• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Alien: ಜಾರ್ಖಂಡ್​ನಲ್ಲಿ ಏಲಿಯನ್ ಪ್ರತ್ಯಕ್ಷ?; ರಾತ್ರಿ ವೇಳೆ ರಸ್ತೆ ದಾಟಿದ ಬಿಳಿ ಆಕೃತಿಯ ವಿಲಕ್ಷಣ ಪ್ರಾಣಿ!

Alien: ಜಾರ್ಖಂಡ್​ನಲ್ಲಿ ಏಲಿಯನ್ ಪ್ರತ್ಯಕ್ಷ?; ರಾತ್ರಿ ವೇಳೆ ರಸ್ತೆ ದಾಟಿದ ಬಿಳಿ ಆಕೃತಿಯ ವಿಲಕ್ಷಣ ಪ್ರಾಣಿ!

ವಿಡಿಯೋದಲ್ಲಿ ಸೆರೆಯಾದ ವಿಲಕ್ಷಣ ಪ್ರಾಣಿ.

ವಿಡಿಯೋದಲ್ಲಿ ಸೆರೆಯಾದ ವಿಲಕ್ಷಣ ಪ್ರಾಣಿ.

ಜಾರ್ಖಂಡ್‌ನ ಹಜಾರಿಬಾಗ್‌ನಿಂದ ವರದಿಯಾದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಈ ಜೀವಿ ಅನ್ಯ ಗ್ರಹ ಜೀವಿ ಅಥವಾ ಭೂತ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • Share this:

    ರಾಂಚಿ: ಜಾರ್ಖಂಡ್​ನ ಹಜಾರಿಬಾಘ್​ನಲ್ಲಿ ಶನಿವಾರ ಸೆರೆ ಹಿಡಿಯಲಾದ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ವಿಡಿಯೋ ನೋಡಿದವರಲ್ಲಿ ಕುತೂಹಲ, ಭಯ, ಆಶ್ಚರ್ಯದ ಜೊತೆಗೆ ಹಲವು ಪ್ರಶ್ನೆಗಳು ಎದ್ದಿವೆ.


    ಜಗತ್ತಿನಾದ್ಯಂತ ಈವರೆಗೂ ಕೇಳಿಬಂದಿರುವ ಆದರೆ, ಯಾರೂ ಇದುವರೆಗೂ ನೋಡದ ಅನ್ಯಗ್ರಹ ಜೀವಿ ಏಲಿಯನ್ ಜಾರ್ಖಂಡ್​ನ ಹಜಾರಿಬಾಘ್​ನ ಚದ್ವಾ ಡ್ಯಾಂ ಬ್ರಿಡ್ಜ್​ ಬಳಿ ರಾತ್ರಿ ವೇಳೆ ಪತ್ತೆಯಾಗಿದೆ. 


    30 ಸೆಕೆಂಡ್​ಗಳ ಈ ವಿಡಿಯೋದಲ್ಲಿ ವಿಲಕ್ಷಣ ಪ್ರಾಣಿಯೊಂದು ರಾತ್ರಿ ಸಮಯದಲ್ಲಿ  ರಸ್ತೆಯ ಮೇಲೆ ಓಡಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ರಸ್ತೆಯಲ್ಲಿ ಹಲವು ಬೈಕ್ ಸವಾರರು ಈ ಪ್ರಾಣಿಯನ್ನು ಕಂಡು ಆಶ್ಚರ್ಯಚಕಿತವಾಗಿ ಮಾತನಾಡಿಕೊಂಡು ತೆರಳುತ್ತಾರೆ. ಒಂದು ಬೈಕ್ ನಿಲ್ಲಿಸಿ, ಆ ವಿಲಕ್ಷಣ ಪ್ರಾಣಿಯನ್ನು ಸೆರೆ ಹಿಡಿಯಲಾಗಿದೆ. ಬಿಳಿ ಆಕೃತಿಯಲ್ಲಿ ಮನುಷ್ಯ ರೀತಿಯಲ್ಲಿ ಇದ್ದ ಆ ಪ್ರಾಣಿ ರಾತ್ರಿ ವೇಳೆ ಹೈವೇ ದಾಟುವುದು ಕಂಡುಬಂದಿದೆ.


    ಜಾರ್ಖಂಡ್‌ನ ಹಜಾರಿಬಾಗ್‌ನಿಂದ ವರದಿಯಾದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಈ ಜೀವಿ ಅನ್ಯ ಗ್ರಹ ಜೀವಿ ಅಥವಾ ಭೂತ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    ಇದನ್ನು ಓದಿ: Birds: ಜಾಗತಿಕವಾಗಿ ಇಂದು ಬದುಕುಳಿದಿರುವ ಎಲ್ಲಾ ಪ್ರಬೇಧಗಳ ಪಕ್ಷಿಗಳ ಸಂಖ್ಯೆ ಎಷ್ಟು ಗೊತ್ತೇ?









    ಈ ಘಟನೆಯ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಸ್ಥಳೀಯ ಅಧಿಕಾರಿಗಳು ವೀಡಿಯೊ ಸಂಬಂಧ ಯಾವುದೇ ಹೇಳಿಕೆಯನ್ನು ಇನ್ನೂ ನೀಡಿಲ್ಲ. ಏತನ್ಮಧ್ಯೆ, ಇಡೀ ವಿಷಯವು ವಿಸ್ತಾರವಾದ ತಮಾಷೆ ಎಂದು ಹಲವಾರು ಜನರು ಅಚ್ಚರಿ ಪಡುವಂತೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಕಪೋತಕಲ್ಪಿತ ವ್ಯಾಖ್ಯಾನಗಳು ಹರಿದಾಡುತ್ತಿವೆ.

    Published by:HR Ramesh
    First published: