• Home
 • »
 • News
 • »
 • national-international
 • »
 • ನೀಳಕೇಶದಿಂದ Limca ದಾಖಲೆ ಸೇರಿದ ಯುವತಿ: ಕೂದಲು ಎಷ್ಟು ಅಡಿ ಇದೆ ಅಂತ ಗೊತ್ತಾದರೆ ಶಾಕ್​ ಆಗ್ತೀರ!

ನೀಳಕೇಶದಿಂದ Limca ದಾಖಲೆ ಸೇರಿದ ಯುವತಿ: ಕೂದಲು ಎಷ್ಟು ಅಡಿ ಇದೆ ಅಂತ ಗೊತ್ತಾದರೆ ಶಾಕ್​ ಆಗ್ತೀರ!

ಆಕಾಂಕ್ಷಾ ಯಾದವ್

ಆಕಾಂಕ್ಷಾ ಯಾದವ್

Akanksha Yadav: ಆಕಾಂಕ್ಷಾ ಯಾದವ್ ಕೂದಲನ್ನು ನೋಡಿದ ಪ್ರತಿಯೊಬ್ಬರು ದೇವರ ವರ ಎಂದೇ ಹೇಳುತ್ತಾರೆ.ಇಂದು, ಉದ್ದನೆಯ ಕೂದಲಿನ ಮೇಲಿನ ಅವರ ತಾಳ್ಮೆ, ಶ್ರಮ ಮತ್ತು ಪ್ರೀತಿಯೇ ಆಕಾಂಕ್ಷಾ ಯಾದವ್‌ರನ್ನು 2020-2022ರ ಲಿಮ್ಕಾ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ.

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • Share this:

  ಕೂದಲು ಸೌಂದರ್ಯದ ಪ್ರತೀಕ, ದಟ್ಟ ಮತ್ತು ಉದ್ದನೆಯ ಕೂದಲು ಎಲ್ಲರ ಕನಸು. ಉದ್ದನೆಯ ಕೂದಲು ಬೇಕೆನ್ನುವವರು ಅದರ ಆರೈಕೆಯ ಕಡೆಗೂ ಹೆಚ್ಚಿನ ಗಮನವಹಿಸಬೇಕಾಗುತ್ತದೆ. ಅಂದರೆ ವಾರದಲ್ಲಿ ಎರಡು ಬಾರಿ ಬಿಸಿ ಎಣ್ಣೆ ಮಸಾಜ್, ಆಗಾಗ ಕೂದಲು ಕತ್ತರಿಸುವುದು, ನೈಸರ್ಗಿಕ ಉತ್ಪನ್ನಗಳ ಬಳಕೆ ಹೀಗೆ ಹೆಚ್ಚಿನ ಗಮನವಹಿಸಬೇಕಾಗುತ್ತದೆ. ಆದರೆ ಯಾವುದೇ ಕಾಳಜಿ ಮಾಡದೆ, ತಾಳ್ಮೆಯಿಂದ ನಿರ್ವಹಿಸದೇ ಉದ್ದನೆಯ ಕೂದಲಿಗಾಗಿ ಹವಣಿಸುತ್ತಾರೆ.ಆದರೆ ಮುಂಬೈ ಮೂಲದ ಆಕಾಂಕ್ಷಾ ಯಾದವ್ ತಮ್ಮ ಉದ್ದನೆಯ ಕೂದಲಿನ ಮೂಲಕವೇ ಸುದ್ದಿಯಲ್ಲಿದ್ದಾರೆ. ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹೌದು ಇವರ ಕೂದಲಿನ ಉದ್ದ ಕೇಳಿದರೆ ಹೌಹಾರುವುದು ಮಾತ್ರ ಖಂಡಿತ. ಏಕೆಂದರೆ ಅವರಿರುವ ಉದ್ದಕ್ಕಿಂತ ಅವರ ಕೂದಲಿನ ಉದ್ದವೇ ಹೆಚ್ಚಿದೆ.


  ಲಿಮ್ಕಾ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ


  ಹೌದು ಅವರ ಕೂದಲು ಇರುವುದು 9 ಅಡಿ 10.5 ಇಂಚು. ಆಕಾಂಕ್ಷಾ ಯಾದವ್ ಕೂದಲನ್ನು ನೋಡಿದ ಪ್ರತಿಯೊಬ್ಬರು ದೇವರ ವರ ಎಂದೇ ಹೇಳುತ್ತಾರೆ.ಇಂದು, ಉದ್ದನೆಯ ಕೂದಲಿನ ಮೇಲಿನ ಅವರ ತಾಳ್ಮೆ, ಶ್ರಮ ಮತ್ತು ಪ್ರೀತಿಯೇ ಆಕಾಂಕ್ಷಾ ಯಾದವ್‌ರನ್ನು 2020-2022ರ ಲಿಮ್ಕಾ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ. ದಾಖಲೆಗಳ ಪುಸ್ತಕದ 30ನೇ ಸಂಪುಟವು ಉದ್ದನೆಯ ಕೂದಲನ್ನು ಹೊಂದಿರುವ ಆಕಾಂಕ್ಷಾ ಯಾದವ್ ಹೆಸರನ್ನು ಒಳಗೊಂಡಿದೆ.


  ಭಾರತದಲ್ಲಿ ಅತಿ ಉದ್ದವಾದ ಕೂದಲ ಈಕೆಯದ್ದೇ..!


  ಇವರು ತಮ್ಮ ಕೂದಲಿಗೆ ಸಂಬಂಧಿಸಿದ ಸಣ್ಣ ಪುಟ್ಟ ವಿಡಿಯೋಗಳನ್ನು, ಫೋಟೋಗಳನ್ನು ಆಗಾಗ ತಮ್ಮ ಆಕಾಂಕ್ಷಾ ವೈವಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ಪೋಟೋ, ವಇಡಿಯೋಗಳನ್ನು ಹಂಚಿಕೊಂಡಿದ್ದಾರೆ.ಯಾವ ಯುವತಿಯರು, ಮಹಿಳೆಯರು ಎಷ್ಟೇ ಶ್ರಮವಹಿಸಿದರೂ 2019ರಿಂದ ಭಾರತದಲ್ಲಿ ಅತಿ ಉದ್ದವಾದ ಕೂದಲನ್ನು ಹೊಂದಿರುವ ಆಕಾಂಕ್ಷಾ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಲಿಲ್ಲ. ಲಿಮ್ಕಾ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ 2020-2022ರ ಅಧಿಕೃತ ಪತ್ರವು, "ಮಹಾರಾಷ್ಟ್ರದ ಥಾಣೆಯ ಆಕಾಂಕ್ಷಾ ಯಾದವ್ ಉದ್ದನೆಯ ಕೂದಲನ್ನು ಹೊಂದಿದ್ದಾರೆ. ಅದುವೇ 3.01 ಮೀ (9 ಅಡಿ 10.5 ಇಂಚು) ಉದ್ದ” ಎಂದು ಹೇಳಿದೆ.


  ಇದನ್ನೂ ಓದಿ: Baby Hair Care Tips: ನಿಮ್ಮ ಮಗುವಿನ ಕೂದಲು ದಟ್ಟವಾಗಿ ಬೆಳೆಯಲು ಈ ವಿಧಾನಗಳನ್ನು ಅನುಸರಿಸಿ


  ತನ್ನ ಗೆಲುವಿನ ಬಗ್ಗೆ  ಮಾತನಾಡಿದ ಆಕಾಂಕ್ಷಾ ಯಾದವ್, "ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಅದೊಂದು ಮಹತ್ವದ ಸಂಗತಿ. ದಾಖಲೆಗಳು ಗೌರವಪೂರ್ವಕ ಎನಿಸಿದೆ. ಆದರೆ, ಪ್ರಮಾಣ, ಕೊಡುಗೆ ಮತ್ತು ಉತ್ಸಾಹ ಇನ್ನೂ ಹೆಚ್ಚಾಗಿದೆ ಎನ್ನುತ್ತಾರೆ.


  ಗಮನಾರ್ಹವಾಗಿ, ಔಷಧ ಮತ್ತು ನಿರ್ವಹಣಾ ವೃತ್ತಿಪರರಾಗಿರುವ ಆಕಾಂಕ್ಷಾ ಯಾದವ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಅತಿ ಉದ್ದದ ಕೂದಲು ಎಂಬ ಪ್ರಶಸ್ತಿ ಪಡೆದಿದ್ದಾರೆ. ಅವಳ ಉದ್ದವಾದ, ಕಾಂತಿಯುತ ಕೂದಲಿನ ಹಿಂದಿನ ರಹಸ್ಯದ ಬಗ್ಗೆ ಕೇಳಿದಾಗ, ಫಿಟ್ನೆಸ್ ಉತ್ಸಾಹಿ ಮತ್ತು ರೂಪದರ್ಶಿ ತನ್ನ ರಹಸ್ಯವನ್ನು ಬಹಿರಂಗಪಡಿಸಲಿಲ್ಲ. ಆದರೆ ಅದನ್ನು ದೇವರ ಆಶೀರ್ವಾದ" ಎಂದು ಕರೆದರು.ಆಕೆ ತನ್ನ ಉದ್ದನೆಯ ಕೂದಲನ್ನು ಹೇಗೆ ನಿರ್ವಹಿಸುತ್ತಾಳೆ ಮತ್ತು ಕತ್ತರಿಸುತ್ತಾಳೆ ಎಂಬುದರ ಕುರಿತು ಮಾತನಾಡುತ್ತಾ, ಆಕಾಂಕ್ಷಾ ಯಾದವ್, "ನಾನು ಒಂದು ದಿನದಲ್ಲಿ 20 ನಿಮಿಷಗಳಿಗಿಂತ ಹೆಚ್ಚು ಕಾಲ ಕೂದಲು ತೊಳೆಯಲು ಅಥವಾ ಇತರ ಕೂದಲಿನ ಕೆಲಸಗಳಿಗೆ ಖರ್ಚು ಮಾಡುವುದಿಲ್ಲ ಎಂದು ಉತ್ತರಿಸಿದರು.

  Published by:Kavya V
  First published: