20 ಕೋಟಿಗೆ ಹರಾಜಾಯ್ತು ವಿಜ್ಞಾನಿ ಐನ್​ಸ್ಟೀನ್ ಬರೆದ ಗಾಡ್​ ಲೆಟರ್

ನೊಬೆಲ್​​​ ಪ್ರಶಸ್ತಿ ಪುರಸ್ಕೃತ ಐನ್​​ಸ್ಟೀನ್ ಅವರು ಮೃತರಾಗುವುದಕ್ಕಿಂತ ಒಂದು ವರ್ಷ ಮೊದಲು ಈ ಪತ್ರವನ್ನು ಬರೆದಿದ್ದರು.

zahir | news18
Updated:December 9, 2018, 6:53 PM IST
20 ಕೋಟಿಗೆ ಹರಾಜಾಯ್ತು ವಿಜ್ಞಾನಿ ಐನ್​ಸ್ಟೀನ್ ಬರೆದ ಗಾಡ್​ ಲೆಟರ್
ಐನ್​ಸ್ಟೀನ್
  • News18
  • Last Updated: December 9, 2018, 6:53 PM IST
  • Share this:
ನ್ಯೂಯಾರ್ಕ್: ಜರ್ಮನಿಯ ಖ್ಯಾತ ವಿಜ್ಞಾನಿ ಅಲ್ಬರ್ಟ್​ ಐನ್​ಸ್ಟೀನ್ ಅವರು ದೇವರ ಅಸ್ತಿತ್ವ ಹಾಗೂ ಧರ್ಮದ ಕುರಿತು ಬರೆದ ಪತ್ರವು ಬರೋಬ್ಭರಿ 2.89 ಮಿಲಿಯನ್ ಡಾಲರ್​ಗೆ ಹರಾಜಾಗಿದೆ. ಅಂದರೆ ಇದರ ಮೌಲ್ಯ ಭಾರತೀಯ ರೂಪಾಯಿಗಳಲ್ಲಿ ಸುಮಾರು 20 ಕೋಟಿ.

1954 ರಲ್ಲಿ ಜರ್ಮನಿಯ ತತ್ವಜ್ಞಾನಿ ಎರಿಕ್ ಗುಟ್ಕಿಂಡ್ ಅವರಿಗೆ ಐನ್​ಸ್ಟೀನ್ ಈ ಪತ್ರವನ್ನು ಬರೆದಿದ್ದರು. ಎರಿಕ್ ನೀಡಿದ ಚೂಸ್ ಲೈಫ್: ದಿ ಬೈಬ್ಲಿಕಲ್ ಕಾಲ್ ಟು ರಿವೋಲ್ಟ್' ಎಂಬ ಪುಸ್ತಕಕ್ಕೆ ಪ್ರತಿಕ್ರಿಯಿಸಿ ಈ ಪತ್ರವನ್ನು ಕಳುಹಿಸಿದ್ದರು.

ಗಾಡ್​ ಲೆಟರ್


ದೇವರ ಅಸ್ತಿತ್ವ ಮತ್ತು ಧರ್ಮವನ್ನು ಪ್ರಶ್ನಿಸಿ ಬರೆಯಲಾದ ಈ ಪತ್ರವನ್ನು 'ಗಾಡ್ ಲೆಟರ್'​ ಎಂದೇ ಕರೆಯಲಾಗುತ್ತದೆ. ಈ ಪತ್ರದಲ್ಲಿ ದೇವರು ಎಂಬುದು ಕೇವಲ ಒಂದು ಪದವಾಗಿದ್ದು, ಇದು ಮಾನವರ ಬಲಹೀನತೆಯ ಫಲಿತಾಂಶವಾಗಿದೆ ಎಂದು ತಿಳಿಸಿದ್ದರು. ಅಲ್ಲದೆ ಧಾರ್ಮಿಕ ನಂಬಿಕೆ ಹಾಗೂ ತತ್ವಜ್ಞಾನದ ಕುರಿತಂತೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಈ ಪತ್ರದ ಮೂಲಕ ಐನ್​ಸ್ಟೀನ್ ವ್ಯಕ್ತಪಡಿಸಿದ್ದರು.

ನೊಬೆಲ್​​​ ಪ್ರಶಸ್ತಿ ಪುರಸ್ಕೃತ ಐನ್​​ಸ್ಟೀನ್ ಅವರು ಮೃತರಾಗುವುದಕ್ಕಿಂತ ಒಂದು ವರ್ಷ ಮೊದಲು ಈ ಪತ್ರವನ್ನು ಬರೆದಿದ್ದರು. ಈ ಹಿಂದೆ ಐನ್​ಸ್ಟೀನ್ ಅವರು ವಿದ್ಯಾರ್ಥಿಗೆ ಬರೆದಿದ್ದ ಪತ್ರವೊಂದು ಸುಮಾರು 4 ಲಕ್ಷಕ್ಕೆ ಮಾರಾಟವಾಗಿತ್ತು. ಹಾಗೆಯೇ 1928ರಲ್ಲಿ ಥಿಯರಿ ಆಫ್​ ರಿಲೇಟಿವಿಟಿಯ ಕುರಿತು ಬರೆದ ಟಿಪ್ಪಣಿಯು ಸುಮಾರು 73 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು.

First published:December 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ