Afghanistan Crisis| ತ್ವರಿತ ಪರಿಶೀಲನೆಗೆ ಅಫ್ಘಾನಿಸ್ತಾನ ಜನತೆಗೆ ಇ-ವೀಸಾ ಪರಿಚಯಿಸಿದ ಕೇಂದ್ರ ಸರಕಾರ

ಆತಂಕಕಾರಿ ಸನ್ನಿವೇಶದಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳು ರಾಯಭಾರ ಕಚೇರಿಗಳನ್ನು ಮುಚ್ಚಿದ್ದು, ಭಾರತೀಯ ವಾಯುಪಡೆ ಸಿ-17 ವಿಮಾನವು 120ಕ್ಕೂ ಹೆಚ್ಚಿನ ಭಾರತೀಯ ಅಧಿಕಾರಿಗಳೊಂದಿಗೆ ಕಾಬೂಲ್‌ನಿಂದ ಪ್ರಯಾಣ ಬೆಳೆಸಿದೆ.

ಆಯುಧಗಳ ಜೊತೆಗೆ ತಾಲಿಬಾನಿ.

ಆಯುಧಗಳ ಜೊತೆಗೆ ತಾಲಿಬಾನಿ.

 • Share this:

  ಪ್ರಸ್ತುತ ತಾಲಿಬಾನಿಗಳ ವಶದಲ್ಲಿರುವ ಅಪ್ಘಾನಿಸ್ತಾನದಲ್ಲಿರುವ ಜನರಿಗೆ ಕೇಂದ್ರ ಸರಕಾರವು ತುರ್ತು ಇ-ವೀಸಾ ಸೌಲಭ್ಯವಾದ X-Misc ವೀಸಾ ಪರಿಚಯಿಸಿದೆ. ನ್ಯೂಸ್ 18ಗೆ ದೊರಕಿರುವ ಮಾಹಿತಿ ಮೂಲಗಳ ಪ್ರಕಾರ ಈ ಹಿಂದೆ ಅಫ್ಘಾನಿಸ್ತಾ ನವು ಈ ವಿಭಾಗಕ್ಕೆ ಒಳಪಟ್ಟಿರಲಿಲ್ಲ. ರಾಯಭಾರ ಕಚೇರಿಯಲ್ಲಿ ವೀಸಾ ಪಡೆಯುವವರು ದೈಹಿಕವಾಗಿ ಹಾಜರಾಗಬೇಕಿತ್ತು. ಪ್ರಸ್ತುತ ಕಾಬೂಲ್‌ ಪರಿಸ್ಥಿತಿ ಅವಲೋಕಿಸಿ ಅಲ್ಲಿನ ರಾಯಭಾರ ಕಚೇರಿಯೂ ಮುಚ್ಚಿರಬಹುದು. ಅದಕ್ಕಾಗಿ ಇ-ವೀಸಾ ಪರಿಚಯಿಸಲಾಗಿದೆ ಎನ್ನಲಾಗಿದೆ.ನೂತನ ಇ-ವೀಸಾ ಪ್ರಕಾರ ಎಲ್ಲಾ ಅಫ್ಘನ್ ಪ್ರಜೆಗಳು ಧರ್ಮ-ಆಧಾರಿತ ಆದ್ಯತೆಯ ಹೊರತಾಗಿ ಅರ್ಜಿ ಸಲ್ಲಿಸಬಹು ದಾಗಿದೆ. ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಆರಂಭದಲ್ಲಿ ಆರು ತಿಂಗಳ ವೀಸಾ ನೀಡಲಾಗುತ್ತಿದ್ದು ವೀಸಾಕ್ಕೆ ಅಗತ್ಯವಾಗಿರುವ ದಾಖಲೆಗ ಳನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ.


  ತಾಲಿಬಾನ್ ಸಂಘಟನೆಗಳು ಕಾಬೂಲ್ ವಶಪಡಿಸಿಕೊಂಡ ನಂತರ ಅಧ್ಯಕ್ಷರಾದ ಅಶ್ರಫ್ ಘನಿ ದೇಶಬಿಟ್ಟು ಓಡಿಹೋಗಿದ್ದಾರೆ. ಇನ್ನು ಅಫ್ಘಾನ್ ಪ್ರಜೆಗಳು ತಾಲಿಬಾನಿಗಳ ಕ್ರೂರತೆಗೆ ಹೆದರಿ ದೇಶಬಿಡುವ ತೀರ್ಮಾನ ಮಾಡಿದ್ದು ವಿಮಾನಗಳ ರೆಕ್ಕೆಗಳಲ್ಲಿ ಕುಳಿತುಕೊಂಡು ಪ್ರಯಾಣ ನಡೆಸುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ತಮ್ಮ ಜೀವವನ್ನೇ ಪಣಕ್ಕೊಡ್ಡಿ ಬೇರೆ ದೇಶಗಳಿಗೆ ವಲಸೆ ಹೊರಟಿರುವ ಅಫ್ಘನ್ನರು ತಮ್ಮ ತಾಯ್ನಾಡನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.


  ಇನ್ನು ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳು ರಾಯಭಾರ ಕಚೇರಿಗಳನ್ನು ಮುಚ್ಚಿದ್ದು, ಭಾರತೀಯ ವಾಯುಪಡೆ ಸಿ-17 ವಿಮಾನವು 120ಕ್ಕೂ ಹೆಚ್ಚಿನ ಭಾರತೀಯ ಅಧಿಕಾರಿಗಳೊಂದಿಗೆ ಕಾಬೂಲ್‌ನಿಂದ ಪ್ರಯಾಣ ಬೆಳೆಸಿದೆ. ತಾಲಿಬಾನಿಗಳ ಕ್ರೌರ್ಯಕ್ಕೆ ಅಫ್ಘಾನಿಸ್ತಾನ ನಲುಗಿದ್ದು ಅಮೆರಿಕ ಸೇನಾ ಪಡೆಗಳ ಬೆಂಬಲವಿಲ್ಲದೆ ಅಫ್ಘನ್ ಸೇನೆ ತಾಲಿಬಾನಿಗಳನ್ನು ಮಟ್ಟಹಾಕುವಲ್ಲಿ ವಿಫಲವಾಗಿದೆ.


  ಮಹಿಳೆಯ ಶಿಕ್ಷಣ ಹಾಗೂ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡಿರುವ ತಾಲಿಬಾನಿಗಳು ತಮ್ಮ ನಿಯಮಗಳ ವಿರುದ್ಧವಾಗಿ ಉದ್ಯೋಗಕ್ಕೆ ತೆರಳುವ, ಶಿಕ್ಷಣ ಪಡೆಯುವ ಅಂತೆಯೇ ಹೊರಗಡೆ ಓಡಾಡುವ ಮಹಿಳೆಯರನ್ನು ಬಾಲಕಿಯರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ನವೆಂಬರ್ 2020ರಿಂದ ತಾಲಿಬಾನ್ ಕ್ರೌರ್ಯಕ್ಕೆ ನಲುಗಿ ಹೋಗಿರುವ ಹೆಣ್ಣುಮಗಳೊಬ್ಬಳು ತನ್ನ ಮಗು ಹಾಗೂ ಪತಿಯೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾಳೆ.


  ಇದನ್ನೂ ಓದಿ: West Bengal| ಬಂಗಾಳದಲ್ಲಿ ಬಿಜೆಪಿ ಯುವ ಸಂಕಲ್ಪ ಯಾತ್ರೆ; ಶಾಸಕ ಸೇರಿ 30 ಕಾರ್ಯಕರ್ತರ ಬಂಧನ!

  ನ್ಯೂಸ್ 18ಗೆ ಈಕೆ ತನ್ನ ಮನಕಲಕುವ ಕಥೆಯನ್ನು ಬಿಚ್ಚಿಟ್ಟಿದ್ದು ಆಕೆ ಅಫ್ಘಾನಿಸ್ತಾನದ ಪೊಲೀಸ್ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ತಿಂಗಳ ಗರ್ಭಿಣಿ ಎಂಬುದನ್ನು ನೋಡದೇ ಆಕೆ ಉದ್ಯೋಗಕ್ಕೆ ತೆರಳುವುದನ್ನು ಸಹಿಸದ ತಾಲಿಬಾನಿಗಳು ಗುಂಡಿನ ಮಳೆಗೆರೆದು ಕಣ್ಣುಗಳನ್ನು ಚುಚ್ಚಿ ಅಂಧಳನ್ನಾಗಿಸಿದರು. ಆಕೆಯ ದೇಹವನ್ನು ಹೊಕ್ಕಿದ್ದ ಗುಂಡಿನ ಕಲೆಗಳನ್ನು ಮಾಧ್ಯಮದವರಿಗೆ ತೋರಿಸಿದ್ದು ತಾಲಿಬಾನಿಗಳ ಕ್ರೌರ್ಯಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ.


  ಇದನ್ನೂ ಓದಿ: Pegasus| ಪೆಗಾಸಸ್​ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಬಹಿರಂಗಪಡಿಸುವ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ದೇಶದ ಪರಿಸ್ಥಿತಿಯನ್ನು ಉನ್ನತ ಮಟ್ಟದಲ್ಲಿ ಅವಲೋಕನ ನಡೆಸಲಾಗುತ್ತಿದ್ದು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ವಾಣಿಜ್ಯ ಕಾರ್ಯಾಚರಣೆಗಳನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಭಾರತಕ್ಕೆ ಮರಳುವ ಪ್ರಯತ್ನಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣ ವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊ ಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾ ಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧ ದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತ ರರಿಗೆ ಸೋಂಕು ಹಬ್ಬ ದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: