ಪಕ್ಷದೊಂದಿಗಿನ ಮುನಿಸಿಗೆ ಫುಲ್​ಸ್ಟಾಪ್​ ಇಟ್ಟ ಚಾಂದಿನಿಚೌಕ್​ ಶಾಸಕಿ; ಆಪ್​​ ತೊರೆದ ಅಲ್ಕಾ ಲಾಂಬಾ

ಮಂಗಳವಾರ ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ಅವರು ಇಂದು ಅಧಿಕೃತವಾಗಿ ಆಪ್​​ ತೊರೆಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಅಲ್ಕಾ ಲಂಬಾ

ಅಲ್ಕಾ ಲಂಬಾ

  • Share this:
ನವದೆಹಲಿ (ಸೆ.06): ಹಲವು ದಿನಗಳ ಮುನಿಸು ಬಳಿಕ ಚಾಂದಿನಿ ಚೌಕ್​ ಶಾಸಕಿ ಅಲ್ಕಾ ಲಾಂಬಾ ಪಕ್ಷ ತೊರೆಯುವ ಬಗ್ಗೆ ಇಂದು ಅಧಿಕೃತ ನಿರ್ಧಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಟ್ವೀಟ್​​ ಮಾಡಿರುವ ಅಲ್ಕಾ ಲಾಂಬಾ, ನಿಮ್ಮ ಪಕ್ಷದ ವಕ್ತಾರರು  ರಾಜೀನಾಮೆ ನೀಡಿ, ನಾವು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ದರ್ಪದಿಂದ ಕೇಳಿದ್ದರು. ಅದರಂತೆಯೇ ನನ್ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ಸ್ವೀಕರಿಸಿ. ಇಲ್ಲಿವರೆಗೆ 'ಆಮ್​ ಆದ್ಮಿ ಪಾರ್ಟಿ'ಯಾಗಿದ್ದ ಇದು ಇನ್ನು ಮುಂದೆ 'ಖಾಸ್​ ಆದ್ಮಿ ಪಾರ್ಟಿ'ಯಾಗಲಿದೆ ಎಂದು ಜರಿದಿದ್ದಾರೆ. (ಬಡವರ ಪಕ್ಷದಿಂದ ಆಪ್ತರ ಪಕ್ಷವಾಗಲಿದೆ).ಮಂಗಳವಾರ ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ಅವರು ಇಂದು ಅಧಿಕೃತವಾಗಿ ಎಎಪಿ ತೊರೆಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
2020ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅವರು ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.

ಈ ಹಿಂದೆ ಮಾತನಾಡಿದ್ದ ಅಲ್ಕಾ ಲಾಂಬಾ, ಆಪ್​​ ಪಕ್ಷದಲ್ಲಿನ ತಮ್ಮ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದರು. ಲಾಂಬಾ ಹೇಳಿಕೆಗೆ ಪ್ರತಿಕ್ರಿಯಿಸಿದ ಪಕ್ಷ ಅವರ ರಾಜೀನಾಮೆಯನ್ನು ಸ್ವೀಕರಿಸುವುದಾಗಿ ತಿಳಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲಿನ ಬಳಿಕ ಪಕ್ಷದ ವಿರುದ್ಧ ಮಾತನಾಡಿದ ಲಾಂಬಾ, ಶಾಸಕರ ಅಧಿಕೃತ ವಾಟ್ಸಾಪ್​ ಗ್ರೂಪ್​ನಿಂದ ತಮ್ಮನ್ನು ತೆಗೆದು ಹಾಕಿದ್ದ ಕ್ರಮಕ್ಕೆ ಖಂಡಿಸಿದರು. ಅಲ್ಲದೇ ಅರವಿಂದ್​ ಕೇಜ್ರಿವಾಲ್​ ಅವರ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದರು.

ಅರವಿಂದ್​ ಕೇಜ್ರಿವಾಲ್​ ರೋಡ್​ ಶೋ ವೇಳೆ ಅವರ ಕಾರಿನ ಹಿಂದೆ ನಡೆಯುವಂತೆ ಪಕ್ಷ ಸೂಚಿಸಿದ ಹಿನ್ನೆಲೆ ಸಿಟ್ಟಾಗಿದ್ದ ಅವರು, ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದರು.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ; ಬೆಳಗಾವಿಗೆ ಮತ್ತೆ ಪ್ರವಾಹ ಭೀತಿ

1984 ರ ಸಿಖ್​ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ವಿಫಲರಾದ ರಾಜೀವ್​ ಗಾಂಧಿ ಅವರಿಗೆ ಭಾರತ ರತ್ನ ನೀಡಿದ್ದು ಸರಿಯಲ್ಲ, ಅದನ್ನು ವಾಪಸ್ಸು ಪಡೆಯಬೇಕು ಎಂಬ ನಿರ್ಣಯವನ್ನು ಆಪ್​  ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಈ ನಿರ್ಣಯಕದ ವಿರುದ್ಧ ಮಾತನಾಡಿದ ಲಾಂಬಾ 'ರಾಜೀವ್​ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ಸು ಪಡೆಯುವ ವಿಧಾನಸಭೆಯ ನಿರ್ಣಯವನ್ನು ನಾನು ಒಪ್ಪುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಕೇಜ್ರಿವಾಲ್​ ಹಾಗೂ ಲಾಂಬಾ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

First published: