ಕಥುವಾ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ; ಮೂವರಿಗೆ 5 ವರ್ಷ ಜೈಲುವಾಸದ ಶಿಕ್ಷೆ

8 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದ ಸತತ ವಿಚಾರಣೆ ನಡೆಸಿರುವ ಪಠಾಣ್​ಕೋಟ್​ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಶಾಚಿಕ ಕೃತ್ಯ ಸಾಕ್ಷಿ ಸಮೇತ ಋಜುವಾತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಇಂದು ತೀರ್ಪು ಹೊರಬೀಳಲಿದ್ದು, ಇಡೀ ದೇಶ ಈ ತೀರ್ಪಿಗಾಗಿ ಕಾದು ಕುಳಿತಿದೆ.

MAshok Kumar | news18
Updated:June 10, 2019, 5:52 PM IST
ಕಥುವಾ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ; ಮೂವರಿಗೆ 5 ವರ್ಷ ಜೈಲುವಾಸದ ಶಿಕ್ಷೆ
ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಲ್ಲೊಬ್ಬ.
MAshok Kumar | news18
Updated: June 10, 2019, 5:52 PM IST
ಪಠಾಣ್​ಕೋಟ್​ (ಜೂನ್​ 10): ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ 8 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಪಂಜಾಬ್​ನ ಪಠಾಣ್​ಕೋಟ್​ ನ್ಯಾಯಾಲಯ ಇಂದು ನೀಡಿದೆ. ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯಾಧಾರ ಕೊರತೆಯಿಂದ ಒಬ್ಬಾತ ಖುಲಾಸೆಗೊಂಡಿದ್ದಾನೆ.

ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸರಾದ ಆನಂದ್ ದತ್ತ, ತಿಲಕ್ ರಾಜ್ ಮತ್ತು ಸುರೇಂದರ್ ವರ್ಮಾ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ಸಿಕ್ಕಿದೆ. ದೇವಸ್ಥಾನದ ಅರ್ಚಕ ಸಾಂಜಿ ರಾಮ್, ಅವರ ಸಂಬಂಧಿ ಪರ್ವೇಶ್ ಕುಮಾರ್ ಹಾಗೂ ಹಿರಿಪ ಪೊಲೀಸ್ ಅಧಿಕಾರಿ ದೀಪಕ್ ಖಜೂರಿಯಾ ಅವರಿಗೆ ಜೀವಾವಧಿ ಶಿಕ್ಷೆ ಸಿಕ್ಕಿದೆ. ಈ ಪ್ರಕರಣ ಒಟ್ಟು 7 ಆರೋಪಿಗಳ ಪೈಕಿ 6 ಮಂದಿಯ ಆರೋಪ ಸಾಬೀತಾಗಿದ್ದು, ಎಲ್ಲರಿಗೂ ಶಿಕ್ಷೆ ಪ್ರಕಟವಾಗಿದೆ. ಜೀವಾವಧಿ ಶಿಕ್ಷೆ ಪಡೆದ ಸಾಂಜಿ ರಾಮ್​ನ ಪುತ್ರ ವಿಶಾಲ್ ಜಂಗೋತ್ರ ಎಂಬಾತನನ್ನು ಮಾತ್ರ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಪ್ರಕರಣವನ್ನು ಶೀಘ್ರವಾಗಿ ಮುಗಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದನ್ವಯ ಕಳೆದ ಒಂದು ವರ್ಷದಿಂದ ಪಂಜಾಬಿನ ಪಠಾಣ್ ಕೋಟ್ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಪ್ರತಿದಿನ ವಿಚಾರಣೆಗೆ ಒಳಪಡಿಸಲಾಗಿತ್ತು.

ಅತ್ಯಾಚಾರ ಹಾಗೂ ಕೊಲೆಗೆ ಸಂಬಧಿಸಿದಂತೆ ಕಥುವ ಗ್ರಾಮದ ಮುಖಂಡ ಸಂಜಿ ರಾಮ್, ಆತನ ಮಗ ವಿಶಾಲ್, ಗೆಳೆಯರಾದ ಆನಂದ್​ ದತ್ತ ಹಾಗೂ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ, ಸುರೇಂದ್ರ ವರ್ಮ, ಮುಖ್ಯ ಪೇದೆ ತಿಲಕ್ ರಾಜ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಜೂನ್​ 3 ರಂದು ಅಭಿಪ್ರಾಯ ಪಟ್ಟಿದ್ದ ನ್ಯಾಯಮೂರ್ತಿ ತೇಜ್​ವಿಂದರ್​ ಸಿಂಗ್, ಜೂನ್ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು. ಇವತ್ತು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರು, ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇನ್ನೂ ಮೂವರಿಗೆ 5 ವರ್ಷ ಜೈಲುವಾಸ ಶಿಕ್ಷೆ ನೀಡಿ ತೀರ್ಪು ಪ್ರಕಟವಾಗಿದೆ.

ಇದನ್ನೂ ಓದಿ : ಕಥುವಾ ಬಳಿಕ ಸೂರತ್​ನಲ್ಲಿ 8 ವರ್ಷ ಬಾಲಕಿ ಶವ ಪತ್ತೆ; ದೇಹದ ಮೇಲೆ 86 ಗಾಯದ ಗುರುತು
ಪ್ರಕರಣದ ಹಿನ್ನೆಲೆ : ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಲಾಗಿತ್ತು. ಅಲ್ಲದೆ ಸತತ ಮೂರು ದಿನ ಆಕೆಯನ್ನು ಒಂದು ದೇವಾಲಯದಲ್ಲಿ ಇರಿಸಿ ಅತ್ಯಾಚಾರ ಮಾಡಿ ಕೊನೆಗೆ ಕೊಲೆ ಮಾಡಲಾಗಿತ್ತು.

ಬಾಲಕಿ ಅಪಹರಣವಾಗಿ ಮೂರು ದಿನಗಳ ನಂತರ ಆಕೆಯ ಮೃತ ದೇಹ ದೇವಾಲಯದ ಬಳಿ ಪತ್ತೆಯಾಗಿತ್ತು. ಈ ಪ್ರಕರಣ ದೇಶದಾದ್ಯಂತ ಭಾರೀ ಟೀಕೆಗೆ ಹಾಗೂ ಚರ್ಚೆಗೆ ಗುರಿಯಾಯಿತು. ನಂತರ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ತಮಗೆ ಪ್ರಾಣ ಭಯವಿದೆ ಹಾಗೂ ಇಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಮೃತಳ ಪೋಷಕರು ಸುಪ್ರೀಂ ಕೋರ್ಟ್​ಗೆ ದೂರು ಸಲ್ಲಿಸಿದ್ದರು.
Loading...

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ 30 ಕಿಮೀ ದೂರ ವಿರುವ ಪಂಜಾಬ್ ಪ್ರಾಂತ್ಯದ ಪಠಾಣ್​ಕೋಟ್​ಗೆ ಈ ಪ್ರಕರಣವನ್ನು ಸುಪ್ರೀಂ ಹಸ್ತಾಂತರಿಸಿತ್ತು. ಅಲ್ಲದೆ ಪ್ರತಿದಿನ ವಿಡೊಯೋಗಳ ಕ್ಯಾಮರಾಗಳ ನಡುವೆ ವಿಚಾರಣೆ ನಡೆಸಿ ಶೀಘ್ರದಲ್ಲಿ ತೀರ್ಪು ನೀಡಬೇಕು ಎಂದು ಒತ್ತಾಯಿಸಿತ್ತು. ಸತತ ವಿಚಾರಣೆ ನಡೆಸಿರುವ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಶಾಚಿಕ ಕೃತ್ಯ ಸಾಕ್ಷಿ ಸಮೇತ ಋಜುವಾತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಇಂದು ಮಧ್ಯಾಹ್ನ 2ಕ್ಕೆ ಆರೋಪಿಗಳ ಶಿಕ್ಷೆಯ ಪ್ರಮಾಣದ ಕುರಿತ ತೀರ್ಪು ಹೊರಬೀಳಲಿದ್ದು, ಇಡೀ ದೇಶ ಈ ತೀರ್ಪಿಗಾಗಿ ಕಾದು ಕುಳಿತಿದೆ.

ಇದನ್ನೂ ಓದಿ : ಕಥುವಾ, ಉನ್ನಾವೋ ರೇಪ್ ಖಂಡಿಸಿ ಮಧ್ಯರಾತ್ರಿ ಕ್ಯಾಂಡಲ್​ಲೈಟ್ ಮಾರ್ಚ್​​

First published:June 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...