ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್​ಸಿಪಿ ತರಾತುರಿಯ ಮೈತ್ರಿಗೆ ಕಾರಣವೇನು?; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ ಫಡ್ನವೀಸ್

ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಅವರಿಗೆ ಕ್ಲೀನ್​ಚಿಟ್ ನೀಡಿರುವ ಘಟನೆಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.

MAshok Kumar | news18-kannada
Updated:December 8, 2019, 9:16 AM IST
ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್​ಸಿಪಿ ತರಾತುರಿಯ ಮೈತ್ರಿಗೆ ಕಾರಣವೇನು?; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ ಫಡ್ನವೀಸ್
ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್.
  • Share this:
ಮುಂಬೈ (ಡಿಸೆಂಬರ್​ 08): ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಎನ್​ಸಿಪಿ ಪಕ್ಷದ ಜೊತೆಗೆ ನಾವು ಮೈತ್ರಿಗೆ ಮುಂದಾಗಿರಲಿಲ್ಲ. ಬದಲಿಗೆ ಆ ಪಕ್ಷದ ನಾಯಕ ಅಜಿತ್ ಪವಾರ್ ಅವರೇ ಮೈತ್ರಿ ಸರ್ಕಾರ ರಚಿಸಲು ನಮ್ಮನ್ನು ಸಂಪರ್ಕಿಸಿದ್ದರು ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಅಲ್ಲಿನ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡಿರಲಿಲ್ಲ. ಅಲ್ಲದೆ, ಚುನಾವಣಾ ಫಲಿತಾಂಶದ ನಂತರ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ಕಾರಣ ಸರ್ಕಾರ ರಚನೆ ವಿಳಂಬವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

ನಂತರ ತರಾತುರಿಯಲ್ಲಿ ಎನ್​ಸಿಪಿ ಪಕ್ಷದ ನಾಯಕ ಅಜಿತ್ ಪವಾರ್ ಜೊತೆಗೆ ಮೈತ್ರಿ ಸಾಧಿಸಿದ್ದ ಬಿಜೆಪಿ ಹೊಸ ಮೈತ್ರಿಯೊಂದಿಗೆ ಸರ್ಕಾರ ರಚನೆ ಮಾಡಿತ್ತು. ನವೆಂಬರ್ 23 ರಂದು ದೇವೇಂದ್ರ ಫಡ್ನವೀಸ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರ ಕೇವಲ 80 ಗಂಟೆಯಲ್ಲಿ ಉರುಳಿ ಬಿದ್ದಿತ್ತು.

ಈ ಕುರಿತು ಶನಿವಾರ ಮಹಾರಾಷ್ಟ್ರದ ಸುದ್ದಿ ವಾಹಿನಿಯೊಂದರಲ್ಲಿ ಸ್ಪಷ್ಟನೆ ನೀಡಿರುವ ದೇವೇಂದ್ರ ಫಡ್ನವೀಸ್, “ಬಿಜೆಪಿ ಜೊತೆಗೆ ಎನ್​ಸಿಪಿ ಮೈತ್ರಿಗೆ ಸಿದ್ದ. ಈ ಕುರಿತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಜೊತೆಗೆ ಚರ್ಚೆ ನಡೆಸಲಾಗಿದೆ. ಪಕ್ಷದ ಎಲ್ಲಾ 54 ಶಾಸಕರು ಬಿಜೆಪಿಯನ್ನು ಬೆಂಬಲಿಸಲು ಸಿದ್ದರಿದ್ದಾರೆ ಎಂದು ಆ ಪಕ್ಷದ ನಾಯಕ ಅಜಿತ್ ಪವಾರ್ ನಮಗೆ ಹೇಳಿದ್ದರು. ಕೆಲವು ಶಾಸಕರ ಜೊತೆಗೂ ನಮ್ಮನ್ನು ಮಾತನಾಡಿಸಿದ್ದರು,

ಅಲ್ಲದೆ, ಕಾಂಗ್ರೆಸ್, ಶಿವಸೇನೆ ಜೊತೆಗೆ ಎನ್​ಸಿಪಿ ಮೈತ್ರಿ ಸಾಧಿಸಿಕೊಂಡು ಮೂರು ಪಕ್ಷಗಳು ಒಟ್ಟಾಗಿ ಸರ್ಕಾರ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚಿಸಲು ಎನ್​ಸಿಪಿ ಪಕ್ಷ ಬಿಜೆಪಿ ಜೊತೆಗೆ ಕೈಜೋಡಿಸಲು ಸಿದ್ದವಾಗಿದೆ ಎಂದು ನಮ್ಮನ್ನು ನಂಬಿಸಿದ್ದರು. ಇದೇ ಕಾರಣಕ್ಕೆ ನಾವು ಅವರ ಜೊತೆಗೆ ಮೈತ್ರಿಗೆ ಸಿದ್ದವಾಗಿದ್ದೆವು. ಆದರೆ, ತೆರೆಯ ಹಿಂದೆ ಬೇರೆಯದೇ ಕಸರತ್ತು ನಡೆದಿದೆ" ಎಂದು ಬಿಜೆಪಿ-ಎನ್​ಸಿಪಿ ನಡುವಿನ ಮೈತ್ರಿಯ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಅವರಿಗೆ ಕ್ಲೀನ್​ಚಿಟ್ ನೀಡಿರುವ ಘಟನೆಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ನವೆಂಬರ್ 23 ರಂದುಬಿಜೆಪಿ-ಎನ್​ಸಿಪಿ ಮೈತ್ರಿ ಸಾಧಿಸಿ ದೇವೇಂದ್ರ ಫಡ್ನವೀಸ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಆಗಿಯೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಆಗಿಯೂ ಅಧಿಕಾರ ಸ್ವೀಕರಿಸಿದ ಮರು ದಿನವೇ ಅಜಿತ್ ಪವಾರ್ ಅವರ ಮೇಲಿದ್ದ ನೀರಾವರಿ ಹಗರಣದಲ್ಲಿ ಸಿಬಿಐ ಕ್ಲೀನ್​ಚಿಟ್ ನೀಡಿತ್ತು. ಆದರೆ, ಈ ಸರ್ಕಾರ ನವೆಂಬರ್ 27ಕ್ಕೆ ಮುರಿದು ಬಿದ್ದಿತ್ತು.ಅಲ್ಲದೆ, ಶೀವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಏರಿತ್ತು. ಶಿವಸೇನೆಯ ಉದ್ಧವ್ ಠಾಕ್ರೆ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ : ನಾಳೆ ಉಪ ಚುನಾವಣಾ ಫಲಿತಾಂಶ; ದೇವರ ಮೊರೆ ಹೋದ ಸಿಎಂ ಯಡಿಯೂರಪ್ಪ, ದೇವೇಗೌಡ
First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ