HOME » NEWS » National-international » ALKA LAMBA JOINS CONGRESS OFFICIALLY SESR

ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಎಪಿ ಮಾಜಿ ಶಾಸಕಿ ಅಲ್ಕಾ ಲಾಂಬಾ

ಸೆಪ್ಟೆಂಬರ್​ನಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ ಅವರು, ಪಕ್ಷ ಸೇರುವ ಕುರಿತು ಚರ್ಚೆ ನಡೆಸಿದ್ದರು.

Seema.R | news18-kannada
Updated:October 12, 2019, 4:53 PM IST
ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಎಪಿ ಮಾಜಿ ಶಾಸಕಿ ಅಲ್ಕಾ ಲಾಂಬಾ
ಅಲ್ಕಾ ಲಂಬಾ
  • Share this:
ನವದೆಹಲಿ (ಅ.12) ತಮ್ಮ ಪಕ್ಷದ ಶಾಸಕರ ಹಾಗೂ ಮುಖ್ಯಸ್ಥ ಅರವಿಂದ್ಕೇಜ್ರಿವಾಲ್ನಡೆ ವಿರುದ್ಧ ಅಸಮಾಧಾನಹೊಂದಿ ಎಎಪಿ ತೊರೆದಿದ್ದ ಚಾಂದಿನಿ ಚೌಕ್​ ಶಾಸಕಿ ಅಲ್ಕಾ ಲಾಂಬಾ ಇಂದು ಅಧಿಕೃತವಾಗಿ  ಕಾಂಗ್ರೆಸ್​ ಪಕ್ಷವನ್ನು ಸೇರಿದ್ದಾರೆ.

ಇಂದು ಕಾಂಗ್ರೆಸ್​ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರ್ಪಡನೆಯಾಗಿದ್ದು, ಪಿಸಿ ಚಾಕೊ ಮತ್ತು ಇತರೆ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಸೆಪ್ಟೆಂಬರ್​ನಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ ಅವರು, ಪಕ್ಷ ಸೇರುವ ಕುರಿತು ಚರ್ಚೆ ನಡೆಸಿದ್ದರು.

2020ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅವರು ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.

ಅರವಿಂದ್​ ಕೇಜ್ರಿವಾಲ್​ ಹಾಗೂ ಪಕ್ಷದೊಂದಿಗೆ ಬಹಿರಂಗವಾಗಿ ಮುನಿಸು ತೋರಿದ್ದ ಅವರನ್ನು ರಾಜೀನಾಮೆ ನೀಡುವಂತೆ ಪಕ್ಷದ ಸದಸ್ಯರು ತಿಳಿಸಿದ್ದರು.

ಇದನ್ನು ಓದಿ: ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್; ಪಿಎ ರಮೇಶ್​​ ಸಾವಿಗೆ ಪರಮೇಶ್ವರ್​ ನೋವು

1984 ರ ಸಿಖ್​ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ವಿಫಲರಾದ ರಾಜೀವ್​ ಗಾಂಧಿ ಅವರಿಗೆ ಭಾರತ ರತ್ನ ನೀಡಿದ್ದು ಸರಿಯಲ್ಲ, ಅದನ್ನು ವಾಪಸ್ಸು ಪಡೆಯಬೇಕು ಎಂಬ ನಿರ್ಣಯವನ್ನು ಎಎಪಿ  ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಈ ನಿರ್ಣಯಕದ ವಿರುದ್ಧ ಮಾತನಾಡಿದ ಲಾಂಬಾ 'ರಾಜೀವ್​ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನವನ್ನು ವಾಪಸ್ಸು ಪಡೆಯುವ ವಿಧಾನಸಭೆಯ ನಿರ್ಣಯವನ್ನು ನಾನು ಒಪ್ಪುವುದಿಲ್ಲ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಕೇಜ್ರಿವಾಲ್​ ಹಾಗೂ ಲಾಂಬಾ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು

First published: October 12, 2019, 4:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading