news18 Updated:February 12, 2020, 12:57 PM IST
ಗಿರಿರಾಜ್ ಸಿಂಗ್
- News18
- Last Updated:
February 12, 2020, 12:57 PM IST
ಸಹರಾನ್ಪುರ್(ಫೆ. 12): ಶಾಹೀನ್ ಬಾಗ್ ಪ್ರತಿಭಟನೆಯನ್ನು ಸ್ವಾತಂತ್ರ್ಯ ಪೂರ್ವದ ಖಿಲಾಫತ್ ಆಂದೋಲನಕ್ಕೆ ಹೋಲಿಕೆ ಮಾಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದೀಗ ಉತ್ತರ ಪ್ರದೇಶದ ದೇವೋಬಂದ್ ಪಟ್ಟಣವನ್ನು ಭಯೋತ್ಪಾದನೆಯ ಆವಾಸಸ್ಥಾನವೆಂದು ಟೀಕಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ತರಾಟೆಗೆ ತೆಗೆದುಕೊಂಡ ಅವರು ದೇವೋಬಂದ್ ಪಟ್ಟಣವನ್ನು “ಭಯೋತ್ಪಾದನೆಯ ಗಂಗೋತ್ರಿ” ಎಂದು ಬಣ್ಣಿಸಿದ್ದಾರೆ.
“ಸಿಎಎ ಬಗ್ಗೆ ಜನರಿಗೆ ನಾವು ಅರಿವು ಮೂಡಿಸಲು ವಿಫಲರಾಗಿದ್ದೇವೆ. ಸಿಎಎಯನ್ನು ವಿರೋಧಿಸುತ್ತಿರುವ ದೇವೋಬಂದ್ನ ಜನರು ಉಗ್ರಗಾಮಿಗಳು ಎಂದು ನಾನು ಮೊದಲಿಂದಲೂ ಹೇಳುತ್ತಲೇ ಬಂದಿದ್ದೇನೆ. ದೇವೋಬಂದ್ ಭಯೋತ್ಪಾದನೆ ಗಂಗೋತ್ರಿ ಎಂದು ಈ ಮೊದಲೂ ಹೇಳಿದ್ದೇನೆ. ವಿಶ್ವದ ದೊಡ್ಡ ಉಗ್ರಗಾಮಿಗಳೆಲ್ಲರೂ ಇಲ್ಲಿಯೇ ಹುಟ್ಟಿದವರು. ಹಫೀಜ್ ಸಯೀದ್ ಅವರಂಥವರು ಇಲ್ಲಿಂದಲೇ ಬಂದವರು” ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: LPG Cylinder Price: ಗ್ರಾಹಕರಿಗೆ ಕಹಿಸುದ್ದಿ; ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ
ಸಹರಾನ್ಪುರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.
ಶಾಹೀನ್ ಬಾಗ್ನಲ್ಲಿಯಂತೆ ಸಹರಾನ್ಪುರದ ದೇವೋಬಂದ್ನ ಈದ್ಗಾ ಮೈದಾನದಲ್ಲಿಯೂ ಮಹಿಳೆಯರು ಜನವರಿ 27ರಿಂದಲೂ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಈ ಪ್ರತಿಭಟನೆಗಳನ್ನು ನಿಲ್ಲಿಸುವಂತೆ ಮುಸ್ಲಿಮ್ ಅರ್ಚಕರು ಮಾಡಿಕೊಂಡ ಮನವಿಗೂ ಯಾರೂ ಕಿವಿಗೊಡುತ್ತಿಲ್ಲ. ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಲು ಬಂದ ಧರ್ಮಗುರುಗಳ ವಿರುದ್ಧವೇ ಗೋ ಬ್ಯಾಕ್ ಎಂದು ಘೋಷಣೆ ಕೂಗಲಾಗುತ್ತಿದೆ. ಕೆಲ ಕೋಪೋದ್ರಿಕ್ತ ಮಹಿಳೆಯರಂತೂ ತಮ್ಮ ಕೈಲಿದ್ದ ಬಳೆಗಳನ್ನೇ ಇವರ ವಿರುದ್ಧ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದುಂಟು.
ಆದರೆ, ಇಸ್ಲಾಮ್ನ ಧರ್ಮ ಸಂಘಟನೆಯಾದ
ದಾರುಲ್ ಉಲೂಮ್ ದೇಶಾದ್ಯಂತ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಗಳು ಭಾರತೀಯ ಸಂವಿಧಾನದ ರಕ್ಷಣೆಗೆ ನಡೆಯುತ್ತಿರುವ ಹೋರಾಟವೆಂದು ಪರಿಭಾವಿಸಿ ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ಮುಖ್ಯ ನ್ಯಾಯಮೂರ್ತಿಗೆ ಪತ್ರ ಕೂಡ ಬರೆದಿದೆ. ದೇವೋಬಂದ್ ಅಷ್ಟೇ ಅಲ್ಲ ದೇಶದ ಅನೇಕ ಭಾಗಗಳಲ್ಲಿ ಮುಸ್ಲಿಮರು ಸಿಎಎ ವಿರುದ್ಧ ದಿನವೂ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ದೇಶವಿರೋಧಿಗಳು ಎಂಬಂತೆ ಬಿಜೆಪಿ ಸೇರಿದಂತೆ ಬಲಪಂಥೀಯ ಚಿಂತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಅಬ್ಬರದ ಪ್ರಚಾರ ಮಾಡಿತ್ತು. ಆದರೆ, ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ದೆಹಲಿಯ ಜನರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಅವಧಿಗೆ ಅಧಿಕಾರ ನೀಡಿದ್ದಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
First published:
February 12, 2020, 12:57 PM IST