UP Election 2022: ಸಮಾಜವಾದಿ ಪಕ್ಷ ಈಗಾಗಲೇ ಗೆದ್ದಿದೆ, BJPಗೆ ಆತಂಕ ಶುರುವಾಗಿದೆ: ಅಖಿಲೇಶ್ ಯಾದವ್

ಅಖಿಲೇಶ್ ಯಾದವ್ ಅವರು‌ ಈ ಬಾರಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ವಿರುದ್ಧ ಕರ್ಹಾಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವು ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, 1992ರಿಂದ ಒಮ್ಮೆ ಮಾತ್ರ ಎಸ್‌ಪಿ ಸೋತಿದೆ.

ಅಖಿಲೇಶ್ ಯಾದವ್ ದಂಪತಿ

ಅಖಿಲೇಶ್ ಯಾದವ್ ದಂಪತಿ

  • Share this:
ನವದೆಹಲಿ, ಫೆ. 20: ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections) ಸಮಾಜವಾದಿ ಪಕ್ಷ (Samajavadi Party) ಈಗಾಗಲೇ ಗೆದ್ದಾಗಿದೆ ಎಂದು ಆ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ  ಅಖಿಲೇಶ್ ಯಾದವ್ (Former Chief Minister Akhilesh Yadav) ಅವರು ಪುನರುಚ್ಛರಿಸಿದ್ದಾರೆ. ಹಿಂದೆ ಮೊದಲೆರಡು ಹಂತಗಳಲ್ಲಿ ಮತದಾನ ನಡೆದಿದ್ದ ಕ್ಷೇತ್ರಗಳ ಪೈಕಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ (Rastriya Lokadal) ಪಕ್ಷ ಶತಕ ಬಾರಿದೆ (100 ಸೀಟು ಗೆದ್ದಿದೆ) ಎಂದು ಹೇಳಿದ್ದರು‌.

ಪತ್ನಿ ಡಿಂಪಲ್ ಜೊತೆ ಅಖಿಲೇಶ್ ಮತ ಚಲಾವಣೆ
ಜಸ್ವಂತ್‌ನಗರದಲ್ಲಿ ಪತ್ನಿ ಹಾಗೂ ಮಾಜಿ ಸಂಸದೆ ಡಿಂಪಲ್ ಯಾದವ್ ಜೊತೆ ಮತಚಲಾಯಿಸಿದ ಬಳಿಕ ಅಖಿಲೇಶ್ ಯಾದವ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇದೇ ವೇಳೆ ಗೆಲುವಿನ‌ ವಿಶ್ವಾಸ ವ್ಯಕ್ತಪಡಿಸಿದರು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಎರಡು ಹಂತಗಳಲ್ಲಿ 113 ವಿಧಾನಸಭಾ ಕ್ಷೇತ್ರಗಳ ಮತದಾನ ಆಗಿತ್ತು. ಆ ಪೈಕಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಮೈತ್ರಿಕೂಟವು ಶತಕ ಬಾರಿಸಿದೆ ಎಂದು ಹೇಳಿದರು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಮತದಾರರ ಪ್ರಭಾವ ಹೆಚ್ಚಾಗಿದ್ದು ಜಾಟ್ ಸಮುದಾಯದ ಪಕ್ಷ ಎಂದೇ ಕರೆಯಲ್ಪಡುವ ರಾಷ್ಟ್ರೀಯ ಲೋಕದಳದ ಜೊತೆಗೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಈ ಬಾರಿ ಯಾದವ್, ಮುಸ್ಲಿಂ ಮತ್ತು ಜಾಟ್ ಮತದಾರರು ಒಂದೆಡೆಗೆ ಬಂದಿದ್ದು ಎಸ್ ಪಿ-ಆರ್ ಎಲ್ ಡಿ ಮೈತ್ರಿ ಕೂಟ 100ಕ್ಕೂ ಹೆಚ್ಚು ಸೀಟು ಗೆದ್ದಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಬಿಜೆಪಿ -ಆರ್ ಎಲ್ ಡಿ ಮೈತ್ರಿ ಇದ್ದು ಅವು 113 ಕ್ಷೇತ್ರಗಳ ಪೈಕಿ 91 ಸೀಟುಗಳನ್ನು ಗೆದ್ದಿದ್ದವು.

ಇದನ್ನೂ ಓದಿ: Secret Calls: ಅಪರಾತ್ರಿಯಲ್ಲಿ ಹೆಂಡ್ತಿ ಪರಪುರುಷರಿಗೆ ಸೀಕ್ರೆಟ್ ಕಾಲ್ ಮಾಡಿದ್ರೆ ತಪ್ಪಾ? ಕೇರಳ ಹೈಕೋರ್ಟ್ ಹೇಳಿದ್ದಿಷ್ಟು

3ನೇ ಹಂತದ ಬಗೆಗೂ ಸಮಾಜವಾದಿ ಪಕ್ಷದ ವಿಶ್ವಾಸ
ಇದಲ್ಲದೆ ಇಂದು ಮತದಾನ ಆಗುತ್ತಿರುವ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳ ಬಗ್ಗೆಗೂ  ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಇಂದು ಚುನಾವಣೆ ನಡೆಯುತ್ತಿರುವ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು. ಅದೇ ಕಾರಣಕ್ಕೆ ಅಖಿಲೇಶ್ ಯಾದವ್ ಅಪರಿಮಿತವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ
ಬಿಜೆಪಿ ನಾಯಕರು ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಮಾತೆತ್ತಿದರೆ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್ ಅವರು 'ರಾಜ್ಯದಲ್ಲಿ 'ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆಗ್ರಾದಲ್ಲಿ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ನಂತರ ಕೊಲ್ಲಲಾಯಿತು. ಆಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನಿದ್ದೆ ಮಾಡುತ್ತಿದ್ದಾರಾ? ಅವರು ಜವಾಬ್ದಾರಿಯನ್ನು ನಿಭಾಯಿಸಲು ಮತ್ತು ಅಪರಾಧಿಯನ್ನು ಶಿಕ್ಷಿಸಲು ಸಾಧ್ಯವಾಯಿತೇ? ಅವರು ಗೋರಖ್‌ಪುರದ ಎಕ್ಸ್‌ಪ್ರೆಸ್‌ವೇಗೆ ಸೇರಲು ಸಹ ಸಾಧ್ಯವಾಗಲಿಲ್ಲ' ಎಂದು ಹೇಳಿದರು.

ಇದನ್ನೂ ಓದಿ: Russia-Ukraine: ರಷ್ಯಾ - ಉಕ್ರೇನ್‌ ಬಿಕ್ಕಟ್ಟು- ಭಾರತಕ್ಕೆ ಇಕ್ಕಟ್ಟು

ಸಾರ್ವಜನಿಕರು ಬಿಜೆಪಿ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಈ ಬಾರಿಯ ಚುನಾವಣೆಯು ಉತ್ತರ ಪ್ರದೇಶದಿಂದ ಬಿಜೆಪಿ ಸರ್ಕಾರವನ್ನು ತೆಗೆದುಹಾಕುವ ಉದ್ದೇಶವಾಗಿದೆ. ಈ ಚುನಾವಣೆ ಬಳಿಕ ಬಿಜೆಪಿ ನಿರ್ನಾಮವಾಗಲಿದೆ. ಉತ್ತರ ಪ್ರದೇಶದ ರೈತರು ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು. ಇದಲ್ಲದೆ ಸಾರ್ವಜನಿಕರು ತಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ, ಆದ್ದರಿಂದ ಅವರ ಭಾಷೆ ಮತ್ತು ನಡವಳಿಕೆಯು ಬದಲಾಗಿದೆ. ಬಾಬಾ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ನಿಮ್ಮ ಮೆಡಿಕಲ್ ಕಾಲೇಜಿಗೆ ಪಿಜಿಐ ಇರುವ ಸೌಲಭ್ಯವನ್ನು ಏಕೆ ನೀಡಲಿಲ್ಲ? ಯಾರು ಹೊಣೆ? ಎಂದು ಇಟಾವಾದಲ್ಲಿ  ಸೈಫೈ ಮುಖಾಂತರ ಮಾತನಾಡಿದ ಅಖಿಲೇಶ್ ಯಾದವ್ ಕಿಡಿ ಕಾರಿದರು.

ಇಂದು ಅಖಿಲೇಶ್ ಭವಿಷ್ಯ ಕೂಡ ನಿರ್ಧಾರ
ಅಖಿಲೇಶ್ ಯಾದವ್ ಅವರು‌ ಈ ಬಾರಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ವಿರುದ್ಧ ಕರ್ಹಾಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವು ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, 1992 ರಿಂದ ಒಮ್ಮೆ ಮಾತ್ರ ಎಸ್‌ಪಿ ಸೋತಿದೆ. ಏತನ್ಮಧ್ಯೆ, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಎಸ್‌ಪಿ ಸಿಂಗ್ ಬಘೇಲ್ ಅವರು ಎಸ್‌ಪಿ ಕುಲಪತಿ ಮುಲಾಯಂ ಸಿಂಗ್ ಯಾದವ್ ಅವರ ಮಾಜಿ ಪಿಎಸ್‌ಓ ಆಗಿದ್ದರು.
Published by:Kavya V
First published: