• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Hindu-Muslim: ಮುಸ್ಲಿಂ ಕುಟುಂಬದಿಂದ ದುರ್ಗಾದೇವಿಗೆ ಪೂಜೆ! ಹರಕೆ ಅರ್ಪಿಸಿ ಭಾವೈಕ್ಯತೆ ಮೆರೆದ ಸಮುದಾಯ

Hindu-Muslim: ಮುಸ್ಲಿಂ ಕುಟುಂಬದಿಂದ ದುರ್ಗಾದೇವಿಗೆ ಪೂಜೆ! ಹರಕೆ ಅರ್ಪಿಸಿ ಭಾವೈಕ್ಯತೆ ಮೆರೆದ ಸಮುದಾಯ

ಮುಸ್ಲಿಂ ಕುಟುಂಬದಿಂದ ದುರ್ಗಾದೇವಿಗೆ ಪೂಜೆ

ಮುಸ್ಲಿಂ ಕುಟುಂಬದಿಂದ ದುರ್ಗಾದೇವಿಗೆ ಪೂಜೆ

ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದುರ್ಗಾ ಮಾತೆ ಬಳಿ ಕೇಳಿಕೊಂಡಿದ್ದು, ತಮ್ಮ ಆಸೆ ಈಡೇರಿರುವುದರಿಂದ ಮಾತೆಗೆ ಚುನ್ರಿ ಅರ್ಪಿಸಿರುವುದಾಗಿ ಮುಸ್ಲಿಂ ಕುಟುಂಬ ತಿಳಿಸಿದೆ.

  • Local18
  • 2-MIN READ
  • Last Updated :
  • New Delhi, India
  • Share this:

ಅಲಿಗಢ, ಉತ್ತರ ಪ್ರದೇಶ: ನಗರದ ಪ್ರಸಿದ್ಧ ದೇವಾಲಯವೊಂದರಲ್ಲಿ (Temple) ಮುಸ್ಲಿಂ ಕುಟುಂಬವೊಂದು (Muslim Family ದುರ್ಗಾದೇವಿಗೆ (Durga Devi) ಪೂಜೆ ಸಲ್ಲಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಮುದಾಯಕ್ಕೆ (Muslim Community) ಕುಟುಂಬದವರು ದೇವಸ್ಥಾನಕ್ಕೆ ತೆರಳಿ ದೇವತೆಗೆ ಚುನ್ರಿ ಅರ್ಪಿಸಿದರು. ದೆಹಲಿ ಗೇಟ್ ಪ್ರದೇಶದ ಸರೈ ಮಿಯಾನ್‌ನಲ್ಲಿರುವ ದೇವಸ್ಥಾನದಲ್ಲಿ ಈ ಕುಟುಂಬ ದೇವಿಯ ಆಶೀರ್ವಾದ ಪಡೆಯಿತು. ಸೋಮವಾರ ರಾತ್ರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಈ ಕುಟುಂಬ ತಾವೂ ಪ್ರತಿಯೊಂದು ಧರ್ಮವನ್ನು (Religion) ನಂಬುವುದಾಗಿ ಹೇಳಿಕೊಂಡಿದ್ದಾರೆ. ನಂತರ ಅವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ.


ಎಲ್ಲಾ ಧರ್ಮವನ್ನು ನಂಬುವ ಕುಟುಂಬ


ಸೋಮವಾರ ರಾತ್ರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಈ ಕುಟುಂಬ ತಾವೂ ಎಲ್ಲಾ ಧರ್ಮಗಳಲ್ಲೂ ನಂಬಿಕೆ ಇಟ್ಟಿರುವುದಾಗಿ ಹೇಳಿಕೊಂಡಿದೆ. ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದುರ್ಗಾ ಮಾತೆ ಬಳಿ ಕೇಳಿಕೊಂಡಿದ್ದು, ತಮ್ಮ ಆಸೆ ಈಡೇರಿರುವುದರಿಂದ ಮಾತೆಗೆ ಚುನ್ರಿ ಅರ್ಪಿಸಿರುವುದಾಗಿ ಮುಸ್ಲಿಂ ಕುಟುಂಬ ತಿಳಿಸಿದೆ. ಈ ಮೂಲಕ ಮಂದಿರ ಮಸೀದಿ ಹೆಸರಿನಲ್ಲಿ ಸಾಮಾನ್ಯ ಜನರನ್ನು ವಿಭಾಗಿಸಲು ಸಾಧ್ಯವಿಲ್ಲ ಎಂಬ ಭಾವೈಕ್ಯತೆಯ ಸಂದೇಶವನ್ನು ರವಾನಿಸಿದ್ದಾರೆ.


ಇದನ್ನೂ ಓದಿ: Haveri: ಗುರು ಶಿಷ್ಯರ ಸಂಬಂಧ ಸಾರುತ್ತೆ ಹಿಂದೂ ಮುಸ್ಲಿಂ ಸೌಹಾರ್ದತೆಯ ಈ ಅಪರೂಪದ ತಾಣ


ಹಿಂದೂಗಳಂತೆ ಪೂಜೆ ಸಲ್ಲಿಕೆ


ಈ ಮುಸ್ಲಿಂ ಕುಟುಂಬವು ನವರಾತ್ರಿಯ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದೆ ಎಂಬುದನ್ನು ಸ್ಥಳೀಯ ಪ್ರದೇಶದ ನಿವಾಸಿ ಮಂಜಿತ್ ಸಿಂಗ್ ಖಚಿತಪಡಿಸಿದ್ದಾರೆ. ಒಂದೇ ಕುಟುಂಬದ 10-15 ಜನರು ದೇವಾಲಯಕ್ಕೆ ಭೇಟಿ ನೀಡಿ, ಅವರೆಲ್ಲಾ ತಾಯಿಗೆ ಪೂಜೆ ಸಲ್ಲಿಸಿದರು. ನಂತರ ಅಲಂಕಾರಿಕ ವಸ್ತುಗಳು ಮತ್ತು ತೆಂಗಿನಕಾಯಿ ಸೇರಿದಂತೆ ಹಲವು ಪೂಜಾ ಸಾಮಾಗ್ರಿಗಳನ್ನು ಸಹ ಅರ್ಪಿಸಿದರು. ಅವರು ನವರಾತ್ರಿಯಲ್ಲಿ ಹಿಂದೂಗಳು ಮಾಡುವ ಪೂಜಾ ವಿಧಾನವನ್ನೇ ಅನುಸರಿಸಿದರಿ ಎಂದು ಸಿಂಗ್ ಹೇಳಿದ್ದಾರೆ.


ದುರ್ಗಾ ಮಾತೆಯ ಬಳಿ ಹರಕೆ ಕಟ್ಟಿಕೊಂಡಿದ್ದೆವು. ಇದಿಗ ತಮ್ಮ ಆಸೆಗಳು ಈಡೇರಿದ್ದರಿಂದ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.




ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಲು ಬಯಸುತ್ತೇನೆ


ದೇವಿಗೆ ಚುನ್ರಿ ಅರ್ಪಿಸಿದ ಮುಸ್ಲಿಂ ಭಕ್ತ ಸರಾಯ್ ಮಿಯಾನ್ ಜಂಗಲ್ ಗಡಿ ನಿವಾಸಿ ಕಫೀಲ್ ಖುರೇಷಿ ಮಾತನಾಡಿ, " ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಇಂದು ನಾನು ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ. ನಾನು ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಲು ಬಯಸುತ್ತೇನೆ.


ಇಂದು ದೇವಿಗೆ ಆರತಿ, ಪೂಜೆ ಮಾಡುವ ಮೂಲಕ ಒಂದು ಧರ್ಮ ಮತ್ತೊಂದು ಧರ್ಮಕ್ಕೆ ಮಾಡಬೇಕಾದ ಕರ್ತವ್ಯ ಏನು ಎಂಬುದನ್ನು ತೋರಿಸಿದ್ದೇನೆ. ನಮ್ಮ ನಾಯಕ ಅಜ್ಮೀರ್ ಷರೀಫ್ ಕೂಡ ಇಲ್ಲಿಗೆ ಭೇಟಿ ಮಾಡಿ ಚಾದರ್ ಅರ್ಪಿಸಿದ್ದಾರೆ. ನಾನು ಸಂತೋಷದಿಂದ ನನ್ನ ದೇವಿ ಮಾತೆಗೆ ಚುನ್ರಿ ಅರ್ಪಿಸಿದ್ದೇನೆ. ಹಿಂದೂ-ಮುಸ್ಲಿಂರ ಐಕ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ದೇಶದ ಸಮಗ್ರತೆಗಾಗಿ ತಮ್ಮ ಕರ್ತವ್ಯಗಳನ್ನು ಪೂರೈಸಲು ನಾನು ಎಲ್ಲಾ ಸಮಾಜದವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Temple: ಹೆಣ್ಮಕ್ಕಳನ್ನು ಮಗಳಂತೆ ಸಲಹುತ್ತಾಳೆ ಈ ದೇವಿ, ಇಲ್ಲಿನ ದೇವಸ್ಥಾನಕ್ಕೆ ಹೋದ್ರೆ ಹುಡುಗಿಯರ ಸಮಸ್ಯೆಗೆ ಮುಕ್ತಿ!


ಯುಗಾದಿ ವೇಳೆ ನವರಾತ್ರಿ ಆಚರಣೆ


ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಆಚರಿಸುವಂತೆ, ಇದೇ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿಯನ್ನ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರಪ್ರದೇಶದಲ್ಲಿ ಈ ಹಬ್ಬವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಇದು ಭಾರತದಾದ್ಯಂತ ಆಚರಿಸಲಾಗುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಸಂತ ನವರಾತ್ರಿ, ಯುಗಾದಿ ಎಂದೂ ಕೂಡ ಕರೆಯಲಾಗುತ್ತದೆ.


ಈ ವರ್ಷ ಮಾರ್ಚ್‌ 22ರಿಂದ ಮಾರ್ಚ್‌ 30ರವರೆಗೆ 9 ದಿನಗಳ ಕಾಲ ಚೈತ್ರ ನವರಾತ್ರಿ ಆಚರಣೆ ಇರುತ್ತದೆ. ಚೈತ್ರ ಮಾಸದ ನವರಾತ್ರಿಯ ಆಚರಣೆಯಲ್ಲಿ 9 ದಿನಗಳು ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡಿದರೆ ಮನೋಭಿಲಾಷೆಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.


ಆದ್ದರಿಂದಲೇ ಉತ್ತರ ಭಾರತದಲ್ಲಿ ಭಕ್ತರು ಉಪವಾಸವಿದ್ದು, ದುರ್ಗೆಗೆ ನಮಿಸುತ್ತಾರೆ. ದಕ್ಷಿಣ ಭಾರತದಲ್ಲಿರುವ ಅನೇಕ ಜನರೂ ಸಹ ಚೈತ್ರ ನವರಾತ್ರಿಯ ವೇಳೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ.


ಈ ಚೈತ್ರ ನವರಾತ್ರಿಯ ಹಬ್ಬವು ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲು ಮೀಸಲಾಗಿರುತ್ತದೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಸೇರಿದಂತೆ ಎಲ್ಲಾ 9 ಅವತಾರಗಳಿಗೂ ಪ್ರತಿ ದಿನವೂ ಒಂದೊಂದು ಪೂಜೆ ಇರುತ್ತದೆ.

top videos
    First published: