New Traffic Rules: ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ; ಘಟನೆ ನಂತರ ಆತ ಮಾಡಿದ್ದೇನು ಗೊತ್ತಾ?

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ.

Latha CG | news18-kannada
Updated:September 10, 2019, 2:49 PM IST
New Traffic Rules: ಹೆಲ್ಮೆಟ್​ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ; ಘಟನೆ ನಂತರ ಆತ ಮಾಡಿದ್ದೇನು ಗೊತ್ತಾ?
ಕಾರಿನೊಳಗೆ ಹೆಲ್ಮೆಟ್​ ಧರಿಸಿರುವ ವ್ಯಕ್ತಿ
  • Share this:
ಉತ್ತರಪ್ರದೇಶ(ಸೆ.10): ಬೈಕ್​ ಸವಾರರಿಗೆ ಹೆಲ್ಮೆಟ್​ ಕಡ್ಡಾಯ ಎಂದು ಸಂಚಾರಿ ನಿಯಮಗಳಲ್ಲಿ ಹೇಳಲಾಗಿದೆ. ಒಂದು ವೇಳೆ ವಾಹನ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲವಾದರೆ ಟ್ರಾಫಿಕ್​ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಕಾರು ಚಾಲಕರು ಹೆಲ್ಮೆಟ್​​ ಧರಿಸಬೇಕೆಂಬ ನಿಯಮವನ್ನು ಎಲ್ಲಾದರೂ ಕೇಳಿದ್ದೀರಾ? ಕಾರು ಚಾಲಕರು ಕಡ್ಡಾಯವಾಗಿ ಸೀಟ್​ ಬೆಲ್ಟ್​ ಧರಿಸಬೇಕೆಂಬ ನಿಯಮವಿದೆಯೇ ಹೊರತು,  ಹೆಲ್ಮೆಟ್​ ಧರಿಸಬೇಕೆಂಬ ನಿಯಮ ಇಲ್ಲ. ಆದರೆ ಉತ್ತರ ಪ್ರದೇಶದ ಆಲಿಘರ್​​ನಲ್ಲಿ ಟ್ರಾಫಿಕ್​ ಪೊಲೀಸರು ಕಾರು ಚಾಲಕ ಹೆಲ್ಮೆಟ್​ ಧರಿಸಿಲ್ಲ ಎಂದು ದಂಡ ವಿಧಿಸಿದ್ದಾರೆ. ಹೀಗಾಗಿ ಅವರು ಹೆಲ್ಮೆಟ್​ ಹಾಕಿಕೊಂಡೇ ಕಾರು ಚಲಾಯಿಸುತ್ತಿದ್ದಾರೆ.

ಉತ್ತರ ಪ್ರದೇಶದ ಆಲಿಘರ್​​ ವ್ಯಕ್ತಿ  ಪಿಯುಷ್​ ವರ್ಶ್ನೆ ಎಎನ್​ಐ ಜೊತೆ ಮಾತನಾಡಿದ್ದಾರೆ. "ಕಾರು ಚಲಾಯಿಸುವಾಗ ಹೆಲ್ಮೆಟ್​ ಧರಿಸಿಲ್ಲವೆಂದು ಟ್ರಾಫಿಕ್​ ಪೊಲೀಸರು  ಆಗಸ್ಟ್​ 27ರಂದು 500 ರೂ. ದಂಡ ವಿಧಿಸಿ ಇ-ಚಲನ್​​ ನೀಡಿದ್ದರು. ಇ-ಚಲನ್​ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಹೀಗಾಗಿ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್​ ಹಾಕಿಕೊಂಡೇ ಕಾರು ಡ್ರೈವ್​ ಮಾಡುತ್ತಿದ್ದೇನೆ," ಎಂದು ಪಿಯುಷ್​ ಹೇಳಿದ್ದಾರೆ.

ನೂತನ ಮೋಟಾರು ಕಾಯ್ದೆ ತಂದ ಸಾವು; ಸಂಚಾರಿ ಪೊಲೀಸರ ಬಳಿ ವಾಗ್ವಾದ ನಡೆಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಟೆಕ್ಕಿ!

ಇದು, ಸಂಚಾರಿ ಪೊಲೀಸರ ಯಡವಟ್ಟಾಗಿದ್ದು, ಚಲನ್​ ಪರಿಶಿಲನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸದ ಕಾರಣಕ್ಕೆ 500 ರೂ.ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯುಷ್​ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು ಇ-ಚಲನ್​ ಪರಿಶೀಲನೆ ಮಾಡಿದಾಗ, ತಪ್ಪಾಗಿ ದತ್ತಾಂಶ ನಮೂದಾಗಿರುವುದು ತಿಳಿದಿದೆ. ಚಲನ್​ ತಪ್ಪೆಂದು ಗೊತ್ತಾದ ಬಳಿಕ ಅದನ್ನು ಸರಿಪಡಿಸಿದ್ದೇವೆ ಎಂದು ಸಂಚಾರಿ ಪೊಲೀಸ್​ ವರಿಷ್ಠಾಧಿಕಾರಿ ಅಜಿಜುಲ್​ ಹಖ್​ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ