Viral News: ಹೆಂಡತಿಗಾಗಿ ವಿಮಾನದಲ್ಲಿ 6 ಗಂಟೆ ನಿಂತುಕೊಂಡೇ ಪ್ರಯಾಣಿಸಿದ ಗಂಡ..!

Viral News: ಪ್ರೀತಿಯ ವಿಷಯ ಬಂದಾಗ ಹೆಂಡತಿಗಾಗಿ ತಾಜ್​ ಮಹಲ್​ ಕಟ್ಟಿಸಿದ ಷಹಜಹಾನ್​ನನ್ನೇ ಜನರು ಉದಾಹರಣೆ ಕೊಡುತ್ತಾರೆ. ತಾಜ್​ಮಹಲ್​ನ ಸೌಂದರ್ಯ ಹಾಗೂ ಷಹಜಹಾನ್​ ಪ್ರೀತಿಗೆ ಜನರು ಮರುಳಾದಂತೆ, ಈಗ ಹೆಂಡತಿಗಾಗಿ ಇಲ್ಲೊಬ್ಬ ಪತಿರಾಯನ ಪ್ರೀತಿ ಕಂಡ ಟ್ವೀಟಿಗರು ವಾಹ್​ ಎನ್ನುತ್ತಿದ್ದಾರೆ.

Anitha E | news18-kannada
Updated:September 9, 2019, 12:37 PM IST
Viral News: ಹೆಂಡತಿಗಾಗಿ ವಿಮಾನದಲ್ಲಿ 6 ಗಂಟೆ ನಿಂತುಕೊಂಡೇ ಪ್ರಯಾಣಿಸಿದ ಗಂಡ..!
ಹೆಂಡತಿಗಾಗಿ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಿದ ಗಂಡನ ಚಿತ್ರ
Anitha E | news18-kannada
Updated: September 9, 2019, 12:37 PM IST
ಷಹಜಹಾನ್​ ಪ್ರೀತಿಯ ಹೆಂಡತಿಗಾಗಿ ತಾಜ್​ಮಹಲ್​ ಅನ್ನೇ ಕಟ್ಟಿಸಿ ಇತಿಹಾಸವಾದ. ಇಲ್ಲೊಬ್ಬರು ಪತಿರಾಯ ಮಡದಿಗಾಗಿ ವಿಮಾನದಲ್ಲಿ 6 ಗಂಟೆಗಳ ಕಾಲ ನಿಂತುಕೊಂಡೇ ಪ್ರಯಾಣಿಸಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಸುದ್ದಿ ಹೇಳುವ ಫೋಟೋ ಈಗ ವೈರಲ್​ ಆಗಿದೆ. ಆ ಚಿತ್ರದಲ್ಲಿ ಗಂಡ ಹೆಂಡತಿಗಾಗಿ ವಿಮಾನದಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.

ಹೆಂಡತಿ ತನ್ನ ಹಾಗೂ ಪತಿಯ ಸೀಟ್ ಮೇಲೆ ಮಲಗಿದ್ದರೆ, ಆಕೆಯನ್ನು ನೋಡುತ್ತಾ ಪತಿ ಖುಷಿಯಿಂದಲೇ ನಿಂತಿದ್ದಾರೆ. ಈ ಚಿತ್ರವನ್ನು ಒಬ್ಬರು ಟ್ವೀಟ್​​ ಮಾಡಿದ್ದು, ಈಗ ಇದು ವೈರಲ್​ ಆಗುತ್ತಿದೆ.

This guy stood up the whole 6 hours so his wife could sleep. Now THAT is love. pic.twitter.com/Vk9clS9cCj



ಮಲಗಿದ್ದ ಹೆಂಡತಿಯನ್ನು ಎಬ್ಬಿಸಲು ಇಷ್ಟವಿಲ್ಲ ಗಂಡ ಸತತ 6 ಗಂಟೆಗಳ ಕಾಲ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಿದ್ದಾರೆ. ಇದು ಈಗ ವೈರಲ್​ ಆಗುತ್ತಿದೆ. ಇದಕ್ಕೆ 15 ಸಾವಿರ ಲೈಕ್ಸ್ ಸಿಕ್ಕಿದ್ದು, 3 ಸಾವಿರ ರೀಟ್ವೀಟ್​ ಮಾಡಲಾಗಿದೆ.
Loading...

ಈ ಟ್ವೀಟ್​ಗೆ ತುಂಬಾ ಜನ ಕಮೆಂಟ್​ ಮಾಡುತ್ತಿದ್ದು, ಅದರಲ್ಲಿ ಕೆಲವರು ಹೆಂಡತಿಗಾಗಿ 6 ಗಂಟೆಗಳ ಕಾಲ ನಿಂತಿದ್ದ ಗಂಡನದ್ದು ಪ್ರೀತಿ ಎಂದರೆ... ಹೀಗೆಲ್ಲ ಮಾಡಲು ನನ್ನ ಕೈಯಲ್ಲಿ ಆಗಲ್ಲಪ್ಪ.... ಎಂದೆಲ್ಲ ಕಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ನಾನಾದರೆ ಪ್ರೀತಿಯನ್ನು ಹೀಗೆಲ್ಲ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಅದಕ್ಕೂ ಬೇರೆ ದಾರಿ ಹುಡುಕಿಕೊಳ್ಳುತ್ತಿದ್ದೆ ಎಂದು ಮತ್ತೊಬ್ಬ ಟ್ವೀಟಿಗರು ಬರೆದಿದ್ದಾರೆ.





ಮತ್ತೊಬ್ಬರು ಗೃಹಿಣಿ, ಆಕೆ ಗಂಡನ ಭುಜದ ಮೇಲೆ ತಲೆ ಇಟ್ಟುಕೊಂಡು ಮಲಗಬಹುದಿತ್ತು.. ನನ್ನ ಗಂಡನೂ ಹೀಗೆ ಪ್ರೀತಿ ತೋರಿಸುತ್ತಾರೆ... ಆದರೆ ನಾನು ಮಾತ್ರ ನನ್ನ ಗಂಡನಿಗೆ ಹೀಗೆ ನಿಲ್ಲಿಸುವುದಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.





ಇನ್ನು ಈ ವಿಮಾನ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು, ಈ ದಂಪತಿ ಯಾರು, ಏನು ಎಂಬ ಯಾವ ಮಾಹಿತಿಯೂ ಈ ಟ್ವೀಟ್​ನಲ್ಲಿ ಇಲ್ಲ.

Sara Ali Khan: ಮೈಮಾಟದಿಂದಲೇ ಮತ್ತೇರಿಸುವ ನವಾಬನ ಮಗಳು ಸಾರಾ ಅಲಿಖಾನ್​ರ ಹಾಟ್​ ಚಿತ್ರಗಳು..!

First published:September 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...