• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Atiq and Ashraf Shoot Dead: ಅತೀಕ್ ಅಹ್ಮದ್, ಅಶ್ರಫ್ ಶೂಟೌಟ್‌: ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್, ಒವೈಸಿ ವಾಗ್ದಾಳಿ

Atiq and Ashraf Shoot Dead: ಅತೀಕ್ ಅಹ್ಮದ್, ಅಶ್ರಫ್ ಶೂಟೌಟ್‌: ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್, ಒವೈಸಿ ವಾಗ್ದಾಳಿ

Akhilesh Yadav and Asaduddin Owaisi

Akhilesh Yadav and Asaduddin Owaisi

ಪೊಲೀಸರ ಸಮ್ಮುಖದಲ್ಲೇ ದರೋಡೆಕೋರ ಕಂ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನ ಶೂಟೌಟ್‌ ನಡೆದಿರುವ ಹೊತ್ತಿನಲ್ಲೇ ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ರಾಜಕೀಯ ನಾಯಕರು ಪ್ರಶ್ನೆ ಎತ್ತಿದ್ದಾರೆ.

  • Share this:

ಪ್ರಯಾಗ್ ರಾಜ್: ಉತ್ತರಪ್ರದೇಶದಲ್ಲಿ (Uttar Pradesh) ಕಳೆದ ರಾತ್ರಿ ಆಘಾತಕಾರಿ ಘಟನೆ ನಡೆದು ಹೋಗಿದೆ. ಮಾಧ್ಯಮ ಮತ್ತು ಪೊಲೀಸರ ಸಮ್ಮುಖದಲ್ಲೇ ದರೋಡೆಕೋರ ಕಂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್‌ನನ್ನು (Ashraf) ದುಷ್ಕರ್ಮಿಗಳು ಗುಂಡಿಟ್ಟು (Live Shootout) ಕೊಂದಿದ್ದಾರೆ. ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅತೀಕ್ ಅಹ್ಮದ್ ಮತ್ತು ಆತನ ಸಹೋದರನಿಗೆ ಶೂಟ್ ಮಾಡುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರಯಾಗಿದೆ. ಪೊಲೀಸರ ಸಮ್ಮುಖದಲ್ಲೇ ಇಂತಹ ಶೂಟೌಟ್‌ ನಡೆದಿರುವ ಹೊತ್ತಿನಲ್ಲೇ ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ರಾಜಕೀಯ ನಾಯಕರು ಪ್ರಶ್ನೆ ಎತ್ತಿದ್ದಾರೆ.


ಈ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಅಖಿಲೇಶ್ ಯಾದವ್, ಇವರಿಬ್ಬರ ಹತ್ಯೆಯಿಂದ ಉತ್ತರ ಪ್ರದೇಶದಲ್ಲಿ ಅಪರಾಧವು ಉತ್ತುಂಗದಲ್ಲಿದೆ ಅನ್ನೋದನ್ನು ತೋರಿಸುತ್ತದೆ ಎಂದರೆ, ಇತ್ತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಕೊಲೆಗಾರರನ್ನು ಸಂಭ್ರಮಿಸುವ ಸಮಾಜದಲ್ಲಿ, ಕ್ರಿಮಿನಲ್ ನ್ಯಾಯ ವ್ಯವಸ್ಥೆ ಇದ್ದು ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.


'ಎನ್‌ಕೌಂಟರ್ ಸಂಭ್ರಮಿಸುವವರೂ ಹತ್ಯೆಗೆ ಹೊಣೆ'


ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನ ಹತ್ಯೆಯು ಯೋಗಿ ಆದಿತ್ಯನಾಥ್‌ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ವೈಫಲ್ಯಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ. ಎನ್‌ಕೌಂಟರ್-ರಾಜ್ಯವನ್ನು ಸಂಭ್ರಮಿಸುವವರೂ ಈ ಹತ್ಯೆಗೆ ಸಮಾನ ಹೊಣೆಗಾರರಾಗಿರುತ್ತಾರೆ ಎಂದು ಕಿಡಿಕಾರಿದ್ದಾರೆ. 


ಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್


ಅತೀಕ್ ಮತ್ತು ಅವನ ಸಹೋದರನನ್ನು ಪೋಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರು ಜೈಶ್ರೀ ರಾಂ ಎಂದು ಘೋಷಣೆಯನ್ನೂ ಕೂಗಿದ್ದಾರೆ. ಅವರ ಹತ್ಯೆಯು ಯೋಗಿ ಆದಿತ್ಯನಾಥ್ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ವೈಫಲ್ಯ. ಕೊಲೆಗಾರರನ್ನು ವಿಜೃಂಭಿಸುವ ಈ ಸಮಾಜದಲ್ಲಿ, ಅಪರಾಧಿಗಳಿಗೆ ನ್ಯಾಯ ವ್ಯವಸ್ಥೆಯಿಂದ ಏನಾದರೂ ಪ್ರಯೋಜನ ಇದೆಯೇ? ಎಂದು ಪ್ರಶ್ನಿಸಿದ್ದಾರೆ.


ಭಯದ ವಾತಾವರಣ ಸೃಷ್ಟಿಯಾಗುತ್ತಿದೆ


ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನ ಹತ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಅಪರಾಧವು ಉತ್ತುಂಗಕ್ಕೇರಿದೆ. ಅಪರಾಧಿಗಳಿಗೆ ಹೆಚ್ಚು ಬಲ ಸಿಕ್ಕಂತಾಗಿದೆ. ಪೊಲೀಸರ ಭದ್ರತೆಯ ನಡುವೆಯೇ ಬಹಿರಂಗವಾಗಿ ಗುಂಡು ಹಾರಿಸಿ ಯಾರನ್ನಾದರೂ ಕೊಲ್ಲಬಹುದು ಅಂತಾದರೆ ಜನ ಸಾಮಾನ್ಯರ ಸುರಕ್ಷತೆಯ ಬಗ್ಗೆ ಏನು ಮಾಡಬೇಕು? ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣ ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಇದನ್ನೂ ಓದಿ: Asad Ahmad Encounter: ಅತೀಕ್ ಅಹ್ಮದ್​ ಯಾರು ? ಗ್ಯಾಂಗ್​ಸ್ಟರ್​ನ ಮಗ ಎನ್​ಕೌಂಟರ್​ನಲ್ಲಿ ಬಲಿಯಾಗಿದ್ದೇಕೆ?


ಪ್ರಯಾಗ್​ರಾಜ್ ನಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮಗಳು ಅವರಿಬ್ಬರನ್ನು ಮಾತಾಡಿಸುತ್ತಿದ್ದವು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.

First published: