ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಇನ್ನೊಂದು ಕಡೆ ಪೆಟ್ರೋಲ್ ಬೆಲೆ ಗಗನಕ್ಕೆ ಮುಟ್ಟಿದೆ, ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಜನಸಾಮಾನ್ಯನಿಗೆ ಮತ್ತೊಂದು ಬಿಗ್ಶಾಕ್ ಕಾದಿದ್ದು, ಎರಡು ಪ್ರಮುಖ ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿವೆ.
ಮುಂದಿನ ತಿಂಗಳಿನಿಂದ ಮೊಬೈಲ್ ಫೋನ್ ರೀಚಾರ್ಜ್ಗಾಗಿ ಹೆಚ್ಚು ಹಣ ಖರ್ಚು ಮಾಡಲು ಸಿದ್ಧರಾಗ ಬೇಕಾದ ಪರಿಸ್ಥಿತಿ ಎದುರಾಗಿದೆ. ಏರ್ಟೆಲ್ ತನ್ನ ಬೇಸಕ್ ಮಾಸಿಕ ಪ್ರಿಪೇಯ್ಡ್ ಯೋಜನೆಯನ್ನು ಈಗಾಗಲೇ ರೂ. 49 ಯೋಜನೆಯನ್ನು ರದ್ದುಗೊಳಿಸಿದೆ. ಬೇಸ್ ಲೆವೆಲ್ ಪ್ಲಾನ್ ಈಗ ರೂ. 79 ರಿಂದ ಆರಂಭವಾಗಿದೆ, ಇದರಿಂದ ಏರ್ಟೆಲ್ ಗ್ರಾಹಕರಿಗೆ ಶೇ .60 ರಷ್ಟು ಹೆಚ್ಚಾಗಿದೆ. ಕಳೆದ ವಾರ, ಪ್ರಮುಖ ಟೆಲಿಕಾಂ ಆಪರೇಟರ್ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರು ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಬೇಸಿಕ್ ಪ್ಲಾನ್ ಯೋಜನೆಯ ದರವನ್ನು ಹೆಚ್ಚಿಸಿದೆ. ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವ ಯೋಜನೆಗಳಿಗೆ 30% ಸುಂಕವನ್ನು ಹೆಚ್ಚಿಸಲಾಗಿದೆ.
ವೊಡಾಫೋನ್ ಐಡಿಯಾ ಸಹ ಮೂಲ ಪ್ರಿಪೇಯ್ಡ್ ಯೋಜನೆಗಳನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ಉದ್ಯಮದ ತಜ್ಞರು ಹೇಳಿದ್ದಾರೆ. ಹಣದ ಕೊರತೆಯಿರುವ ಟೆಲಿಕಾಂ ಆಪರೇಟರ್ ಕೆಲವು ವಲಯಗಳಲ್ಲಿ ಮೂಲ ಮಟ್ಟದ ರೀಚಾರ್ಜ್ ಬೆಲೆಯನ್ನು ಬದಲಾಯಿಸಿದೆ. ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ, ವಿಐ ತನ್ನ 49 ರೂಪಾಯಿ ಯೋಜನೆಯನ್ನು 28 ದಿನಗಳ ಬದಲಿಗೆ 14 ದಿನಗಳವರೆಗೆ ಕಡಿಮೆ ಮಾಡಿದೆ. ವಿಐ ಗ್ರಾಹಕರು ಈಗ ಅಂದರೆ ಮೇಲೆ ಹೇಳಿದ ಪ್ರದೇಶಗಳಲ್ಲಿ 28 ದಿನಗಳ ಯೋಜನೆಗೆ 79 ರೂ. ಪಾವತಿಸಬೇಕಾಗುತ್ತದೆ. ಪ್ರಮುಖ ಟೆಲಿಕಾಂ ಆಪರೇಟರ್ ಶೀಘ್ರದಲ್ಲೇ ದೇಶಾದ್ಯಂತ ಪ್ರೀಪೇಯ್ಡ್ ಯೋಜನೆಗಳಲ್ಲಿನ ಬದಲಾವಣೆಗಳನ್ನು ವಿಸ್ತರಿಸಲಿದೆ. ಏರ್ಟೆಲ್ನ ನಡೆಯನ್ನು ಅನುಸರಿಸಿದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚೆಗೆ ತನ್ನ ಗ್ರಾಹಕರಿಗೆ ‘ಬಿಸಿನೆಸ್ ಪ್ಲಸ್’ ಪೋಸ್ಟ್ಪೇಯ್ಡ್ ಯೋಜನೆಗಳ ಅಡಿಯಲ್ಲಿ ಡೇಟಾ ಪ್ರಯೋಜನಗಳನ್ನು ಕಡಿಮೆ ಮಾಡಿದೆ.
adjusted gross revenue (ಎಜಿಆರ್) ಬಾಕಿಗಳನ್ನು ಪೂರೈಸಲು ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಸುಧಾರಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ವೊಡಾಫೋನ್ ಐಡಿಯಾ ಮತ್ತು ಏರ್ಟೆಲ್ ಮೊದಲ ಕಂತಿನ adjusted gross revenue ಕ್ರಮವಾಗಿ ಮಾರ್ಚ್ 22 ರಲ್ಲಿ ಕ್ರಮವಾಗಿ ಸುಮಾರು 9,000 ಕೋಟಿ ರೂ. ಮತ್ತು 4,100 ಕೋಟಿ ರೂ ಇದೆ ಎಂದು ಹೇಳಲಾಗುತ್ತಿದೆ.
ಈ ಹೆಚ್ಚಳದಿಂದ ಟೆಲಿಕಾಂ ದೈತ್ಯ ಕಂಪೆನಿಗಳು ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ (ARPU). "ಭಾರ್ತಿ ಏರ್ಟೆಲ್ ಸುಂಕ ದರವನ್ನು ಹೆಚ್ಚಿಸುತ್ತಿದ್ದು, ಇದು ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಹೋಲಿಸಿದರೆ ಶೇ 60 ರಷ್ಟು ಹೆಚ್ಚಿದೆ. ಇದು ಏರ್ಟೆಲ್ ಕಂಪೆನಿಯ ಸರಾಸರಿ ಆದಾಯವನ್ನು ಹೆಚ್ಚಿಸುತ್ತದೆ. ಭಾರ್ತಿ ಏರ್ಟೆಲ್ ಬಲವಾದ ಬ್ರ್ಯಾಂಡ್ ಆಗಿ ಕೆಳ ಹಾಗೂ ಉನ್ನತ ವರ್ಗ ಎರಡರಲ್ಲೂ ಮುನ್ನುಗ್ಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ತನ್ನ ಗ್ರಾಹಕರಿಂದ ಹೆಚ್ಚೆಚ್ಚು ಸರಾಸರಿ ಆದಾಯ ಪಡೆದುಕೊಳ್ಳಲು ಯೋಜನೆ ರೂಪಿಸಿದೆ. ”ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ನ ಎವಿಪಿ ಅಮರ್ಜೀತ್ ಮೌರ್ಯ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Tokyo Olympics:ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ ಬಾಕ್ಸರ್ ಲವ್ಲಿನಾ
ಟೆಲಿಕಾಂ ಆಪರೇಟರ್ನ ಅಂಕಿಅಂಶಗಳ ಪ್ರಕಾರ ಏರ್ಟೆಲ್ ಕಂಪೆನಿಯ ಒಟ್ಟು ಗ್ರಾಹಕರ ಸಂಖ್ಯೆ ಜೂನ್ನಲ್ಲಿ 348.29 ಮಿಲಿಯನ್ ಆಗಿದ್ದು. ವೋಡ್ಫೋನ್ ಐಡಿಯಾ ಮೇ 31 ರ ವೇಳೆಗೆ 277.62 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ