಳ ಹಿಂದಿನ 'ಅಖಂಡ ಭಾರತ'ದ ಭಾಗವಾಗಿರುವ ಪ್ರತಿಯೊಬ್ಬ ಭಾರತೀಯ


ಹಿಂದುತ್ವದ ಕಲ್ಪನೆಯ ಪ್ರಕಾರ ವ್ಯಕ್ತಿ ಮತ್ತು ರಾಷ್ಟ್ರೀಯ ವ್ಯಕ್ತಿತ್ವವನ್ನು ನಿರ್ಮಿಸುವುದು ಹಾಗೂ ಜನರಲ್ಲಿ ಐಕ್ಯತೆಯನ್ನು ಬೆಳೆಸುವುದು ಸಂಘದ ಕೆಲಸವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸಲು ಒತ್ತು ನೀಡಿದ ಭಾಗವತ್ ಎಲ್ಲಾ ಭಾರತೀಯರು ಒಂದೇ ಡಿಎನ್‌ಎ ಹೊಂದಿದ್ದಾರೆ ಮತ್ತು ಒಂದೇ ಪೂರ್ವಜರನ್ನು ಹೊಂದಿದ್ದಾರೆ ಎಂದು ಪುನರುಚ್ಚರಿಸಿದರು.


ಇದನ್ನೂ ಓದಿ: IMR Drops: ಹೆಣ್ಣು ಶಿಶು ಮರಣ ದರ ಇಳಿಕೆ; ಸದ್ಯದ ಶಿಶು ಮರಣ ಪ್ರಮಾಣ ಎಷ್ಟಿದೆ? ಇಲ್ಲಿದೆ ನೋಡಿ


ವೈವಿಧ್ಯತೆಯ ಹೊರತಾಗಿಯೂ ನಾವೆಲ್ಲರೂ ಒಂದೇ. ನಮ್ಮ ಪೂರ್ವಜರೂ ಹಾಗೆಯೇ ಇದ್ದರು. 40 ಸಾವಿರ ವರ್ಷಗಳಷ್ಟು ಹಳೆಯದಾದ 'ಅಖಂಡ ಭಾರತ'ದ ಭಾಗವಾಗಿರುವ ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಒಂದೇ ಆಗಿರುತ್ತದೆ. ನಮ್ಮ ಪೂರ್ವಜರು ಪ್ರತಿಯೊಬ್ಬರು ತಮ್ಮ ತಮ್ಮ ನಂಬಿಕೆ ಮತ್ತು ಆರಾಧನಾ ವಿಧಾನಕ್ಕೆ ಅಂಟಿಕೊಳ್ಳಬೇಕು ಮತ್ತು ಇತರರ ನಂಬಿಕೆ ಮತ್ತು ಆರಾಧನೆಯ ವಿಧಾನವನ್ನು ಬದಲಾಯಿಸಲು ಪ್ರಯತ್ನಿಸಬಾರದು ಎಂದು ಕಲಿಸಿದ್ದರು. ಎಲ್ಲಾ ರಸ್ತೆಗಳು ಒಂದೇ ಸ್ಥಳಕ್ಕೆ ಹೋಗುತ್ತವೆ ಎಂದಿದ್ದಾರೆ.


ಪ್ರತಿಯೊಬ್ಬರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಿ, ಎಲ್ಲರನ್ನು ಸ್ವೀಕರಿಸಿ


ಪ್ರತಿಯೊಬ್ಬರ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಿ, ಎಲ್ಲರನ್ನೂ ಸ್ವೀಕರಿಸಿ ಮತ್ತು ನಿಮ್ಮದೇ ಆದ ಮಾರ್ಗವನ್ನು ಅನುಸರಿಸಿ ಎಂದು ಭಾಗವತ್ ಹೇಳಿದರು. ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ, ಆದರೆ ಇತರರ ಯೋಗಕ್ಷೇಮವನ್ನು ಕಾಳಜಿ ವಹಿಸದಂತಹ ಸ್ವಾರ್ಥಿಯಾಗಬೇಡಿ. ಸರ್ಸಂಘಚಾಲಕ್, 'ನಮ್ಮ ಸಂಸ್ಕೃತಿ ನಮ್ಮನ್ನು ಸಂಪರ್ಕಿಸುತ್ತದೆ. ನಾವು ಪರಸ್ಪರ ಎಷ್ಟೇ ಜಗಳವಾಡಿದರೂ, ಬಿಕ್ಕಟ್ಟಿನ ಸಮಯದಲ್ಲಿ ನಾವು ಒಂದಾಗುತ್ತೇವೆ. ದೇಶದಲ್ಲಿ ಯಾವುದೇ ರೀತಿಯ ತೊಂದರೆಯಾದಾಗ ನಾವು ಒಟ್ಟಾಗಿ ಹೋರಾಡುತ್ತೇವೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಇಡೀ ದೇಶವೇ ಅದನ್ನು ಎದುರಿಸಲು ಒಗ್ಗಟ್ಟಾಗಿ ನಿಂತಿತ್ತು ಎಂದಿದ್ದಾರೆ.


RSS chief Mohan Bhagwat reply to non vegetarians
ಮೋಹನ್ ಭಾಗವತ್


ಸತ್ಯದ ಹಾದಿಯಲ್ಲಿ ನಡೆಯುವ ಜನರನ್ನು ಸಂಪರ್ಕಿಸುವುದು ಸಂಘದ ಉದ್ದೇಶವಾಗಿದೆ


ಜನಪ್ರಿಯತೆ ಗಳಿಸುವುದು ಮತ್ತು ಪ್ರಭಾವವನ್ನು ಸೃಷ್ಟಿಸುವುದು ಸಂಘದ ಉದ್ದೇಶವಲ್ಲ, ಆದರೆ ಸತ್ಯದ ಮಾರ್ಗದಲ್ಲಿ ನಡೆಯುವ ಮೂಲಕ ಜನರನ್ನು ಸಂಪರ್ಕಿಸುವುದು ಮತ್ತು ಸಮಾಜವನ್ನು ಪ್ರಭಾವಶಾಲಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು. ಇಂದು ಅಂತಹ ಸಂಘ ಇನ್ನೊಂದಿಲ್ಲ ಎಂದು ಭಾಗವತ್ ಹೇಳಿದರು'.


ನೀವು ಸಂಘವನ್ನು ತಿಳಿದುಕೊಳ್ಳಬೇಕಾದರೆ ಅದನ್ನು ಯಾವುದಕ್ಕೂ ಹೋಲಿಸಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸಂಘದ ಕಾರ್ಯವನ್ನು ಅರ್ಥ ಮಾಡಿಕೊಳ್ಳಬೇಕು ಹಾಗಾಗಿ ಹೋಲಿಕೆಯಿಂದ ಅರ್ಥವಾಗುವುದಿಲ್ಲ, ಅಪಾರ್ಥವಾಗುವ ಸಾಧ್ಯತೆ ಇದೆ ಎಂದರು. ಓದು ಬರಹದಿಂದ ಸಂಘದ ಬಗ್ಗೆ ಊಹಿಸಲೂ ಸಾಧ್ಯವಿಲ್ಲ. ಸಂಘವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂಘಕ್ಕೆ ಬರಬೇಕು, ಈ ಮೂಲಕ ಸಂಘವನ್ನು ಒಳಗಿನಿಂದ ನೋಡಬಹುದು, ನಿಮ್ಮ ಸ್ವಂತ ಅನುಭವದಿಂದ ಸಂಘವನ್ನು ಅರ್ಥಮಾಡಿಕೊಳ್ಳಬಹುದು ಎಂದರು.

Published by:Precilla Olivia Dias
First published: