ಬಿ-ಟೌನ್​ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನಟ ಅಲಿ ಜಫರ್​

news18
Updated:June 25, 2018, 1:40 PM IST
ಬಿ-ಟೌನ್​ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನಟ ಅಲಿ ಜಫರ್​
news18
Updated: June 25, 2018, 1:40 PM IST
ನ್ಯೂಸ್​ 18 ಕನ್ನಡ 

ಪಾಕಿಸ್ತಾನಿ ನಟ ಹಾಗೂ ಗಾಯಕ ಅಲಿಜಫರ್​ ಬಿ-ಟೌನ್​ ನಟಿಯೊಬ್ಬರ ವಿರುದ್ಧ 100 ಕೋಟಿ ಮಾನನಷ್ಟ ಮೊಕದಮ್ಮೆ ಹೂಡಿದ್ದಾರೆ. ಎರಡು ತಿಂಗಳ ಹಿಂದೆ ಈ ನಟಿ, ನಟ ಅಲಿ ಜಫರ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಮಿಶಾ ಸುಳ್ಳು ಆರೋಪ ಮಾಡಿದ್ದು, ಇದರಿಂದ ನನ್ನ ಮರ್ಯಾದೆಗೆ ಧಕ್ಕೆಯಾಗಿದೆ ಎಂದು ಅಲಿ ಜಫರ್​ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಿಯೊ ನ್ಯೂಸ್​ ವರದಿ ಮಾಡಿರುವ ಪ್ರಕಾರ 2002ರ ಮಾನನಷ್ಟ ಮೊಕದ್ದಮೆ ಕಾಯಿದೆಯಂತೆ ಅಲಿ ಜಫರ್​ ಮೊಕದ್ದಮೆ ಹೂಡಿದ್ದಾರೆ.

'ಬಾಗ್​ ಮಿಲ್ಕ ಬಾಗ್​' ಸಿನಿಮಾದಲ್ಲಿ ಅಭಿನಯಿಸಿರುವ 36 ವರ್ಷದ ನಟಿ ಮಿಶಾ ಶಫಿ, ಅಲಿ ಜಫರ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಟ್ವಿಟರ್​ನಲ್ಲಿಆರಂಭವಾಗಿದ್ದ #MeToo ಅಭಿಯಾನದಲ್ಲಿ ಮಿಶಾ ಸಹ ತಮಗಾಗಿದ್ದ ಲೈಂಗಿಕ ಕಿರುಕುಳದ ಅನುಭವದ ಕುರಿತು ಬರೆದುಕೊಂಡಿದ್ದರು. ಏಪ್ರಿಲ್​ನಲ್ಲಿ ಮಿಶಾ ಮಾಡಿರುವ ಟ್ವೀಟ್​ನಲ್ಲಿ ಅಲಿ ಜಫರ್​ ಒಂದಕ್ಕಿಂತ ಹೆಚ್ಚು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದಿತ್ತು. ಇದನ್ನು ಕಂಡ ಕೂಡಲೇ ಜಫರ್​ ಟ್ವೀಟ್​ ಅನ್ನು ತೆಗೆಯುವಂತೆ ಹೇಳಿದ್ದರು. ಇಲ್ಲವಾದಲ್ಲಿ ಕಾನೂನಿನ ಮೊರೆ ಹೋಗುವುದಾಗಿಯೂ ತಿಳಿಸಿದ್ದರು.

ಅಲ್ಲದೆ ಟ್ವೀಟ್​ ಅನ್ನು ತೆಗೆದು ಕ್ಷಮಾಪಣೆ ಕೇಳುವಂತೆ ಅಲಿ ಈ ಹಿಂದೆ ಮಿಶಾ ಅವರಿಗೆ ನೋಟಿಸ್​ ಕಳುಹಿಸಿದ್ದರಂತೆ. ಇಲ್ಲವಾದಲ್ಲಿ 100 ಕೋಟಿ ಮನಾನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದರಂತೆ.

ಮಿಶಾ ಟ್ವೀಟರ್​ನಲ್ಲಿ ಆರೋಪಿಸುತ್ತಿದ್ದಂತೆಯೇ 38 ವರ್ಷದ ನಟ ಹಾಗೂ ಗಾಯಕ ಅಲಿ ಜಫರ್​ ಈ ವಿಷಯವನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗುವುದಾಗಿ ಟ್ವೀಟ್​ ಮಾಡಿದ್ದರು.

 
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...