ಹೋಟೆಲ್​ ಯೋಜನೆ ಬಿಟ್ಟು, ಬಂಗಲೆ ನಿರ್ಮಾಣಕ್ಕೆ ಮುಂದಾದ ಉತ್ತರ ಪ್ರದೇಶ ಮಾಜಿ ಸಿಎಂ


Updated:September 1, 2018, 12:48 PM IST
ಹೋಟೆಲ್​ ಯೋಜನೆ ಬಿಟ್ಟು, ಬಂಗಲೆ ನಿರ್ಮಾಣಕ್ಕೆ ಮುಂದಾದ ಉತ್ತರ ಪ್ರದೇಶ ಮಾಜಿ ಸಿಎಂ
  • Share this:
ನ್ಯೂಸ್​ 18 ಕನ್ನಡ

ಲಕ್ನೋ (ಸೆ.01):  ಪ್ರತಿಷ್ಠಿತ ವಿಕ್ರಮಾದಿತ್ಯ ಮಾರ್ಗದಲ್ಲಿ ಹೋಟೆಲ್​ ನಿರ್ಮಾಣಕ್ಕೆ ಮುಂದಾಗಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ ಯೋಜನೆಗೆ ಅಲಹಾಬಾದ್​ ನ್ಯಾಯಾಲಯ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಕೈ ಬಿಟ್ಟು ಅಖಿಲೇಶ್​ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಅಖಿಲೇಶ್​ ದಂಪತಿ 2005ರಲ್ಲಿ ವಿಕ್ರಮಾದಿತ್ಯ ಮಾರ್ಗದಲ್ಲಿ 39 ಲಕ್ಷ ವೆಚ್ಚದಲ್ಲಿ 23,872 ಚದರ ಅಡಿಯ ನಿವೇಶನ ಖರೀದಿಸಿದ್ದರು. ಈ ನಿವೇಶನ ಇಂದು ಕೋಟ್ಯಾಂತರ ರೂ ಬೆಲೆ ಬಾಳುತ್ತಿದ್ದು, ಇಲ್ಲಿ ಹೆರಿಟೇಜ್​ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು. ​ ​

ಆದರೆ ಲಕ್ನೋ ನ್ಯಾಯಾಲಯ ಇಲ್ಲಿ ಹೋಟೆಲ್​ ನಿರ್ಮಾಣಕ್ಕೆ ತಡೆ ನೀಡಿದ ಹಿನ್ನಲೆ ಈಗ ಬಂಗಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೋರ್ಟ್​ಗೆ ಈ ಬಗ್ಗೆ ಹೇಳಿಕೆ ನೀಡಿರುವ ಡಿಂಪಲ್​ ಯಾದವ್​ ಹೋಟೆಲ್​ ಯೋಜನೆ ಕೈ ಬಿಟ್ಟು ಬಂಗಲೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬಂಗಲೆ ನಿರ್ಮಾಣ ಯೋಜನೆ ಒಪ್ಪಿಗೆ ಪಡೆಯಲು ಈಗಾಗಲೇ  ಡಿಂಪಲ್​ ಲಕ್ನೋ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಈ ಕುರಿತು ರಕ್ಷಣಾದಳದ ಡಿಜಿ, ಉತ್ತರ ಪ್ರದೇಶ ಸರ್ಕಾರದ ವಸತಿ ಅಧಿಕಾರಿ, ಜಲ ಸಂಸ್ಥಾನ ಅಧಿಕಾರಿಯ ಅನುಮತಿ ಕೋರಿದ್ದಾರೆ.

ಭಾರೀ ಭದ್ರತಾ ವಲಯದಲ್ಲಿ ಈ ನಿವೇಶನ ಬರುವ ಹಿನ್ನಲೆ ಏಳು ಮೀಟರ್​ ಗಿಂತ ಎತ್ತರದಲ್ಲಿ ಕಟ್ಟಡವನ್ನು ಕಟ್ಟಬಾರದು ಎಂದು ಅಧಿಕಾರಿಗಳು ತಿಳಿಸಿದ್ದು, ದಂಪತಿ ನಿರಾಪೇಕ್ಷಣಾ ಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಂಗಲೆ ಸಮಾಜವಾದಿ ಪಕ್ಷದ ಮುಖ್ಯ ಕಚೇರಿ ಸಮೀಪದಲ್ಲಿಯೇ ನಿರ್ಮಾಣವಾಗಲಿದೆ.
First published: September 1, 2018, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading