ಫೋರ್ಬ್ಸ್​ ಪಟ್ಟಿಯಲ್ಲಿ ಅಕ್ಷಯ್​-ಸಲ್ಮಾನ್: ಸಂಭಾವನೆ ವಿಷಯದಲ್ಲಿ ಖಾನ್​ಗಳನ್ನು ಹಿಂದಿಕ್ಕಿದ ಅಕ್ಷಯ್ ಕುಮಾರ್​​..!​

news18
Updated:August 23, 2018, 5:32 PM IST
ಫೋರ್ಬ್ಸ್​ ಪಟ್ಟಿಯಲ್ಲಿ ಅಕ್ಷಯ್​-ಸಲ್ಮಾನ್: ಸಂಭಾವನೆ ವಿಷಯದಲ್ಲಿ ಖಾನ್​ಗಳನ್ನು ಹಿಂದಿಕ್ಕಿದ ಅಕ್ಷಯ್ ಕುಮಾರ್​​..!​
news18
Updated: August 23, 2018, 5:32 PM IST
ನ್ಯೂಸ್​ 18 ಕನ್ನಡ 

ಅಕ್ಷಯ್​ ಕುಮಾರ್​ ಹಾಗೂ ಸಲ್ಮಾನ್​ ಖಾನ್​ ಅವರ ಅದೃಷ್ಟ ಹೆಚ್ಚು ಚೆನ್ನಾಗಿದೆ ಎಂದರೆ ಕಳೆದ ಕೆಲ ವರ್ಷಗಳಿಂದ ಅವರು ಮುಟ್ಟಿದೆಲ್ಲ ಚಿನ್ನ, ಮಾಡಿದ ಸಿನಿಮಾಗಳೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿವೆ.

ಆದರೂ ಬಿ-ಟೌನ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೆಂದ ಕೂಡಕೇ ಎಲ್ಲರೂ ಹೇಳುವುದು ಶಾರುಖ್​, ಅಮೀರ್​ ಹಾಗೂ ಸಲ್ಮಾನ್​ ಅಂತ. ಆದರೆ ಇವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟರೊಬ್ಬರು ಬಾಲಿವುಡ್​ನಲ್ಲಿ ಇದ್ದಾರೆ. ಅದು ಯಾರು ಗೊತ್ತಾ. ಅವರೇ ನಮ್ಮ ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್​. ಬಾಲಿವುಡ್​ನ ಖಾನ್​ಗಳಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂದರೆ ಅದು ಅಕ್ಷಯ್​ ಕುಮಾರ್​.

ಹೌದು ಈ ಬಾರಿಯ ಫೋರ್ಬ್ಸ್ ನಿಯತಕಾಲಿಕೆ​ ಪ್ರಕಟಿಸಿರುವ ಅತಿ ಹೆಚ್ಚು ಸಂಭಾವನೆ ಪಡೆಯುವ ನೂರು ಮಂದಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್​ನ ಆ್ಯಕ್ಷನ್​ ಕಿಂಗ್​ ಅಕ್ಷಯ್ ಟಾಪ್​ 10ನಲ್ಲಿ 7ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೆಂದು ಕೇವಲ ಅಕ್ಷಯ್​ ಮಾತ್ರವಲ್ಲದೆ, ಬಿ-ಟೌನ್​ನ ಬ್ಯಾಡ್​ ಬಾಯ್​ ಸಲ್ಮಾನ್​ ಹೆಸರು ಸಹ ಪಟ್ಟಿಯಲ್ಲಿದ್ದು, ಅವರು 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಅಕ್ಷಯ್​ ಕುಮಾರ್​ ಅವರ ವಾರ್ಷಿಕ ಆದಾಯ 283.5 ಕೋಟಿ, ಸಲ್ಮಾನ್ ಆದಾಯ 269.5 ಕೋಟಿ. ಕಳೆದ ವರ್ಷ ಅಕ್ಷಯ್​ 227 ಕೋಟಿ ಆದಾಯದಿಂದಾಗಿ 10ನೇ ಸ್ಥಾನದಲ್ಲಿದ್ದರು. ಆಗ ಸಲ್ಮಾನ್​ 237 ಕೋಟಿ ಇದ್ದ ಕಾರಣಕ್ಕೆ 9ನೇ ಸ್ಥಾನದಲ್ಲಿದ್ದರು. ಆದರೆ ಈ ಬಾರಿ ದೀಪಿಕಾ, ಶಾರುಖ್​, ಅಮಿತಾಭ್​ ಅವರ ಹೆಸರುಗಳು ಟಾಪ್​ ಟೆನ್​ ಪಟ್ಟಿಯಲ್ಲಿ ಇಲ್ಲದೇ ಇರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ​

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಾರ್ಜ್​ ಕ್ಲೂನಿ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಹಕ್ಯುಲಸ್​ ಸಿನಿಮಾ ಖ್ಯಾತಿಯ ಡ್ವೇನ್​ ಜಾನ್​ಸನ್​ ಎರಡನೇ ಸ್ಥಾನದಲ್ಲಿ, ಐರನ್​ಮ್ಯಾನ್ ಖ್ಯಾತಿಯ​ ರಾಬರ್ಟ್​ ಡೌನಿ ಜೂನಿಯರ್​ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಜಾಕಿಚಾನ್​, ಕ್ಯಾಪ್ಟನ್​ ಅಮೆರಿಕ ಖ್ಯಾತಿಯ ಕ್ರಿಸ್​​ ಇವ್ಯಾನ್ಸ್​, ಥೋರ್​ ಎಂದೇ ಹೆಸರುವಾಸಿಯಾಗಿರುವ ಕ್ರಿಸ್​ ಹ್ಯಾಮ್ಸ್​ವರ್ತ್​​ ಸಹ ಟಾಪ್​ ಟೆನ್​ನಲ್ಲಿ ಸ್ಥಾನಪಡೆದುಕೊಂಡಿದ್ದಾರೆ.

 
Loading...

 

 
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ