ಇತ್ತೀಚೆಗೆ ಚೀನಾ ಮೂಲದ ಟಿಕ್ಟಾಕ್ ಆ್ಯಪ್ ಬ್ಯಾನ್ ಆಗಿತ್ತು. ಅದರ ಬೆನ್ನಲ್ಲೇ ಆನ್ಲೈನ್ ಮಾರಾಟ ಮಳಿಗೆಯಾದ ಆಲಿಬಾಬಾ ಕಂಪನಿ ಕೂಡ ಬ್ಯಾನ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೀಗ ಅಲಿಬಾಬಾ ಕಂಪನಿ 72 ಸರ್ವರ್ಗಳ ಮಾಹಿತಿಯನ್ನು ಎಗರಿಸಿ ಚೀನಾಗೆ ಕಳುಹಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಹೊರಹಾಕಿದ್ದು, ಆಲಿಬಾಬಾ ಭಾರತದಲ್ಲಿ ಕಾರ್ಯನಿರ್ವಹಿಸುವುದಲ್ಲದೆ, ಚೀನಾ ದೇಶಕ್ಕೆ ಭಾರತೀಯರ ಮಾಹಿತಿಯನ್ನು ಕದ್ದು ನೀಡುತ್ತಿದೆ. ಮಾತ್ರವಲ್ಲದೆ, ದತ್ತಾಂಶ ಮತ್ತು ಇನ್ನಿತರ ಡೇಟಾವನ್ನು ಚೀನಾ ಸರ್ವರ್ ಸರ್ವೀಸ್ ಒದಗಿಸುತ್ತಿದೆ. ಇದು ಚೀನಾ ಅಧಿಕಾರಿಗಳ ವ್ಯವಸ್ಥಿತ ಯೋಜನೆ ಎಂದು ಹೇಳಿದೆ.
ಕೆಲವು ಡಾಡಾ ಸರ್ವರ್ ಏಜೆನ್ಸಿಗಳು ಚೀನಾದ ಸರ್ಕಾರ ಜೊತೆ ಸಂಬಂಧದಲ್ಲಿದ್ದು, ಭಾರತದ ಹಲವಾರು ಮಾಹಿತಿಯನ್ನು ಕದ್ದು ರವಾನಿಸುತ್ತಿದೆ.
ಇತ್ತೀಚೆಗೆ ಚೀನಾ ಮೂಲದ ಹಲವಾರು ಆ್ಯಪ್ಗಳು ಭಾರತೀಯರ ಮಾಹಿತಿಯನ್ನು ಎಗರಿಸುತ್ತಿತ್ತು. ಮಾತ್ರವಲ್ಲದೆ, ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಈ ಕಾರಣಕ್ಕಾಗಿ ಭಾರತದ ಸರ್ಕಾರ ಕಳೆದ ಬಾರಿ ಚೀನಾದ ಅನೇಕ ಆ್ಯಪ್ಗಳನ್ನು ಕಿತ್ತೆಸೆದಿದೆ. ಜೊತೆಗೆ ಭಾರತಿಯರು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ಪ್ಲೇ ಸ್ಟೋರ್ನಿಂದ ಬ್ಯಾನ್ ಮಾಡಿದೆ.
ಇದೀಗ ಆನ್ಲೈನ್ ಮಾರಾಟ ಮಳಿಗೆಯಾದ ಆಲಿಬಾಬಾ ಸಂಸ್ಥೆ ಕೂಡ ಅದೇ ದಾರಿಯಲ್ಲಿದೆ ಎಂಬುದು ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಈ ಆ್ಯಪ್ ಕೂಡ ಬ್ಯಾನ್ ಆಗುವ ಸಾಧ್ಯತೆ ಹೆಚ್ಚಿದೆ. ಮತ್ತೊಮ್ಮೆ ಭಾರತ ಚೀನಾ ದೇಶಕ್ಕೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ