ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ಸ್ವೀಕಾರ; ಆದಿತ್ಯ ಠಾಕ್ರೆಗೂ ಸಚಿವ ಸ್ಥಾನ

ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಹಗ್ಗಜಗ್ಗಾಟ ನಡೆಸುತ್ತಿದ್ದ ಹೊತ್ತಿನಲ್ಲಿ ಅಜಿತ್​ ಪವಾರ್​ ಎನ್​ಸಿಪಿ ಮುಖ್ಯಸ್ಥ ಶರಾದ್​ ಪವಾರ್​ ಸಂಪರ್ಕಿಸದೆ ಏಕಗವಾಕ್ಷಿಯಾಗಿ ಬಿಜೆಪಿ  ಸರ್ಕಾರಕ್ಕೆ ಬೆಂಬಲಿಸಿದ್ದರು. ಅಲ್ಲದೇ 48ಗಂಟೆಗಳ ಕಾಲ ಡಿಸಿಎಂ ಆಗಿದ್ದರು.

Seema.R | news18-kannada
Updated:December 30, 2019, 2:19 PM IST
ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ಸ್ವೀಕಾರ; ಆದಿತ್ಯ ಠಾಕ್ರೆಗೂ ಸಚಿವ ಸ್ಥಾನ
ಅಜಿತ್​ ಪವಾರ್​
  • Share this:
ಮುಂಬೈ (ಡಿ.30): ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಎನ್​ಸಿಪಿ ನಾಯಕ ಅಜಿತ್​ ಪವಾರ್​ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಎರಡು ತಿಂಗಳ ಹಿಂದೆ 48 ಗಂಟೆಗಳ ಕಾಲ ಡಿಸಿಎಂ ಆಗಿದ್ದ ಅವರು, ಇಂದು ಮತ್ತೊಮ್ಮೆ ಠಾಕ್ರೆ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

 

ಇಂದು ತಮ್ಮ  ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಸಿದ ಸಿಎಂ ಉದ್ಧವ್​ ಠಾಕ್ರೆ,  ಮಗ ಆದಿತ್ಯ ಠಾಕ್ರಗೂ ಮಂತ್ರಿ ಸ್ಥಾನ ನೀಡಿದ್ದಾರೆ. ಏತನ್ಮಾಥ್ಯೆ, ಕಾಂಗ್ರೆಸ್​ನ   ಅಶೋಕ್​ ಚವ್ಹಾಣ್​, ಅಮಿತ್​ ವಿಲಾಸ್​ರಾವ್​ ದೇಶಮುಖ್​ ಮತ್ತು ವರ್ಷ ಏಕನಾಥ್​ ಗಾಯಕ್​ವಾಡ್​ ಸೇರಿದಂತೆ 10 ನಾಯಕರು  ಜನ ಸೇರಿದಂತೆ ಒಟ್ಟು 35 ಮಂದಿ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಹಗ್ಗಜಗ್ಗಾಟ ನಡೆಸುತ್ತಿದ್ದ ಹೊತ್ತಿನಲ್ಲಿ ಅಜಿತ್​ ಪವಾರ್​ ಎನ್​ಸಿಪಿ ಮುಖ್ಯಸ್ಥ ಶರಾದ್​ ಪವಾರ್​ ಸಂಪರ್ಕಿಸದೆ ಏಕಗವಾಕ್ಷಿಯಾಗಿ ಬಿಜೆಪಿ  ಸರ್ಕಾರಕ್ಕೆ ಬೆಂಬಲಿಸಿದ್ದರು. ಅಲ್ಲದೇ 48ಗಂಟೆಗಳ ಕಾಲ ಡಿಸಿಎಂ ಆಗಿದ್ದರು.

ಅಚ್ಚರಿಯೆಂಬಂತೆ ಈಗ ಮಹಾರಾಷ್ಟ್ರ ವಿಕಾಸ ಅಗಡಿ ಸರ್ಕಾರದ ಸಂಪುಟ ಸೇರುತ್ತಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶರಾದ್​ ಪವಾರ್​ ನಿರಾಕರಿಸಿದ್ದಾರೆ.

ಪಕ್ಷದ ವಿರುದ್ಧ ತಮ್ಮ ನಡೆ ಕುರಿತು ಮಾತನಾಡಿದ್ದ ಅಜಿತ್​​, ನಾನು ಪಕ್ಷದ ವಿರುದ್ಧ ಕೆಲಸ ಮಾಡಿಲ್ಲ. ನಾನು ಕೂಡ ಎನ್​ಸಿಪಿ ನಾಯಕನಾಗಿದ್ದೆ. ಎನ್​ಸಿಪಿ ನನ್ನನ್ನು ತೆಗೆದು ಹಾಕಿತೆ? ನೀವು ಈ ಕುರಿತು ಎಲ್ಲಿಯಾದರೂ ಓದಿದ್ದೀರಾ? ಯಾವಾಗಲೂ ನಾನು ಹೇಳುತ್ತಿರುವುದು ಒಂದೇ ನಾನು ಎನ್​ಸಿಪಿಯಲ್ಲಿ ಇದ್ದೆ. ಎನ್​ಸಿಪಿಯಲ್ಲಿಯೇ ಇದ್ದೇನೆ. ಎನ್​ಸಿಪಿಯಲ್ಲಿಯೇ ಇರಲಿದ್ದೇನೆ ಎಂದರು.

ಕಾಂಗ್ರೆಸ್​-ಎನ್​ಸಿಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ನ.28ರಂದು ಆರು ಜನ ಸಚಿವರೊಂದಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.ಈಗ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ತಮ್ಮ ಮಗ ಆದಿತ್ಯ ಠಾಕ್ರೆಗೂ ಮಂತ್ರಿ ಪಟ್ಟ ನೀಡಲು ಮುಂದಾಗಿದ್ದಾರೆ. ಇನ್ನು ಮೊದಲಬಾರಿಯೇ ಅಭೂತಪೂರ್ವ ಗೆಲುವು ಸಾಧಿಸಿದ್ದ ಆದಿತ್ಯ ಪರಿಸರ ಅಥವಾ ಶಿಕ್ಷಣ ಸಚಿವ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇದನ್ನು ಓದಿ: ಮಹಾರಾಷ್ಟ್ರಕ್ಕೆ ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ: ಸಿಎಂ ಯಡಿಯೂರಪ್ಪ

ಮೂರು ಪಕ್ಷಗಳು ಸೀಟು ಹಂಚಿಕೆ ಪ್ರಕಾರ ಶಿವಸೇನೆ 16 (ಮುಖ್ಯಮಂತ್ರಿ ಹೊರತು), ಎನ್ಸಿಪಿ 14 ಹಾಗೂ ಕಾಂಗ್ರೆಸ್​ 12 ಸಚಿವ ಸ್ಥಾನ ಪಡೆಯಲಿದ್ದಾರೆ.
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ