ಗೋವಾದಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳು ಫೇಲ್..!


Updated:August 22, 2018, 8:46 PM IST
ಗೋವಾದಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳು ಫೇಲ್..!

Updated: August 22, 2018, 8:46 PM IST
 ನ್ಯೂಸ್ 18 ಕನ್ನಡ 

ಗೋವಾ (ಆಗಸ್ಟ್ 22) :  ಪರೀಕ್ಷೆ ಅಂದ ಮೇಲೆ ಫೇಲೂ, ಪಾಸೂ ಸಾಮಾನ್ಯ ​ ಆದರೆ ಪರೀಕ್ಷೆಗೆ ಹಾಜರಾದವರಲ್ಲಿ ಅಷ್ಟೂ ಜನ ಫೇಲ್​ ಆದ್ರೆ ಏನು ಕಥೆ! ಹೌದು. ಪರೀಕ್ಷೆ ಬರೆದ ಅಷ್ಟೂ ಜನ ಫೇಲ್​ ಆಗಿದ್ದಾರೆ ಎಂದರೆ ನೀವು ನಂಬಲೇಬೇಕು.

ಗೋವಾ ಸರ್ಕಾರದ ಅಕೌಂಟೆಂಟ್​​ ನಿರ್ದೇಶನಾಲಯದ 80 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ8 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಹಾಗೇ ಅಷ್ಟೂ ಜನರು ಜನವರಿ 1ರಂದು ಪರೀಕ್ಷೆಗೆ ಹಾಜರಾಗಿದ್ದರು. ಅದರ ಫಲಿತಾಂಶ  ಹೊರಬಿದ್ದಿದೆ. ವಿಚಿತ್ರ ಅಂದರೆ ಪರೀಕ್ಷೆಯಲ್ಲಿ ಒಬ್ಬರೂ ಪಾಸಾಗಿಲ್ಲ..! ಹಾಜರಾದ ಎಲ್ಲಾ ಅಭ್ಯರ್ಥಿಗಳು ಫೇಲ್ ಆಗಿದ್ದಾರೆ.

ಪರೀಕ್ಷೆ ಅಷ್ಟೊಂದು ಕಠಿಣವಾಗಿರಲಿಲ್ಲ. ಇತರೆ ಸರ್ಕಾರಿ ಕೆಲಸಗಳಿಗೆ ನೀಡುವ ಪರೀಕ್ಷೆಯಂತೆಯೇ ಇತ್ತು. 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ , ಸಂದರ್ಶನಕ್ಕೆ ಅರ್ಹತೆಗೆ ಗಳಿಸಲು 50 ಅಂಕಗಳನ್ನು ಕಡ್ಡಾಯವಾಗಿ ಪಡಯಬೇಕಾಗಿದ್ದು ಆದರೆ  ಒಬ್ಬ ಅಭ್ಯರ್ಥಿಯೂ ಕೂಡ ಕನಿಷ್ಠ ಅಂಕ ಪಡೆಯುವಲ್ಲಿ ಕೂಡ ಸಫಲವಾಗಿಲ್ಲ ಎಂದು ನೇಮಕಾತಿ ಅಧಿಕಾರಿಗಳು ತಿಳಿಸಿದ್ದಾರೆ.

 ಗೋವಾ ವಿಶ್ವವಿದ್ಯಾಲಯ ಮತ್ತು ಕಾಮರ್ಸ್ ಕಾಲೇಜುಗಳಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಗೋವಾಗದಲ್ಲಿ  ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಡವಾಂವ್ಕರ್  ಟೀಕಿಸಿದ್ದಾರೆ.

 

 
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ