ನೀವು ವಿಮಾನದಲ್ಲಿಯೇ (Airplane) ಹೆಚ್ಚಾಗಿ ಪ್ರಯಾಣಿಸುವವರಾದರೆ ಪ್ರಯಾಣಕ್ಕೆ ಸಂಬಂಧಿಸಿದ ಕೆಲವೊಂದು ನೀತಿ-ನಿಯಮಗಳನ್ನು ತಿಳಿದುಕೊಂಡಿರುವುದು ಅಗತ್ಯವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಫ್ಲೈಟ್‌ಗಳು (Flights) ಹೆಚ್ಚುವರಿ ಬುಕಿಂಗ್‌ಗಳಿಂದ ನಿಮ್ಮ ಬೋರ್ಡಿಂಗ್ ಅನ್ನು ನಿರಾಕರಿಸಿದಾಗ ಪ್ರಯಾಣಿಕರಿಗಾಗಿ ಬದಲಿ ವಿಮಾನದ ವ್ಯವಸ್ಥೆಯನ್ನು ಮಾಡಬೇಕು. ಇಲ್ಲವೇ ಪರಿಹಾರವಾಗಿ ಮೊತ್ತವನ್ನು ನೀಡಬೇಕು ಎಂಬುದು ನಾಗರಿಕ ವಿಮಾನಯಾನ (Aviation) ಮಹಾನಿರ್ದೇಶನಾಲಯ ತಿಳಿಸುತ್ತದೆ.
ಪ್ರಯಾಣಿಕರಿಗೆ ಪರಿಹಾರ ಧನ ನೀಡದೆ ಯಾಮಾರಿಸುತ್ತಿರುವ ವಿಮಾನ ಯಾನ ಸಂಸ್ಥೆಗಳು
ಆದರೆ ಇತ್ತೀಚಿನ ವರದಿಗಳ ಪ್ರಕಾರ ಹೆಚ್ಚಿನ ಸಂಸ್ಥೆಗಳು ಬೋರ್ಡಿಂಗ್ ನಿರಾಕರಣೆಯ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಉಳಿಸುತ್ತಿವೆ ಹಾಗೂ ಪ್ರಯಾಣಿಕರಿಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ ಎಂಬ ವರದಿ ಬಹಿರಂಗಗೊಂಡಿದೆ.
ಪ್ರಯಾಣಿಕರು ಬುಕ್ ಮಾಡಿರುವ ವಿಮಾನವು ಹೆಚ್ಚುವರಿ ಭರ್ತಿಗೊಂಡ ಸಂದರ್ಭದಲ್ಲಿ ಬದಲಿ ವಿಮಾನದ ವ್ಯವಸ್ಥೆಯನ್ನು ಮಾಡಬೇಕು. ಇಲ್ಲವೇ ಪ್ರಯಾಣಿಕರಿಗೆ ಪರಿಹಾರ ಮೊತ್ತವನ್ನು ನೀಡಬೇಕು ಎಂಬುದು DGCA (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಆದರೆ ಹೆಚ್ಚಿನ ವಿಮಾನ ಯಾನ ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಹಾಗೂ ಪ್ರಯಾಣಿಕರನ್ನು ಮೋಸಗೊಳಿಸುತ್ತಿದೆ ಎಂಬುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ ಹಣಗಳಿಸುವ ಆಫರ್, ವಂಚಕರ ಮಾತು ನಂಬಿ 24 ಲಕ್ಷ ಕಳೆದುಕೊಂಡ ಯುವತಿ!
ಫ್ಲೈಟ್ ಓವರ್‌ಲೋಡ್ ಆದ ಸಂದರ್ಭದಲ್ಲಿ ಸಂಸ್ಥೆಗಳೇ ಬದಲಿ ಪ್ರಯಾಣ ವ್ಯವಸ್ಥೆ ಮಾಡಬೇಕು
ಮಾನ್ಯವಾದ ಟಿಕೆಟ್ ಹೊಂದಿರುವ ಪ್ರಯಾಣಿಕರೊಬ್ಬರು ಫ್ಲೈಟ್ ಓವರ್ ಲೋಡ್ ಸಮಸ್ಯೆಗಳೊಗಾಗಿ ಅವರ ಪ್ರಯಾಣವನ್ನು ನಿರಾಕರಿಸಲಾಯಿತು. ಈ ಸಂದರ್ಭದಲ್ಲಿ ವಿಮಾನ ಯಾನ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ ಅಸಭ್ಯರಾಗಿ ವರ್ತಿಸಿದ ಸಿಬ್ಬಂದಿಗಳು ಫ್ಲೈಟ್‌ಗಳು ಪ್ರಯಾಣಿಕರ ಪ್ರಯಾಣವನ್ನು ನಿರಾಕರಿಸುವ ಹಕ್ಕನ್ನು ಹೊಂದಿವೆ ಎಂದು ಜೋರಾಗಿಯೇ ಉತ್ತರಿಸಿದರು ಎಂದು ತಮ್ಮ ಅನುಭವವನ್ನು ತಿಳಿಸಿದ್ದಾರೆ.
ಈ ಪ್ರಯಾಣಿಕರು ಪ್ರಯಾಣದ ಎರಡು ಗಂಟೆಯ ಮುನ್ನವೇ ಚೆಕ್ ಇನ್ ಕೌಂಟರ್‌ನಲ್ಲಿದ್ದರು ಅಂತೆಯೇ ಫ್ಲೈಟ್ ಓವರ್‌ಲೋಡ್ ಆಗಿರುವ ಯಾವುದೇ ದಾಖಲೆಗಳನ್ನು ವಿಮಾನ ಯಾನ ಸಂಸ್ಥೆಗಳು ಒದಗಿಸಿಲ್ಲ ಎಂದು ತಿಳಿಸಿದ್ದಾರೆ.
ಹಣವನ್ನು ಲೂಟಿ ಮಾಡುತ್ತಿರುವ ವಿಮಾನ ಯಾನ ಸಂಸ್ಥೆಗಳು
ಆ ಪ್ರಯಾಣಿಕರು ಇನ್ನೊಂದು ಫ್ಲೈಟ್‌ಗೆ ಟಿಕೆಟ್ ಬುಕ್ ಮಾಡಿದ ನಂತರವೇ ಅವರಿಗೆ ಪರಿಹಾರವಾಗಿ ರೂ 10,000 ವನ್ನು ಖಾತೆಗೆ ಮರಳಿಸಲಾಯಿತು ಆದರೆ ನಿಯಮಗಳ ಪ್ರಕಾರ ಅವರಿಗೆ ರೂ 20,000 ಗಳನ್ನು ಪರಿಹಾರವಾಗಿ ನೀಡಬೇಕಾಗಿತ್ತು ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ.
ಇದು ಒಬ್ಬ ಪ್ರಯಾಣಿಕರ ಕಥೆಯಲ್ಲ ಇಂತಹುದೇ ಸಮಸ್ಯೆಗೊಳಗಾದ ಹೆಚ್ಚಿನ ಪ್ರಯಾಣಿಕರು ಅದೆಷ್ಟೋ ಹಣವನ್ನು ಕಳೆದುಕೊಂಡಿದ್ದಾರೆ ಹಾಗೂ ವಿಮಾನ ಯಾನ ಸಂಸ್ಥೆಗಳು ಅದನ್ನೇ ಬಂಡವಾಳವಾಗಿಸಿಕೊಂಡು ಹಣವನ್ನು ಲೂಟಿ ಮಾಡಿವೆ.
ಪರಿಹಾರ ಧನ ನೀಡಿಲ್ಲವೆಂದು ಏರ್‌ಇಂಡಿಯಾಗೆ ದಂಡ ವಿಧಿಸಿದ DGCA
ಸ್ವತಃ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ವರದಿ ಮಾಡಿರುವ ಅಂಕಿ ಅಂಶಗಳ ಪ್ರಕಾರ ಬೋರ್ಡಿಂಗ್ ನಿರಾಕರಿಸಿದ ಅದೆಷ್ಟೋ ಪ್ರಯಾಣಿಕರಿಗೆ ವಿಮಾನ ಯಾನ ಸಂಸ್ಥೆಗಳು ಸರಿಯಾಗಿ ಪಾವತಿಸಿಲ್ಲ ಎಂಬುದು ಬಹಿರಂಗಗೊಂಡಿದೆ.
ಉದಾಹರಣೆಗೆ 2022 ರಲ್ಲಿ ಅತಿ ಹೆಚ್ಚಿನ ವಿಮಾನ ಯಾನ ನಿರಾಕರಣೆ ಪ್ರಕರಣಗಳು ವರದಿಯಾಗಿವೆ ಹಾಗೂ ಬರೋಬ್ಬರಿ 1,119 ಪ್ರಯಾಣಿಕರ ವಿಮಾನಗಳು ಆಫ್‌ಲೋಡ್ ಆಗಿವೆ ಎಂಬುದು ವರದಿಯಾಗಿದೆ.
ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಪ್ರಯಾಣಿಕರಿಗೆ ಮಾತ್ರವೇ ವಿಮಾನ ಯಾನ ಸಂಸ್ಥೆಗಳು ಪರಿಹಾರ ಶುಲ್ಕವನ್ನು ಒದಗಿಸಿವೆ ಇನ್ನು ಕೆಲವೊಂದು ಸಂಸ್ಥೆಗಳು ಒಬ್ಬೊಬ್ಬ ಪ್ರಯಾಣಿಕರಿಗೆ ಬರೇ ರೂ 250 ಅನ್ನು ನೀಡಿ ಕೈತೊಳೆದುಕೊಂಡಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆಫ್‌ಲೋಡೆಡ್ ಪ್ರಯಾಣಿಕರಿಗೆ ಪರಿಹಾರ ಧನ ನೀಡಿಲ್ಲವೆಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಏರ್ ಇಂಡಿಯಾಗೆ ಶುಲ್ಕ ವಿಧಿಸಿದೆ.
ಲಕ್ಷಗಟ್ಟಲೆ ಹಣ ಉಳಿಸುತ್ತಿರುವ ಸಂಸ್ಥೆಗಳು
ಹೆಚ್ಚಿನ ವಿಮಾನ ಯಾನ ಸಂಸ್ಥೆಗಳು ವಿಮಾನ ಯಾನ ನಿರ್ದೇಶನಾಲಯದ ನಿಯಮಗಳನ್ನು ಗಾಳಿಗೆ ತೂರಿ ಲಕ್ಷಗಟ್ಟಲೆ ಹಣವನ್ನು ಉಳಿಸುತ್ತಿವೆ ಎಂಬುದು ಬಹಿರಂಗಗೊಂಡಿದೆ.
ಸ್ಲೈಸ್‌ಜೆಟ್ ಮಾತ್ರವೇ ಇಂತಹ ಸಂದರ್ಭಗಳಲ್ಲಿ ಪರಿಹಾರ ಧನವನ್ನು ಒದಗಿಸಿದ್ದು ಈ ಬಗ್ಗೆ ಮಾಹಿತಿ ನೀಡಿದೆ. ಇನ್ನುಳಿದ ವಿಮಾನ ಯಾನ ಸಂಸ್ಥೆಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ