HOME » NEWS » National-international » AIRTEL PAYS RS 10000 CRORE TO GOVT TOWARDS AGR DUES AFTER SUPREME COURT RAP

ಸುಪ್ರೀಂ ತರಾಟೆ ಬೆನ್ನಲ್ಲೇ ರೂ. 10 ಸಾವಿರ ಕೋಟಿ ಬಾಕಿ ಹಣ ಟೆಲಿಕಾಂ ಇಲಾಖೆಗೆ ಸಲ್ಲಿಸಿದ ಏರ್​ಟೆಲ್​

ಒಂದು ಲೆಕ್ಕಾಚಾರದ ಪ್ರಕಾರ ಏರ್​ಟೆಲ್​ ಲೈಸೆನ್ಸ್​ ಫೀಸ್​, ಸ್ಪೆಕ್ಟ್ರಂ ಚಾರ್ಜ್​ ಸೇರಿದಂತೆ ಒಟ್ಟೂ ರೂ. 35,586 ಕೋಟಿ ಹಣ ಟೆಲಿಕಾಂ ಇಲಾಖೆಗೆ ಕಟ್ಟಬೇಕಿದೆ. ಈ ಹಣವನ್ನು ಶೀಘ್ರದಲ್ಲೇ ಕಟ್ಟುವ ಭರವಸೆಯನ್ನು ಏರ್​ಟೆಲ್​ ವ್ಯಕ್ತಪಡಿಸಿದೆ.

news18-kannada
Updated:February 17, 2020, 12:37 PM IST
ಸುಪ್ರೀಂ ತರಾಟೆ ಬೆನ್ನಲ್ಲೇ ರೂ. 10 ಸಾವಿರ ಕೋಟಿ ಬಾಕಿ ಹಣ ಟೆಲಿಕಾಂ ಇಲಾಖೆಗೆ ಸಲ್ಲಿಸಿದ ಏರ್​ಟೆಲ್​
ಏರ್​​ಟೆಲ್​​ ಕಂಪನಿ
  • Share this:
ನವದೆಹಲಿ: ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್​ ಟೆಲಿಕಾಂ ಸಂಸ್ಥೆಗಳಿಗೆ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತಿ ಏರ್​ಟೆಲ್​ ರೂ. 10,000 ಕೋಟಿ ಬಾಕಿ ಹಣವನ್ನು ಟೆಲಿಕಾಂ ಇಲಾಖೆಗೆ ಸಲ್ಲಿಸಿದೆ. ಜತೆಗೆ ಉಳಿದ ಹಣವನ್ನು ಇನ್ನು ಕೆಲವೇ ದಿನಗಳಲ್ಲಿ ಕಟ್ಟಲಾಗುವುದು ಎಂದು ತಿಳಿಸಿದೆ. 

ಏರ್​ಟೆಲ್​ ಪತ್ರಿಕಾ ಪ್ರಕಟಣೆಯಲ್ಲಿ ಸೆಲ್ಫ್​ ಅಸೆಸ್​ಮೆಂಟ್​ ಮಾಡಿದ ನಂತರ ಬಾಕಿ ಕಟ್ಟಬೇಕಾದ ಹಣ ಎಷ್ಟು ಎಂಬುದನ್ನು ತಿಳಿದು, ಸುಪ್ರೀಂ ಕೋರ್ಟ್​ ಮುಂದಿನ ವಿಚಾರಣೆಯೊಳಗೆ ಹಣ ಕಟ್ಟುವುದಾಗಿ ತಿಳಿಸಿದೆ.

"ಒಟ್ಟೂ ರೂ. 10,000 ಕೋಟಿ ಹಣವನ್ನು ಟೆಲಿಕಾಂ ಇಲಾಖೆಗೆ ಭಾರತಿ ಏರ್​ಟೆಲ್​, ಭಾರತಿ ಹೆಕ್ಸಕಾಮ್​ ಮತ್ತು ಟೆಲಿನಾರ್​ ಸಂಸ್ಥೆಯ ಪರವಾಗಿ ಪಾವತಿಸಲಾಗಿದೆ. ಸದ್ಯ ಸೆಲ್ಫ್​ ಅಸೆಸ್​ಮೆಂಟ್​ ನಡೆಯುತ್ತಿದ್ದು, ಅದು ಮುಗಿದ ಬೆನ್ನಲ್ಲೇ ಬಾಕಿ ಮೊತ್ತವನ್ನು ಪಾವತಿಸಲಾಗುವುದು," ಎಂದು ಏರ್​ಟೆಲ್​ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: BSNL: ಕೇವಲ 96 ರೂ. ರಿಚಾರ್ಜ್​ ಮಾಡಿದರೆ 10GB ಡೇಟಾ ಉಚಿತ!

ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್​ ಏರ್​ಟೆಲ್​ ಮತ್ತು ವೋಡಾಫೋನ್​ ಐಡಿಯಾ ಸಂಸ್ಥೆಗಳಿಗೆ ಖಡಕ್​ ಸೂಚನೆಯನ್ನು ನೀಡಿತ್ತು. ಪದೇಪದೇ ಸುಪ್ರೀಂ ಕೋರ್ಟ್​ ಆದೇಶಿಸಿದ ನಂತರವೂ ಬಾಕಿ ಹಣ ಪಾವತಿ ಮಾಡದ ಕಾರಣಕ್ಕೆ ಸಿಟ್ಟಾಗಿತ್ತು. ತಕ್ಷಣ ಹಣ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?

ಈ ಆದೇಶದ ಬೆನ್ನಲ್ಲೇ ಫೆಬ್ರವರಿ 20ರೊಳಗೆ 10,000 ಕೋಟಿ ರೂಪಾಯಿಗಳನ್ನು ನೀಡುತ್ತೇವೆ ಎಂದು ಏರ್​ಟೆಲ್​ ಟೆಲಿಕಾಂ ಇಲಾಖೆಗೆ ಹೇಳಿತ್ತು. ಉಳಿದ ಹಣವನ್ನು ಮಾರ್ಚ್​17ರೊಳಗೆ ಕಟ್ಟುವ ಭರವಸೆ ಏರ್​ಟೆಲ್​ ನೀಡಿತ್ತು. ಆದರೆ ಇಂದೇ ಏರ್​ಟೆಲ್​ ಹಣ ಪಾವತಿ ಮಾಡಿದೆ. ಒಂದು ಲೆಕ್ಕಾಚಾರದ ಪ್ರಕಾರ ಏರ್​ಟೆಲ್​ ಲೈಸೆನ್ಸ್​ ಫೀಸ್​, ಸ್ಪೆಕ್ಟ್ರಂ ಚಾರ್ಜ್​ ಸೇರಿದಂತೆ ಒಟ್ಟೂ ರೂ. 35,586 ಕೋಟಿ ಹಣ ಟೆಲಿಕಾಂ ಇಲಾಖೆಗೆ ಕಟ್ಟಬೇಕಿದೆ. 

 
First published: February 17, 2020, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories