ಮುರಿದ ಬಿದ್ದ ಎಸ್​​ಪಿ-ಬಿಎಸ್​​ಪಿ ಮೈತ್ರಿ​​​: ಮಾಯಾವತಿ ಬೆನ್ನಲ್ಲೇ ಪ್ರತ್ಯೇಕ ಸ್ಪರ್ಧೆಗೆ ಸಿದ್ಧ ಎಂದ ಅಖಿಲೇಶ್​​

ನಮ್ಮದು ಶಾಶ್ವತ ಬ್ರೇಕ್ ಅಪ್ ಅಲ್ಲ. ಭವಿಷ್ಯದಲ್ಲಿ ಎಸ್​​ಪಿ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ- ಮಾಯಾವತಿ

Ganesh Nachikethu | news18
Updated:June 4, 2019, 3:40 PM IST
ಮುರಿದ ಬಿದ್ದ ಎಸ್​​ಪಿ-ಬಿಎಸ್​​ಪಿ ಮೈತ್ರಿ​​​: ಮಾಯಾವತಿ ಬೆನ್ನಲ್ಲೇ ಪ್ರತ್ಯೇಕ ಸ್ಪರ್ಧೆಗೆ ಸಿದ್ಧ ಎಂದ ಅಖಿಲೇಶ್​​
ಎಸ್​ಪಿ, ಬಿಎಸ್​ಪಿ
Ganesh Nachikethu | news18
Updated: June 4, 2019, 3:40 PM IST
ನವದೆಹಲಿ(ಜೂನ್​​.04): ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ನಡೆಗೆ ಬೇಸತ್ತ ಮಾಜಿ ಸಿಎಂ ಅಖಿಲೇಶ್​​ ಯಾದವ್ ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಎಸ್​​ಪಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ಧಾರೆ. ಈ ಮೂಲಕ  ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಎದುರು ಹೀನಾಯವಾಗಿ ಸೋತ ಮಹಾಘಟಬಂಧನ್​​ಗೆ ಎಳ್ಳುನೀರು ಬಿಟ್ಟಿದ್ದಾರೆ.

ಉತ್ತರಪ್ರದೇಶದಲ್ಲಿ ಮೈತ್ರಿ ಹಿನ್ನಡೆ ಅನುಭವಿಸಿದ ಬಳಿಕ ಮಾಜಿ ಸಿಎಂ ಮಾಯಾವತಿ ಬೇಸರ ವ್ಯಕ್ತಪಡಿಸಿದ್ದರು. ಎಸ್​​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ವಿಫಲರಾಗಿದ್ದಾರೆ. ಹಾಗೆಯೇ ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತು ಹೋಗಿದ್ಧಾರೆ ಎಂದು ಬಿಎಸ್​​ಪಿ ಕಾರ್ಯಕರ್ತರ ಸಭೆಯಲ್ಲಿ ಆರೋಪ ಕಿಡಿಕಾರಿದ್ದರು.

ಇನ್ನು ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಕುರಿತು ವ್ರ ಅತೃಪ್ತಿ ಹೊರಹಾಕಿದ್ದ ಬಿಎಸ್​​ಪಿ ಮುಖ್ಯಸ್ಥೆ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ 11 ಸೀಟುಗಳಿಗೆ ಉಪಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಾಗುವಂತೆ ನೂತನ ಸಂಸದ ಮತ್ತು ಶಾಸಕರಿಗೆ ಸೂಚಿಸಿದ್ದರು.

ಇದನ್ನೂ ಓದಿ: ‘ಹೆಂಡತಿಯನ್ನ ಗೆಲ್ಲಿಸಲಾಗದವರು’– ಅಖಿಲೇಶ್ ಯಾದವ್ ಬಗ್ಗೆ ಮಾಯಾವತಿ ವ್ಯಂಗ್ಯ; ಮುರಿದ ಮೈತ್ರಿ?

ಇದೇ ವೇಳೆ ನಮ್ಮದು ಶಾಶ್ವತ ಬ್ರೇಕ್ ಅಪ್ ಅಲ್ಲ. ಭವಿಷ್ಯದಲ್ಲಿ ಎಸ್​​ಪಿ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೇ ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತೇವೆ. ಸದ್ಯ ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಘೋಷಿಸಿದರು.

ಈ ಹಿಂದೆಯೇ ಮೊದಲಿಗೆ ಉಪಚುನಾವಣೆಗಾಗಿ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ವಿರುದ್ಧ ಗೆಲುವಿನ ರುಚಿಯನ್ನು ಕಂಡರು. ಬಳಿಕ ಇದೇ ಲೆಕ್ಕಚಾರದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಎಸ್‌ಪಿ-ಬಿಎಸ್​ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದರು. ಇಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗಳಿಸಿದರೆ, ಬಿಎಸ್​​ಪಿ 10 ಹಾಗೂ ಎಸ್​​ಪಿ 5 ಸ್ಥಾನ ಮಾತ್ರ ಗಳಿಸಿತ್ತು.
-----------
Loading...

First published:June 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...