ರೋಡ್​ ನಿಮ್ಮಪ್ಪನ ಆಸ್ತಿಯಲ್ಲ: ನಿಯಮ ಉಲ್ಲಂಘಿಸಿದವರಿಗೆ ಅಕ್ಷಯ್​ ಕುಮಾರ್​ ಪಾಠ


Updated:August 15, 2018, 3:08 PM IST
ರೋಡ್​ ನಿಮ್ಮಪ್ಪನ ಆಸ್ತಿಯಲ್ಲ: ನಿಯಮ ಉಲ್ಲಂಘಿಸಿದವರಿಗೆ ಅಕ್ಷಯ್​ ಕುಮಾರ್​ ಪಾಠ

Updated: August 15, 2018, 3:08 PM IST
ಬಾಲಿವುಡ್​ ನಟ ಅಕ್ಷಯ್​​ ಕುಮಾರ್​ರವರ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ನಗಿಸುವಂತೆ ಮಾಡಿದರೂ ಇದರ ಹಿಂದಿನ ಸಂದೇಶ ಮಾತ್ರ ಬಹುದೊಡ್ಡದು. ವಿಡಿಯೋದಲ್ಲಿ ಟ್ರಾಫಿಕ್​ ಪೊಲೀಸ್ ವೇಷದಲ್ಲಿ ಕಾಣಿಸಿಕೊಳ್ಳುವ ಅಕ್ಷಯ್​ ಕುಮಾರ್​, ಟ್ರಾಫಿಕ್​ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ವಿಭಿನ್ನವಾಗಿ ಪಾಠ ಕಲಿಸಿದ್ದೃಆಎ. ಈ ವಿಡಿಯೋವನ್ನು ಹಲವಾರು ಮಂದಿ ಶೇರ್​ ಕೂಡಾ ಮಾಡಿದ್ದಾರೆ. ವಿಡಿಯೋದಲ್ಲಿ ಅಕ್ಕಿ ಕೇವಲ ಸೂಪರ್​ ಆ್ಯಕ್ಟಿಂಗ್​ ಮಾಡುವುದರೊಂದಿಗೆ ಮುಖ್ಯವಾದ ಸಂದೇಶವೊಂದನ್ನೂ ನೀಡಿದ್ದಾರೆ. ಮುಂಬೈ ಟ್ರಾಫಿಕ್​ ಪೊಲೀಸ್​ ಪಾತ್ರದಲ್ಲಿ ಕಂಡು ಬರುವ ಅಕ್ಷಯ್​ ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋ ಶೇರ್​ ಮಾಡುತ್ತಾ ರೋಡ್​ ಸೇಫ್ಟಿ ಕುರಿತಾಗಿ ಬರೆದುಕೊಂಡಿರುವ ಅಕ್ಷಯ್​ ಕುಮಾರ್​ "ನಿಮ್ಮ ಹಾಗೂ ಇತರರ ಬಗ್ಗೆ ಜಾಗೃತೆ ವಹಿಸಿ, ಯಾಕೆಂದರೆ ರಸ್ತೆ ಯಾರಪ್ಪನ ಆಸ್ತಿಯೂ ಅಲ್ಲ" ಎಂದಿದ್ದಾರೆ.

ವಿಡಿಯೋದಲ್ಲಿ ತನ್ನ ಕುಟುಂಬ ಮಂದಿಯೊಂದಿಗೆ ಕಾರನ್ನು ಚಲಾಯಿಸಿಕೊಂಡು ಬರುವ ವ್ಯಕ್ತಿಯೊಬ್ಬರು ಲೋಕಮಾನ್ಯ ತಿಲಕ್​ ರಸ್ತೆಯ ನೋ ಎಂಟ್ರಿ ಪ್ರದೇಶಕ್ಕೆ ನುಗ್ಗುತ್ತಾರೆ. ಹೀಗೆ ಮಾಡುತ್ತಿದ್ದಂತೆಯೇ ಎದುರಿನಿಂದ ಟ್ರಾಫಿಕ್​ ಪೊಲೀಸ್​ ಆದ ಅಕ್ಷಯ್​ ಕುಮಾರ್​ ನಿಂತಿರುತ್ತಾರೆ. ಅಕ್ಕಿ ಆ ವ್ಯಕ್ತಿಯನ್ನು ನೋಡುತ್ತಿದ್ದಂತೆಯೇ, ಕಾರಿನಲ್ಲಿರುವ ವ್ಯಕ್ತಿ ಲೋಕಮಾನ್ಯ ತಿಲಕ್​ರವರ ಮಗನೆಂಬ ಧಾಟಿಯಲ್ಲಿ ಹೊಗಳಲಾರಂಭಿಸುತ್ತಾರೆ. ಆದರೆ ಕೊನೆಯಲ್ಲಿ ಇಂದು ಬೆಳಗ್ಗೆಯಷ್ಟೇ ನಿಮ್ಮ ತಂದೆಯ ಭಾವಚಿತ್ರಕ್ಕೆ ಹಾರ ಹಾಕಿ ಬಂದಿರುವುದಾಗಿಯೂ ತಿಳಿಸುತ್ತಾರೆ. ಇದನ್ನು ಕೆಳಿಸಿಕೊಂಡ ಆವ್ಯಕ್ತಿ ತನ್ನ ತತಂದೆ ಇನ್ನೂ ಜೀವಂತವಾಗಿದ್ದಾರೆಂದು ರೇಗಾಡುತ್ತಾರೆ. ಇದನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಅಕ್ಷಯ್​ ಕುಮಾರ್​ "ಹಾಗಾದ್ರೆ ಇದು ನಿಮ್ಮ ತಂದೆಯ ರಸ್ತೆಯಲ್ಲವೇ? ಹಾಗಾದ್ರೆ ನೀವು ನೋ ಎಂಟ್ರಿ ಇರುವ ರಸ್ತೆಗೆ ಯಾಕೆ ಪ್ರವೇಶಿಸಿದ್ರಿ? ಹೀಗೆ ಹೇಳಿ ಅಕ್ಷಯ್​ ಕುಮಾರ್​ ಆ ವ್ಯಕ್ತಿಗೆ ದಂಡ ವಿಧಿಸುತ್ತಾರೆ ಹಾಗೂ ರಸ್ತೆ ಯಾರಪ್ಪನ ಆಸ್ತಿಯೂ ಅಲ್ಲ ಎನ್ನುತ್ತಾರೆ.

ಈವರೆಗೂ ಈ ವಿಡಿಯೋ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಶೇರ್​ ಮಾಡುತ್ತಾ ಟ್ರಾಫಿಕ್​ ನಿಯಮಗಳನ್ನು ಪಾಲಿಸುವಂತೆ ಸಂದೇಶ ನೀಡುತ್ತಿದ್ದಾರೆ.


Loading...

ಟ್ರಾಫಿಕ್​ ರೂಲ್ಟ್​ಗೆ ಸಂಬಂಧಿಸಿದಂತೆ ಇನ್ನೂ ಎರಡು ವಿಡಿಯೋಗಳಲ್ಲಿ ಅಕ್ಷಯ್​ ಕುಮಾರ್​ ಕಾಣಿಸಿಕೊಂಡಿದ್ದು, ಟ್ರಾಫಿಕ್​ ನಿಯಮಗಳನ್ನು ಪಾಲಿಸುವ ಸಂದೇಶ ನೀಡಿದ್ದಾರೆ.

 
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626