• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • 2002 Gujarat Riots: ಗುಜರಾತ್ ಗಲಭೆ ಪ್ರಕರಣದಲ್ಲಿ ಬಿಜೆಪಿ ನಾಯಕಿ, ಭಜರಂಗದಳ ಮುಖಂಡ ಸೇರಿ ಎಲ್ಲಾ 67 ಆರೋಪಿಗಳ ಖುಲಾಸೆ

2002 Gujarat Riots: ಗುಜರಾತ್ ಗಲಭೆ ಪ್ರಕರಣದಲ್ಲಿ ಬಿಜೆಪಿ ನಾಯಕಿ, ಭಜರಂಗದಳ ಮುಖಂಡ ಸೇರಿ ಎಲ್ಲಾ 67 ಆರೋಪಿಗಳ ಖುಲಾಸೆ

ಗುಜರಾತ್ ಹತ್ಯಾಕಾಂಡ

ಗುಜರಾತ್ ಹತ್ಯಾಕಾಂಡ

2002ರ ಫೆಬ್ರವರಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ಮುಸ್ಲಿಂ ಸಮುದಾಯದ 11 ಮಂದಿಯನ್ನು ಹತ್ಯೆಗೈಯಲಾಗಿತ್ತು. ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದು, ಅವರಲ್ಲಿ 18 ಮಂದಿ ಮಧ್ಯಂತರದಲ್ಲಿ ಸಾವನ್ನಪ್ಪಿದ್ದಾರೆ.

  • Share this:

ಅಹಮದಾಬಾದ್: 2002ರಲ್ಲಿ ಗುಜರಾತ್‌ನಲ್ಲಿ (Gujarat Riots 2002) ನಡೆದ ನರೋಡಾ ಗಾಮ್ ಹತ್ಯಾಕಾಂಡ (Naroda Gam Massacre) ಪ್ರಕರಣದ ಎಲ್ಲಾ 67 ಆರೋಪಿಗಳನ್ನೂ ಖುಲಾಸೆಗೊಳಿಸಿ ಎಸ್‌ಐಟಿ  ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್‌ಕೆ ಬಾಕ್ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ವಿಶೇಷ ಈ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ (Maya Kodnani) ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಪ್ರಮುಖ ಆರೋಪಿಗಳಾಗಿದ್ದರು.


2002ರ ಫೆಬ್ರವರಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ಮುಸ್ಲಿಂ ಸಮುದಾಯದ 11 ಮಂದಿಯನ್ನು ಹತ್ಯೆಗೈಯಲಾಗಿತ್ತು. ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದು, ಅವರಲ್ಲಿ 18 ಮಂದಿ ಮಧ್ಯಂತರದಲ್ಲಿ ಸಾವನ್ನಪ್ಪಿದ್ದಾರೆ. ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್​ಗೆ ಬೆಂಕಿ ಹಚ್ಚಿದ್ದರಿಂದ 58 ಜನರು (ಬಹುತೇಕರು ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರು) ಸಾವನ್ನಪ್ಪಿದ್ದರು. ಮಾರನೇ ದಿನ ಅಹಮದಾಬಾದ್ ನಗರದ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮುಸ್ಲಿಂ ಸಮುದಾಯದ 11 ಮಂದಿಯನ್ನು ಬರ್ಬರವಾಗಿ ಕೊಲೆ ಹಾಕಲಾಗಿತ್ತು.


ಇದನ್ನೂ ಓದಿ: ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಯುಪಿಎ ಸರ್ಕಾರ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್ ಶಾ


ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ), 143 (ಕಾನೂನುಬಾಹಿರ ಸಭೆ), 147 (ಗಲಭೆ), 148 (ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಗಲಭೆ), 120 (ಬಿ) (ಕ್ರಿಮಿನಲ್ ಪಿತೂರಿ) 150 ( ಕೋಮು ಹಿಂಸಾಚಾರಕ್ಕೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ 67 ಆರೋಪಿಗಳನ್ನೂ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.


ಅಮಿತ್ ಶಾ ಸಾಕ್ಷ್ಯ


2010ರಲ್ಲಿ ಆರಂಭವಾದ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ 187 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ ಸುಮಾರು 13 ವರ್ಷಗಳ ಕಾಲ ಆರು ನ್ಯಾಯಾಧೀಶರು ಸತತವಾಗಿ ಪ್ರಕರಣದ ನೇತೃತ್ವ ವಹಿಸಿದ್ದರು ಎಂದು ವಿಶೇಷ ಪ್ರಾಸಿಕ್ಯೂಟರ್ ಸುರೇಶ್ ಶಾ ಹೇಳಿದರು. ಸೆಪ್ಟೆಂಬರ್ 2017 ರಲ್ಲಿ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಪರ ಸಾಕ್ಷಿ ಯಾಗಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ: Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!


ಕ್ರಿಮಿನಲ್ ಆರೋಪ ಹೊತ್ತಿದ್ದ ಮಾಯಾ ಕೊಡ್ನಾನಿ


ನರೋಡಾ ಗಾಮ್ ಹತ್ಯಕಾಂ ಪ್ರಕರಣದಲ್ಲಿ ಮಾಯಾ ಕೊಡ್ನಾನಿಯ ವಿರುದ್ಧ ಗಲಭೆ, ಕೊಲೆ ಮತ್ತು ಕೊಲೆ ಯತ್ನದ ಜೊತೆಗೆ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು. 2002ರಲ್ಲಿ ನಡೆದ ಒಂಬತ್ತು ಪ್ರಮುಖ ಕೋಮು ಗಲಭೆ ಪ್ರಕರಣಗಳಲ್ಲಿ ಒಂದಾಗಿದ್ದ ನರೋಡಾ ಗಾಮ್‌ನಲ್ಲಿ ನಡೆದ ಹತ್ಯಾಕಾಂಡ ಕುರಿತು ಎಸ್ ಐಟಿ ಮತ್ತು ವಿಶೇಷ ನ್ಯಾಯಾಲಯ ತನಿಖೆ ಮತ್ತು ವಿಚಾರಣೆ ನಡೆಸುತ್ತಿದ್ದವು.


ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಸಚಿವರಾಗಿದ್ದ ಮಾಯಾ ಕೊಡ್ನಾನಿ, 97 ಜನರನ್ನು ಕಗ್ಗೊಲೆ ಮಾಡಿದ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಅಪರಾಧಿ ಮತ್ತು 28 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ನಂತರ ಆಕೆಯನ್ನು ಗುಜರಾತ್ ಹೈಕೋರ್ಟ್ ಬಿಡುಗಡೆಗೊಳಿಸಿತ್ತು. ಇದೀಗ ನರೋಡಾ ಗಾಮ್ ಹತ್ಯಕಾಂ ಪ್ರಕರಣದಲ್ಲಿಯೂ ಮಾಯಾ ಕೊಡ್ನಾನಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

top videos
    First published: