ಜನ್ಮ ದಿನದಂದೇ ಆಲಿಬಾಬಾಗೆ ಜಾಕ್​ ಮಾ ವಿದಾಯ; ಚೀನಾ-ಅಮೆರಿಕ ವಾಣಿಜ್ಯ ಸಮರದ ನಡುವೆ ಸಂಸ್ಥೆಗೆ ಹೊಸ ಸವಾಲು

ದಲಿಯಾನ್​ ವಾಂಡ ಗ್ರೂಪ್​ ಅಧ್ಯಕ್ಷ ವಾಂಗ್​ ಜಿಯಾನ್ಲಿನ್​ ಅವರನ್ನು ಹಿಂದಿಕ್ಕಿ ಜಾಕ್​ ಮಾ ಅವರು 2016ರಲ್ಲಿ ಏಷ್ಯಾ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಪ್ರಸ್ತುತ 41.8 ಬಿಲಿಯನ್​ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮಾ ಅವರು 47.4 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ರಿಲಾಯನ್ಸ್​ ಇಂಡಸ್ಟ್ರೀಸ್​ ಲಿ. ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಂತರದ ಸ್ಥಾನದಲ್ಲಿದ್ದಾರೆ.

HR Ramesh | news18-kannada
Updated:September 10, 2019, 5:47 PM IST
ಜನ್ಮ ದಿನದಂದೇ ಆಲಿಬಾಬಾಗೆ ಜಾಕ್​ ಮಾ ವಿದಾಯ; ಚೀನಾ-ಅಮೆರಿಕ ವಾಣಿಜ್ಯ ಸಮರದ ನಡುವೆ ಸಂಸ್ಥೆಗೆ ಹೊಸ ಸವಾಲು
ಜಾಕ್​ ಮಾ
  • Share this:
ಚೀನಾದ ಅತಿದೊಡ್ಡ ಕಂಪನಿಯಾದ ಆಲಿಬಾಬಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಾಕ್​ ಮಾ ಅವರು ತಮ್ಮ 55ನೇ ವರ್ಷದ ಜನ್ಮ ದಿನದಂದೇ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಬದಲಾಗುತ್ತಿರುವ ಇ-ಕಾಮರ್ಸ್​ ಮತ್ತು ಅಮೆರಿಕ ಚೀನಾ ವಾಣಿಜ್ಯ ಸಮರದ ಕಾರ್ಮೋಡದ ನಡುವೆಯೂ ಜಾಕ್​ ಮಾ ಅವರು ಆಲಿಬಾಬಾ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿರುವುದು ಸಂಸ್ಥೆಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಕಳೆದ ವರ್ಷವೇ ಅವರು ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದರು. ಚೀನಾದ ಸಿರಿವಂತ ಮತ್ತು ಪ್ರಖ್ಯಾತ ಉದ್ಯಮಿಯಾಗಿರುವ ಮಾ, ಸಂಸ್ಥೆಯ ಪಾಲುದಾರಿಕೆ ಸದಸ್ಯರಾಗಿ ಮುಂದುವರೆಯಲಿದ್ದಾರೆ.

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಜಾಕ್​ ಮಾ ಅವರು ಇದೀಗ ನಿವೃತ್ತಿ ಬಳಿಕ ಮತ್ತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆಯುವ ಬಯಕೆ ವ್ಯಕ್ತಪಡಿಸಿದ್ದಾರೆ.

ಚೀನಾದ ರಫ್ತುದಾರರು ಮತ್ತು ಅಮೆರಿಕದ ವ್ಯಾಪಾರಿಗಳ ನಡುವೆ ಸಂಪರ್ಕ ಬೆಸೆಯುವ ಉದ್ದೇಶದಿಂದ ಜಾಕ್​ ಮಾ ಅವರು 1999ರಲ್ಲಿ ಆಲಿಬಾಬಾ ಸಂಸ್ಥೆ ಆರಂಭಿಸಿದ್ದರು. ಇ ಮಾರಾಟ ವಲಯದಿಂದ ಆನ್​ಲೈನ್​ ಬ್ಯಾಂಕಿಂಗ್​, ಮನರಂಜನಾ ಕ್ಷೇತ್ರ ಹಾಗೂ ಕ್ಲೌಡ್​ ಕಂಪ್ಯೂಟಿಂಗ್​ ಕ್ಷೇತ್ರಕ್ಕೂ ಆಲಿಬಾಬಾ ವಿಸ್ತರಿಸಿಕೊಂಡಿದೆ.

ಇದನ್ನು ಓದಿ: ಸುಧಾರಿತ ಜೀವನಕ್ಕಾಗಿ 6 ದಿನ, ಆರು ಸಲ ಲೈಂಗಿಕ ಕ್ರಿಯೆ ನಡೆಸಿ; ಅಲಿಬಾಬ ಜಾಕ್​​ ಮಾ ಸಲಹೆ

2018ರಲ್ಲಿ ಶೇ.23.9ರಷ್ಟಿದ್ದ ಆನ್​ಲೈನ್​ ಮಾರಾಟ 2019ರ ಮೊದಲಾರ್ಧದಲ್ಲಿ ಶೇ.17.8ಕ್ಕೆ ಕುಸಿದಿತ್ತು. ಆದರೆ, ಆಲಿಬಾಬಾ 2019ರ ಮೊದಲಾರ್ಧದಲ್ಲಿ ಶೇ.42ರಷ್ಟು ಆದಾಯ ಹೆಚ್ಚಳವಾಗಿದೆ ಎಂದು ಘೋಷಿಸಿತ್ತು. ಜೂನ್​ನಲ್ಲಿ ಘೋಷಿಸಲಾಗಿರುವ ಸಂಸ್ಥೆಯ ಆದಾಯ 1,19,914 ಕೋಟಿ.

ಆಲಿಬಾಬಾ 30.15 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ್ದು, 66 ಸಾವಿರ ಮಂದಿ ಪೂರ್ಣಾವಧಿ ನೌಕರರು ಇದ್ದಾರೆ.ಚೀನಾದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಜಾಕ್​ ಮಾ 2014ರಲ್ಲಿ ತಮ್ಮ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ನೆರವಾಗುವುದು ಹಾಗೂ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಗಾಗಿ ಮಾ 2.94 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಜಾಕ್​ ಮಾ

ದಲಿಯಾನ್​ ವಾಂಡ ಗ್ರೂಪ್​ ಅಧ್ಯಕ್ಷ ವಾಂಗ್​ ಜಿಯಾನ್ಲಿನ್​ ಅವರನ್ನು ಹಿಂದಿಕ್ಕಿ ಜಾಕ್​ ಮಾ ಅವರು 2016ರಲ್ಲಿ ಏಷ್ಯಾ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಪ್ರಸ್ತುತ 41.8 ಬಿಲಿಯನ್​ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮಾ ಅವರು 47.4 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ರಿಲಾಯನ್ಸ್​ ಇಂಡಸ್ಟ್ರೀಸ್​ ಲಿ. ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಂತರದ ಸ್ಥಾನದಲ್ಲಿದ್ದಾರೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ