UP Election: ರಂಗೇರಿದ ಯುಪಿ ಚುನಾವಣಾ ಕಣ- ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್ ಯಾದವ್ ನಿರ್ಧಾರ

Akhilesh To Contest In Election: 2012 ರಲ್ಲಿ, ಅವರು ಯುಪಿಯಲ್ಲಿ ಸಮಾಜವಾದಿ ಪಕ್ಷವನ್ನು ದೊಡ್ಡ ಗೆಲುವು ಸಾಧಿಸಿದಾಗ, ಅವರು 38 ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

  • Share this:
ಉತ್ತರ ಪ್ರದೇಶ (Uttar Pradesh) ವಿಧಾನಸಭೆ ಚುನಾವಣೆಯ (Assembly Election)  ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೇ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದ ಅಖಿಲೇಶ್ ಯಾದವ್ (Akhilesh Yadav) ಅವರು ಹಲವು ಗೊಂದಲಗಳ ನಂತರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜ್ಯದ ಪ್ರತಿಯೊಂದು ಸ್ಥಾನದ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡುವುದಾಗಿ ಅವರು ಈ ಹಿಂದೆಯೇ ಹೇಳಿದ್ದರು. ಅಖಿಲೇಶ್ ಯಾದವ್ ಅವರು ಪೂರ್ವ ಉತ್ತರ ಪ್ರದೇಶದ ಅಜಂಗಢದಿಂದ ಲೋಕಸಭೆಯ ಸಂಸದರಾಗಿದ್ದು, ಇದುವರೆಗೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೆ ಈ ಬಾರಿ ಸ್ಫರ್ಧಿಸಲು ನಿರ್ಧರಿಸಿದ್ದು, ಅವರ ಕ್ಷೇತ್ರವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಬಿಜೆಪಿಯ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ  ಅಖಿಲೇಶ್​ ಯಾದವ್​ ಮೇಲೆ ಚುನಾವಣೆಯಲ್ಲಿ ಸ್ವರ್ಧಿಸುವಂತೆ ಒತ್ತಡ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಯೋಗಿ ಆದಿತ್ಯನಾಥ್ ಅವರು ಪೂರ್ವ ಯುಪಿಯ ಗೋರಖ್‌ಪುರ ಸದಾರ್‌ನಿಂದ ಸ್ಪರ್ಧಿಸಲಿದ್ದು,  ಪ್ರಭಾವಿ ಗೋರಖ್‌ಪುರ ಮಠದ ಮುಖ್ಯಸ್ಥರಾಗಿರುವ ರಾಜಕಾರಣಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಈ ಪ್ರದೇಶದಲ್ಲಿ ದೊಡ್ಡ ಲಾಭವನ್ನು ಪಡೆಯಲು ಯೋಜನೆ ಹಾಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಬಿಕಿನಿ ಫೋಟೋಗಳು ಇದೀಗ ಸಖತ್ ವೈರಲ್!

ಮೂಲಗಳ ಪ್ರಕಾರ, ಅಖಿಲೇಶ್ ಯಾದವ್ ಅವರು ಪೂರ್ವ ಯುಪಿ ಅಥವಾ ಲಕ್ನೋದಂತಹ ಮುಖ್ಯ ಭಾಗದಲ್ಲಿ ಒಂದು ಕ್ಷೇತ್ರವನ್ನು  ಆಯ್ಕೆ ಮಾಡಬಹುದು ಎನ್ನಲಾಗಿದೆ. ಇನ್ನು  ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಕೂಡ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವರದಿಗಳ ಬೆನ್ನಲ್ಲೆ ದೆಹಲಿಯಲ್ಲಿ ಅವರ ಅತ್ತಿಗೆ ಅಪರ್ಣಾ ಯಾದವ್ ಅವರು ಬಿಜೆಪಿಗೆ ಸೇರುವ ಸುಳಿವು ಸಿಕ್ಕಿದೆ.

ಬಿಜೆಪಿಯ ಹಲವಾರು ಪ್ರಮುಖ ಹಿಂದುಳಿದ ಜಾತಿ ನಾಯಕರು ಇತ್ತೀಚೆಗೆ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು ಆದರೆ ಅದಕ್ಕೆ ವಿರುದ್ದವಾಗಿ ಬಿಜೆಪಿಗೆ ಅಪರ್ಣಾ ಹೋಗುತ್ತಿದ್ದಾರೆ.  ನವೆಂಬರ್‌ನಲ್ಲಿ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಅಂತಹ ನಿರ್ಧಾರವನ್ನು ಪಕ್ಷವು ಇನ್ನೂ ತೆಗೆದುಕೊಂಡಿಲ್ಲ ಎಂದು ಅವರ ಪಕ್ಷದ ಸದಸ್ಯರು ಸ್ಪಷ್ಟಪಡಿಸಿದ್ದರು.

ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಸಮಾಜವಾದಿ ಪಕ್ಷದ ಸಂಸದರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2012 ರಲ್ಲಿ, ಅವರು ಯುಪಿಯಲ್ಲಿ ಸಮಾಜವಾದಿ ಪಕ್ಷವನ್ನು ದೊಡ್ಡ ಗೆಲುವು ಸಾಧಿಸಿದಾಗ, ಅವರು 38 ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನೂ ಓದಿ: INS Ranvir ನೌಕೆಯಲ್ಲಿ ಸ್ಪೋಟ ಮೂವರು ಸಾವು; 11ಮಂದಿಗೆ ಗಾಯ

ಆ ಸಮಯದಲ್ಲಿ ಅವರು ಕನೌಜ್‌ನಿಂದ ಲೋಕಸಭೆಯ ಸಂಸದರಾಗಿದ್ದರು.  ನಂತರ ರಾಜ್ಯ ವಿಧಾನ ಪರಿಷತ್ತಿನ ಮೂಲಕ ಮುಖ್ಯಮಂತ್ರಿಯಾದರು. ಅವರ ಪತ್ನಿ ಡಿಂಪಲ್ ಯಾದವ್ ಅವರು ಪತಿಯಿಂದ ತೆರವಾದ ಕನ್ನೌಜ್ ಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
Published by:Sandhya M
First published: