ಶೀಘ್ರದಲ್ಲೇ ಆಧಾರ್​ನಿಂದ ನಿಮ್ಮ ಖಾಸಗಿ ಮಾಹಿತಿಯನ್ನು ತೆಗೆಯಬಹುದು

ಈಗಾಗಲೇ ದಾಖಲಾಗಿರುವ ಮಾಹಿತಿ ಹಿಂಪಡೆಯುವ ಕುರಿತು ಆಧಾರ್​ ಕಾಯ್ದೆಗೆ ತಿದ್ದುಪಡಿತರಲು ಸರ್ಕಾರ ಮುಂದಾಗಿದ್ದು, ಈ ಪ್ರಕ್ರಿಯೆ ಈಗಾಗಲೇ ಕೊನೆಯ ಹಂತ ತಲುಪಿದೆ.

Seema.R | news18
Updated:December 6, 2018, 11:17 AM IST
ಶೀಘ್ರದಲ್ಲೇ ಆಧಾರ್​ನಿಂದ ನಿಮ್ಮ ಖಾಸಗಿ ಮಾಹಿತಿಯನ್ನು ತೆಗೆಯಬಹುದು
ಪ್ರಾತಿನಿಧಿಕ ಚಿತ್ರ
Seema.R | news18
Updated: December 6, 2018, 11:17 AM IST
ನವದೆಹಲಿ (ಡಿ.6):  ಆಧಾರ್​ ಮಾಹಿತಿ ಸೋರಿಕೆಯಾಗುತ್ತಿರುವ ಹಿನ್ನಲೆ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅನೇಕರಿಗೆ ಈಗ ಹೊಸ ಸಿಹಿ ಸುದ್ದಿ ಸಿಕ್ಕಿದೆ. ಆಧಾರ್​ನಲ್ಲಿ ಈಗಾಗಲೇ ನೀವು ಲಿಂಕ್​ ಮಾಡಿರುವ ಮಾಹಿತಿ, ನಿಮ್ಮ ಹೆಬ್ಬೆರಳ ಗುರುತನ್ನುಅಳಿಸಿಹಾಕಬಹುದಾಗಿದೆ.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ದಾಖಲಾಗಿರುವ ಮಾಹಿತಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದ ಬೆನ್ನಲ್ಲೇ ಈ ಮಹತ್ತರ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ.  ಈಗಾಗಲೇ ದಾಖಲಾಗಿರುವ ಮಾಹಿತಿ ಹಿಂಪಡೆಯುವ ಕುರಿತು ಆಧಾರ್​ ಕಾಯ್ದೆಗೆ ತಿದ್ದುಪಡಿತರಲು ಸರ್ಕಾರ ಮುಂದಾಗಿದ್ದು, ಈ ಪ್ರಕ್ರಿಯೆ ಈಗಾಗಲೇ ಕೊನೆಯ ಹಂತ ತಲುಪಿದೆ.

ಆಧಾರ್​ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ​ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳವಣಿಗೆ ನಡೆದಿದೆ. ಸುಪ್ರೀಂ ಕೋರ್ಟ್​ ಎಲ್ಲ ಸೇವೆಗಳಿಗೆ ಕಡ್ಡಾಯವಲ್ಲ ಎಂದು ತಿಳಿಸಿದರೂ ಇದಕ್ಕೆ ಸಂವಿಧಾನದ ಮಾನ್ಯತೆ ಇದೆ ಎಂದಿತು.

ಇದನ್ನು ಓದಿ: ಇಂದು ಆರ್​ಬಿಐನಿಂದ ಬಡ್ಡಿ ದರ ಬದಲಾವಣೆ?; ಗಮನಿಸಬೇಕಾದ ನಾಲ್ಕು ಅಂಶಗಳು

ಮೊದಲ ಹಂತದಲ್ಲಿ ಯುಐಡಿಎಐ 18 ವರ್ಷ ತುಂಬಿದ ಯುವಕ/ಯುವತಿ ಆರು ತಿಂಗಳ ಕಾಲ ಮಿತಿಯಲ್ಲಿ ತಮಗೆ ಆಧಾರ ಕುರಿತು ಚಿಂತನೆ ನಡೆಸಿ ಅದನ್ನು ಹಿಂಪಡೆಯುವ ಕುರಿತು ಪ್ರಸ್ತಾಪಿಸಿತ್ತು. ಆದರೆ, ಕಾನೂನು ಸಚಿವಾಲಯ ಬಳಿಕ ಈ ಅವಕಾಶವನ್ನು ಎಲ್ಲ ನಾಗರಿಕರಿಗೂ ಸಿಗಬೇಕು. ಕೆಲವು ನಿರ್ಧಿಷ್ಟ ಗುಂಪುಗಳು ಮಾತ್ರ ಈ ಪ್ರಯೋಜನ ಪಡೆದರೆ ಸಾಲದು ಎಂದು ಅಭಿಪ್ರಾಯ ಪಟ್ಟಿತು.

ಸದ್ಯ ಸರ್ಕಾರದ ಮುಂದೆ ಈ ಪ್ರಸ್ತಾವವಿದ್ದು, ಯಾರಾದರೂ ವ್ಯಕ್ತಿ ತಮ್ಮ ಆಧಾರ್​ ಯೋಜನೆಯಿಂದ ಹೊರ ನಡೆದರೆ ಅವರು ಸರ್ಕಾರದ ಯಾವುದೇ ಯೋಜನೆ ಲಾಭಾ ಪಡೆಯಲು ಸಾಧ್ಯವಾಗುವುದಿಲ್ಲ. ಸಬ್ಸಿಡಿಗಳಲ್ಲಿ ಆಧಾರ್​ ಲಿಂಕ್​ ಮಾಡುವುದು ಕಡ್ಡಾಯವಾಗಿದ್ದು, ಅವರು ಈ ಪ್ರಯೋಜನ ಪಡೆಯುವುದಿಲ್ಲ. ಪ್ಯಾನ್​ ಮಾಹಿತಿ ಯಾರಿಗೆ ಬೇಡವೂ ಅಥವಾ ಯಾರಿಗೆ ಪ್ಯಾನ್​ ಅವಶ್ಯಕತೆ ಇರುವುದಿಲ್ಲವೋ ಅವರಿಗೆ ಇದು ಲಾಭಾವಾಗಲಿದೆ. ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಮಾಡುವುದು ಕಡ್ಡಾಯ ಎಂದು ಈಗಾಗಲೇ ಸುಪ್ರೀಂಕೋರ್ಟ್​ ತಿಳಿಸಿದೆ

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ