ಆಕಾಶ್​ ಅಂಬಾನಿ- ಶ್ಲೋಕ ಅದ್ಧೂರಿ ವಿವಾಹ ಸಮಾರಂಭ: ದೇಶ-ವಿದೇಶದ ಗಣ್ಯಾತಿಗಣ್ಯರು ಭಾಗಿ

ಶನಿವಾರ ನಡೆದ ಸಮಾರಂಭದಲ್ಲಿ ಮಾಜಿ ಯುಎನ್ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮತ್ತು ಅವರ ಪತ್ನಿ, ಬ್ರಿಟನ್​ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಹೆಂಡತಿ ಚೆರಿ ಬ್ಲೇರ್, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅವರ ಪತ್ನಿ ಅಂಜಲಿ ಪಿಚೈ.

zahir | news18
Updated:March 10, 2019, 10:05 AM IST
ಆಕಾಶ್​ ಅಂಬಾನಿ- ಶ್ಲೋಕ ಅದ್ಧೂರಿ ವಿವಾಹ ಸಮಾರಂಭ: ದೇಶ-ವಿದೇಶದ ಗಣ್ಯಾತಿಗಣ್ಯರು ಭಾಗಿ
ಆಕಾಶ್-ಶ್ಲೋಕಾ
  • News18
  • Last Updated: March 10, 2019, 10:05 AM IST
  • Share this:
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಹಾಗೂ ವಜ್ರ ವ್ಯಾಪಾರಿ ರಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವಿವಾಹ ಸಮಾರಂಭ ಶನಿವಾರ ಅದ್ಧೂರಿಯಾಗಿ ನಡೆಯಿತು. ಮುಂಬೈನ ಜಿಯೊ ವರ್ಲ್ಡ್ ಸೆಂಟರ್​ನಲ್ಲಿ ನಡೆದ ಈ ಸಂಭ್ರಮಕ್ಕೆ ದೇಶ ವಿದೇಶದ ಗಣ್ಯಾತಿಗಣ್ಯರು ಸಾಕ್ಷಿಯಾದರು.

ನಿನ್ನೆ ನಡೆದ ಸಮಾರಂಭದಲ್ಲಿ ಮಾಜಿ ಯುಎನ್ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮತ್ತು ಅವರ ಪತ್ನಿ, ಬ್ರಿಟನ್​ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಹೆಂಡತಿ ಚೆರಿ ಬ್ಲೇರ್, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅವರ ಪತ್ನಿ ಅಂಜಲಿ ಪಿಚೈ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ತೆಂಡೂಲ್ಕರ್, ಕೇಂದ್ರ ಸಚಿವ ಸ್ಮೃತಿ ಇರಾನಿ ಮತ್ತು ಅವರ ಪತಿ ಜುಬಿನ್ ಇರಾನಿ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಮಗ-ಸೊಸೆಯೊಂದಿಗೆ ನೀತಾ ಅಂಬಾನಿ


ಸಾಂಪ್ರದಾಯಿಕ ಶೈಲಿಯಲ್ಲಿದ್ದ ವಿವಾಹ ಸಮಾರಂಭದಲ್ಲಿ ಖ್ಯಾತ ಸಂಗೀತಗಾರರಾದ ವಿಶಾಲ್-ಶೇಖರ್ ಮಧುರ ಗೀತೆಗಳ ರಸದೌತಣ ಒದಗಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಿಖಾ ಸಿಂಗ್​ ಅವರ ಕಂಚಿನ ಕಂಠಕ್ಕೆ ಬಾಲಿವುಡ್ ತಾರೆಯರಾದ ಶಾರೂಖ್ ಖಾನ್, ರಣಬೀರ್ ಕಪೂರ್, ಆಕಾಶ್ ಅಂಬಾನಿ, ನೀತಾ ಅಂಬಾನಿ, ಮುಖೇಶ್ ಅಂಬಾನಿ, ಗೌರಿ ಖಾನ್ ಸೇರಿದಂತೆ ಹಲವರು ಕುಣಿದು ಕುಪ್ಪಳಿಸಿದರು.

ಮದುವೆ ಸಂಭ್ರಮದಲ್ಲಿ ಸಹೋದರಿ ಇಶಾ ಅಂಬಾನಿ


ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ವಿವಿಧ ಭಕ್ಷ್ಯಗಳ ಮೂಲಕ ಅತಿಥಿಗಳನ್ನು ಸತ್ಕರಿಸಲಾಯಿತು. ತಮ್ಮ ಬಾಲ್ಯ ಸ್ನೇಹಿತೆಯನ್ನು ವರಿಸಿರುವ ಆಕಾಶ್​ ಅಂಬಾನಿ ಅವರ ಮದುವೆ ಕಾರ್ಯಕ್ರಮ ಮೂರು ದಿನಗಳ ಕಾಲ ಜರುಗಲಿದ್ದು, ಮಾರ್ಚ್ 10 ಮತ್ತು 11 ರಂದು ವಿಶೇಷ ಸತ್ಕಾರಕೂಟಗಳು ನಡೆಯಲಿದೆ. ಬಾಲಿವುಡ್​ ತಾರೆಯರು, ಉದ್ಯಮಿಗಳು ಸೇರಿದಂತೆ ದೇಶ ವಿದೇಶಗಳ ಪ್ರಮುಖ ವ್ಯಕ್ತಿಗಳು ಈ ಸಂತೋಷ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

First published:March 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ