• Home
  • »
  • News
  • »
  • national-international
  • »
  • Alcohol: ದೇಶದ ಈ ರಾಜ್ಯದ ಜನರು ಹೆಚ್ಚು ಮದ್ಯ ಸೇವಿಸ್ತಾರೆ! ಕರ್ನಾಟಕದ ಸ್ಥಾನವೆಷ್ಟು?

Alcohol: ದೇಶದ ಈ ರಾಜ್ಯದ ಜನರು ಹೆಚ್ಚು ಮದ್ಯ ಸೇವಿಸ್ತಾರೆ! ಕರ್ನಾಟಕದ ಸ್ಥಾನವೆಷ್ಟು?

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಎರಡು ತೆಲುಗು ಭಾಷಿಕ ರಾಜ್ಯಗಳನ್ನು ಹೊರತುಪಡಿಸಿ, ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿ ಮದ್ಯದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

  • News18 Kannada
  • Last Updated :
  • Karnataka, India
  • Share this:

    ಹೈದರಾಬಾದ್: ತೆಲಂಗಾಣದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮದ್ಯ (Alcohol) ಸೇವಿಸುತ್ತಾರೆ ಎಂದು ಎರಡು ವಿಭಿನ್ನ ಸಮೀಕ್ಷೆಗಳು ಬಹಿರಂಗಪಡಿಸಿವೆ.  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಲಭ್ಯವಿರುವ ಆಲ್ಕೋಹಾಲ್ ಸೇವನೆಯ ಸಮೀಕ್ಷೆಯ ಪ್ರಕಾರ, ತೆಲಂಗಾಣ (Telangana) ಜನಸಂಖ್ಯೆಯ ಹತ್ತೊಂಬತ್ತು ಪ್ರತಿಶತದಷ್ಟು ಜನರು, ಅಥವಾ 50.40 ಲಕ್ಷ ಜನರು  ಮದ್ಯವನ್ನು ಸೇವಿಸುತ್ತಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ನೆರೆಯ ಆಂಧ್ರಪ್ರದೇಶದಲ್ಲಿ (Andhra Pradesh) 65 ಲಕ್ಷಕ್ಕೂ ಹೆಚ್ಚು ಜನರು  ಅಂದರೆ  ಒಟ್ಟು ಜನಸಂಖ್ಯೆಯ 17.3%, ಮದ್ಯ ಸೇವಿಸುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲಿ ಮದ್ಯ ಮಾರಾಟದ ಗ್ರಾಫ್ ಎಂದಿಗೂ ಕೆಳಮುಖವಾಗಿಯೇ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.


    ಇಡೀ ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಎಷ್ಟು?
    ದೇಶದ ಜನಸಂಖ್ಯೆಯ 17.3% ಜನರು ಆಲ್ಕೊಹಾಲ್ ಸೇವಿಸುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಅಂದರೆ, ದೇಶದಲ್ಲಿ ಸುಮಾರು 15.5 ಕೋಟಿ ಮದ್ಯಪಾನಿಗಳಿದ್ದಾರೆ. ಬೆರಳೆಣಿಕೆಯ ದೊಡ್ಡ ರಾಜ್ಯಗಳು ಮಾತ್ರ ದೇಶದ ಸರಾಸರಿಗಿಂತ ಹೆಚ್ಚು ಮದ್ಯಪಾನಿಗಳನ್ನು ಹೊಂದಿವೆ.


    ಯಾವ ರಾಜ್ಯಗಳಲ್ಲಿ ಮದ್ಯಪಾನಿಗಳ ಸಂಖ್ಯೆ ಎಷ್ಟು?
    ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೊರತುಪಡಿಸಿ ಛತ್ತೀಸ್‌ಗಢ (43.5%), ಉತ್ತರ ಪ್ರದೇಶ (29.5%), ಪಂಜಾಬ್ (25.2%), ದೆಹಲಿ (25%) ಉತ್ತರಾಖಂಡ (23.2%) , ಗೋವಾ (28%), ಮಧ್ಯಪ್ರದೇಶ (21.4%), ಒಡಿಶಾ (18.9%), ಪಶ್ಚಿಮ ಬಂಗಾಳ (18.2%) ದೇಶದ ಮದ್ಯ ಸೇವನೆಯ ಸರಾಸರಿಗಿಂತ ಹೆಚ್ಚು ಮದ್ಯಪಾನಿಗಳ ಸಂಖ್ಯೆಯನ್ನು ದಾಖಲಿಸಿವೆ. ದೊಡ್ಡ ರಾಜ್ಯಗಳಲ್ಲಿ, ಬಿಹಾರವು ಅತಿ ಕಡಿಮೆ ಮದ್ಯ ಸೇವನೆ ದರವನ್ನು ಹೊಂದಿದ್ದು, ಕೇವಲ 1% ಜನಸಂಖ್ಯೆಯು ಮಾತ್ರ ಮದ್ಯವನ್ನು ಸೇವಿಸುತ್ತಿದೆ.


    ಇದನ್ನೂ ಓದಿ: Shocking Murder: ಮಗನ ಜೊತೆಗೂಡಿ ಗಂಡನನ್ನೇ ಕೊಂದ ಹೆಂಡ್ತಿ, ದೇಹವನ್ನು 22 ತುಂಡು ಮಾಡಿ ಫ್ರಿಡ್ಜ್​ನಲ್ಲಿಟ್ಲು!​


    ದಕ್ಷಿಣ ಭಾರತದ ಉಳಿದ ರಾಜ್ಯಗಳ ಪ್ರಮಾಣ ಹೀಗಿದೆ
    ಎರಡು ತೆಲುಗು ಭಾಷಿಕ ರಾಜ್ಯಗಳನ್ನು ಹೊರತುಪಡಿಸಿ, ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿ ಮದ್ಯದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ತಮಿಳುನಾಡಿನ 15.5% ಜನಸಂಖ್ಯೆ, ಕೇರಳ (13.5%) ಮತ್ತು ಕರ್ನಾಟಕ (7. 2%) ರಾಷ್ಟ್ರೀಯ ಮದ್ಯಪಾನಿಗಳ ಸರಾಸರಿಗಿಂತ ಕಡಿಮೆಯಾಗಿದೆ. ಸಮೀಕ್ಷೆಯು 18-75 ವರ್ಷ ವಯಸ್ಸಿನ ಜನರನ್ನು ಪರಿಗಣನೆಗೆ ತೆಗೆದುಕೊಂಡಿದೆ.


    ಇದನ್ನೂ ಓದಿ: Mobile Tower Theft: 19 ಲಕ್ಷ ಬೆಲೆಬಾಳುವ ಮೊಬೈಲ್ ಟವರ್ ಕದ್ದೊಯ್ದ ಕಳ್ಳರು!


    ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5 ರ  ಪ್ರಕಾರ ತೆಲಂಗಾಣದಲ್ಲಿ ಪುರುಷರು ದೇಶದ ಇತರ ಯಾವುದೇ ರಾಜ್ಯಗಳ ಜನರಿಗಿಂತ ಹೆಚ್ಚು ಮದ್ಯಪಾನ ಮಾಡುತ್ತಾರೆ. ತೆಲಂಗಾಣದಲ್ಲಿ 15 ವರ್ಷ ಮೇಲ್ಪಟ್ಟ ಸುಮಾರು 43.3% ಪುರುಷರು ಮದ್ಯ ಸೇವಿಸಿದರೆ ಈಶಾನ್ಯ ರಾಜ್ಯ ಸಿಕ್ಕಿಂ 41.1% ರೊಂದಿಗೆ ಎರಡನೇ ಸ್ಥಾನದಲ್ಲಿದೆ.


    ಕೇರಳ ಮೊದಲ ಸ್ಥಾನದಲ್ಲಿಲ್ಲ!
    ಮದ್ಯದ ವಿಷಯದಲ್ಲಿ ಕೇರಳವು ಅತಿ ಹೆಚ್ಚು ಬಳಕೆಯ ಪ್ರಮಾಣವನ್ನು ಹೊಂದಿದೆ ಎಂದು ಹಲವು ವರದಿಗಳು ಉಲ್ಲೇಖಿಸಿದ್ದವು. ಆದರೆ ಈ ಮುನ್ನವೂ ಆಂಧ್ರ ಪ್ರದೇಶ ಮದ್ಯಸೇವನಿಗಳ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿತ್ತು. 


    ಈ ಹಿಂದೆಯೂ ನಡೆದಿತ್ತು ಸಮೀಕ್ಷೆ
    ಜನವರಿ 2014 ರಲ್ಲೂ ಆಂಧ್ರ ಪ್ರದೇಶವು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಶೇಕಡಾವಾರು ಪುರುಷ ಕುಡಿಯುವವರನ್ನು ಹೊಂದಿದೆ ಎಂದು SRS ಬೇಸ್‌ಲೈನ್ ಸಮೀಕ್ಷೆಯು ಬಹಿರಂಗಪಡಿಸಿತ್ತು. ಆಂಧ್ರ ಪ್ರದೇಶದಲ್ಲಿ ವರ್ಷಕ್ಕೆ 34.5 ಲೀಟರ್ ಮತ್ತು ಕೇರಳವು ವರ್ಷಕ್ಕೆ 10.2 ಲೀಟರ್ ಆಲ್ಕೋಹಾಲ್ ಸೇವನೆ ಆಗಿದೆ ಎಂದು  ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ 2011-12 ರ ವರದಿಯೂ ಸಹ ಹೇಳಿತ್ತು. ಕೇರಳ ಮತ್ತು ತಮಿಳುನಾಡಿನ ರಾಜ್ಯ ಸರ್ಕಾರಗಳು ಹಂತ ಹಂತವಾಗಿ ನಿಷೇಧವನ್ನು ಜಾರಿಗೆ ತರಲು ನಿರ್ಧರಿಸುವ ಮೊದಲು 2011-12ರಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು.

    Published by:ಗುರುಗಣೇಶ ಡಬ್ಗುಳಿ
    First published: